ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡಿಯೋ ಬಿಡುಗಡೆ ಕೇಸ್ : ಎಚ್ಡಿಕೆ ವಿರುದ್ಧದ ದೂರು, ಕಾನೂನು ತಜ್ಞರ ಮೊರೆ

|
Google Oneindia Kannada News

Recommended Video

ಆಡಿಯೋ ಬಿಡುಗಡೆ ಕೇಸ್ : ಎಚ್ಡಿಕೆ ವಿರುದ್ಧದ ದೂರು, ಕಾನೂನು ತಜ್ಞರ ಮೊರೆ..! | Oneindia Kannada

ಬೆಂಗಳೂರು, ಫೆಬ್ರವರಿ 11: ಅಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಹುಚರ್ಚಿತವಾಗಿರುವ ಆಡಿಯೋ ಮುದ್ರಿಕೆ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಪರೇಷನ್ ಕಮಲದ ಆಡಿಯೋ : ಬಿಜೆಪಿ ನೀಡಿದ ಸ್ಪಷ್ಟನೆಆಪರೇಷನ್ ಕಮಲದ ಆಡಿಯೋ : ಬಿಜೆಪಿ ನೀಡಿದ ಸ್ಪಷ್ಟನೆ

ಸಿಎಂ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಇನ್ನು ಎಫ್ ಐಆರ್ ದಾಖಲಿಸಿಲ್ಲ. ಈ ಕೇಸಿನಲ್ಲಿ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದರ ಬಗ್ಗೆ, ಕಾನೂನು ಸಲಹೆಗಾರ ಗಣೇಶ್ ಬಾಬು ಅವರಿಗೆ ಪತ್ರ ಪೊಲೀಸರು ಪತ್ರ ಬರೆದಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಲಂಚದಾರೋಪ: ಸ್ಪೀಕರ್‌ಗೆ ಸಿಡಿ ನೀಡಿದ ಬಿಜೆಪಿಕುಮಾರಸ್ವಾಮಿ ವಿರುದ್ಧ ಲಂಚದಾರೋಪ: ಸ್ಪೀಕರ್‌ಗೆ ಸಿಡಿ ನೀಡಿದ ಬಿಜೆಪಿ

ಸಿಎಂ ಕುಮಾರಸ್ವಾಮಿ ಮತ್ತು ಶರಣಗೌಡ ವಿರುದ್ಧ ಬಿಎಸ್​ವೈ ಮಾಧ್ಯಮ ಸಲಹೆಗಾರ ಮರಂಕಲ್ ಅವರು ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದರು‌. ಈ ದೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ಸಿಡಿ ನಕಲಿಯಾಗಿದ್ದು, ಆಡಿಯೋ ಕಟ್ ಮಾಡಲಾಗಿದೆ ಉಳಿದ ಆಡಿಯೋ ತಿರುಚಲಾಗಿದೆ ಎಂದು ದೂರಿನಲ್ಲಿ‌ ಉಲ್ಲೇಖಿಸಿದ್ದಾರೆ.

HDK- BSY Audio Clip Row : Police seek Legal advice in the case

ಕುಮಾರಸ್ವಾಮಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ದೇವನದುರ್ಗ ಅತಿಥಿ ಗೃಹಕ್ಕೆ ಗುರುಮಠಕಲ್ ಶಾಸಕರ ಪುತ್ರ ಶರಣಗೌಡ ಹೋದಾಗ ಅಲ್ಲಿ ಪತ್ರಕರ್ತ ಮರಮಕಲ್ ಸೇರಿ ಹಲವರು ಇದ್ದರು ಎಂದು ಹೇಳಿದ್ದರು.

ಆಡಿಯೋ ಕ್ಲಿಪ್ ತನಿಖೆ: ಸದನದಲ್ಲಿ ಗದ್ದಲ, ಕಲಾಪ ಅರ್ಧಗಂಟೆ ಮುಂದೂಡಿಕೆ ಆಡಿಯೋ ಕ್ಲಿಪ್ ತನಿಖೆ: ಸದನದಲ್ಲಿ ಗದ್ದಲ, ಕಲಾಪ ಅರ್ಧಗಂಟೆ ಮುಂದೂಡಿಕೆ

ಸಿಎಂ ಬಿಡುಗಡೆ ಮಾಡಿರುವ ಆಡಿಯೋ ನಕಲಿಯಾಗಿದ್ದು, ತಮಗೆ ಬೇಕಾದಂತೆ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ, ಸಿಎಂ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ದೂರಿನಲ್ಲಿ ಮರಮ್​ಕಲ್ ಉಲ್ಲೇಖಿಸಿದ್ದಾರೆ.

English summary
HDK- BSY Audio Clip Row : Vidhana Soudha police seeks legal advice in the case. BJP has filed complaint against CM HD Kumaraswamy that audio is fabricated created and truncate one and it is a plot hatched by HDK and his associated to tarnish the reputation of BS Yeddyurappa, BJP claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X