ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂದಾಯ ಇಲಾಖೆ ಜನಸ್ನೇಹಿಯಾಗಲು ಕ್ರಮ: ಕುಮಾರಸ್ವಾಮಿ ಭರವಸೆ

|
Google Oneindia Kannada News

ಬೆಂಗಳೂರು, ನವೆಂಬರ್ 16: ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಅಭಿವೃದ್ಧಿಪಡಿಸಿರುವ ಕಾವೇರಿ ಆನ್‌ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶುಕ್ರವಾರ ಚಾಲನೆ ನೀಡಿದರು.

ಆಸ್ತಿ ನೋಂದಣಿ ಇನ್ನು 'ಕಾವೇರಿ' ಮೂಲಕ ಆನ್‌ಲೈನ್‌ ನಲ್ಲೇ ಸಾಧ್ಯ ಆಸ್ತಿ ನೋಂದಣಿ ಇನ್ನು 'ಕಾವೇರಿ' ಮೂಲಕ ಆನ್‌ಲೈನ್‌ ನಲ್ಲೇ ಸಾಧ್ಯ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಸೇವೆಗಳನ್ನು ಪರಿಚಯಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ರೈತರ ಸಾಲಮನ್ನಾ ಯೋಜನೆಯ ಮಾಹಿತಿಯನ್ನೂ ಕೂಡ ಆನ್‌ಲೈನ್‌ನಲ್ಲೇ ಕ್ರೋಢೀಕರಿಸಲಾಗುತ್ತಿದೆ. ಇದರಿಂದಾಗಿ ಈ ಯೋಜನೆಯ ಫಲ ನೇರವಾಗಿ ಅರ್ಹರಿಗೇ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

HDK assures revenue department will be more public friendly

ಸಮಾರಂಭದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ಕಂದಾಯ ಇಲಾಖೆ ಜನರಿಗೆ ಅತ್ಯಂತ ಸಮೀಪವಾದ ಇಲಾಖೆ. ನಾಗರಿಕ ಕೇಂದ್ರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಆಡಳಿತದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

English summary
Chief minister H.D.Kumaraswamy has assured that since the most nearest and useful service in revenue department it will be more public friendly soon in the state with impressed services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X