• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ವಾತಂತ್ರ್ಯೋತ್ಸವ: ಎಚ್ಡಿಕೆ ಆಹ್ವಾನಿಸಿದ ವಿಶೇಷ ಅತಿಥಿಗಳು ಇವರು!

By Nayana
|

ಬೆಂಗಳೂರು, ಆಗಸ್ಟ್ 14: ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಉತ್ತರ ಕರ್ನಾಟಕದ ಎಚ್ ಐವಿ ಪೀಡಿತರ ಮನೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಚ್ ಐವಿ ಪೀಡಿತರು, ಅನಾಥರು ಹಾಗೂ ಅಂಗವಿಕಲರನ್ನು ಆಹ್ವಾನಿಸುವ ಮೂಲಕ ಮತ್ತೊಮ್ಮೆ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ನಗರದ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಆ.15ರಂದು ನಡೆಯಲಿರುವ 72 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅನಾಥರು, ಎಚ್‌ಐವಿ ಪೀಡಿತರು, ಅಂಗವಿಕಲರಿಗೆ ಆಹ್ವಾನ ನೀಡಿದ್ದಾರೆ.ಮಾಣಿಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಅವರು ದಿನಾಚರಣೆಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಮಾಣಿಕ್‌ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ: ಪೊಲೀಸರ ಹದ್ದಿನ ಕಣ್ಣು

9 ಕೆಎಸ್‌ಆರ್‌ಪಿ, 05 ಕಾರ್‌ ತುಕರಿ, 3 ಅಗ್ನಿಶಾಮಕ, 2 ಆಂಬ್ಯೂಲೆನ್ಸ್‌, 2 ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಗಿದೆ. ಮೈದಾನದಲ್ಲಿ 50 ಸಿಸಿಟಿವಿ ಕ್ಯಾಮರಾಗಳು, 4 ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಸಲಾಗಿದೆ.

ಮಾಣಿಕ್‌ ಷಾ ಮೈದಾನದಲ್ಲಿ ಬಿಗಿ ಭದ್ರತೆ

ಮಾಣಿಕ್‌ ಷಾ ಮೈದಾನದಲ್ಲಿ ಬಿಗಿ ಭದ್ರತೆ

ಈ ಬಾರಿ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಹೆಚ್ಚು ಭದ್ರತೆಯನ್ನು ಕಲ್ಪಿಸಲಾಗಿದೆ. 9 ಮಂದಿ ಡಿಸಿಪಿ, 16 ಎಸಿಪಿ,46 ಇನ್‌ಸ್ಪೆಕ್ಟರ್‌ಗಳು, 102 ಪಿಎಸ್‌ಐ ಹಾಗೂ ಸಂಚಾರ ನಿರ್ವಹಣೆಗಾಗಿ ಇಬ್ಬರು ಡಿಸಿಪಿ, 7 ಎಸಿಪಿ ಸೇರಿ ಒಟ್ಟು 1,500ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. 50 ಸಿಸಿಟಿವಿ ಕ್ಯಾಮರಾಗಳು, 4 ಬ್ಯಾಗೇಜ್‌ ಸ್ಕ್ಯಾನರ್‌ಗಳು ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ

ಪಾರ್ಕಿಂಗ್‌ ನಿಷಿದ್ಧ ರಸ್ತೆಗಳಿವು

ಪಾರ್ಕಿಂಗ್‌ ನಿಷಿದ್ಧ ರಸ್ತೆಗಳಿವು

ಕಾಮರಾಜ ರಸ್ತೆಯಿಂದ ಕಾವೇರಿ ಆರ್ಸ್ಟ್‌ ಮತ್ತು ಕ್ರಾಫ್ಟ್ಸ್‌ ಜಂಕ್ಷನ್‌, , ಸೆಂಟ್ರಲ್‌ ಸ್ಟ್ರೀಟ್‌ ಮತ್ತು ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣದವರೆಗೆ, ಕಬ್ಬನ್‌ ರಸ್ತೆ ಮತ್ತು ಸಿಟಿಒ ವೃತ್ತದಿಂದ ಕೆಆರ್‌ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ ಹಾಗೂ ಎಂಜಿ ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್‌ ರಸ್ತೆಯಲ್ಲಿ ಬಿ.ಆರ್‌.ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ ವರೆಗೆಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ವಿಶೇಷ ಲೇಖನ : ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ?

ಮಾಣಿಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಮೊಬೈಲ್‌ಗೆ ಅವಕಾಶವಿಲ್ಲ

ಮಾಣಿಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಮೊಬೈಲ್‌ಗೆ ಅವಕಾಶವಿಲ್ಲ

ಭದ್ರತಾ ದೃಷ್ಟಿಯಿಂದ ಪರೇಡ್‌ಗೆ ಬರುವ ಎಲ್ಲಾ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್‌ ಫೋನ್‌, ಹೆಲ್ಮೆಟ್‌, ಕ್ಯಾಮರಾ, ರೇಡಿಯೋ, ಕೊಡೆ ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ, ಈ ವಸ್ತುಗಳು ಅವರ ಬಳಿ ಇದ್ದರೆಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಅವಕಾಶವಿರುವುದಿಲ್ಲ.

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ 11 ಸಾವಿರ ಆಸನ ವ್ಯವಸ್ಥೆ

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ 11 ಸಾವಿರ ಆಸನ ವ್ಯವಸ್ಥೆ

ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ 72 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಗಣ್ಯವ್ಯಕ್ತಿಗಳಿಗಾಗಿ 12೦೦ ಆಸನಗಳು, ಸ್ವತಂತ್ರ ಹೋರಾಟ , ರಕ್ಷಣಾ ಇಲಾಖೆಯವರಿಗಾಗಿ 75೦ ಆಸನ, ಇತರೆ ಇಲಾಖೆ , ನಿವೃತ್ತ ಸೇನಾಧಿಕಾರಿಗಳಿಗೆ 25೦೦ ಆಸನ, ಸಾರ್ವಜನಿಕರಿಗಾಗಿ 7೦೦೦ಆಸನ ಮೀಸಲಿರಿಸಲಾಗಿದೆ.

English summary
Chief minister H.D.Kumaraswamy has invited special guests to Independence day celebration at Maneck Shaw parade ground on August 15. Do you know that guests who are? Read this interesting story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X