ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದೃಷ್ಟದ ಐಶಾರಾಮಿ ರೂಮ್ ಖಾಲಿ ಮಾಡಿದ ಕುಮಾರಸ್ವಾಮಿ

|
Google Oneindia Kannada News

Recommended Video

ಅಧಿಕಾರದಿಂದಿಳಿದ 22 ದಿನದ ಮೇಲೆ ಎಚ್‍ಡಿಕೆಯಿಂದ ಮಹತ್ವದ ನಿರ್ಧಾರ/ H D kumaraswamy.

ಬೆಂಗಳೂರು, ಆಗಸ್ಟ್ 16: ಕುಮಾರಸ್ವಾಮಿ ಅವರ ಅದೃಷ್ಟದ ತಾಜ್ ವೆಸ್ಟ್‌ ಎಂಡ್‌ಹೊಟೆಲ್‌ನ ಐಶಾರಾಮಿ ರೂಂ ಅನ್ನು ಅವರು ಖಾಲಿ ಮಾಡಿದ್ದಾರೆ.

ಸಿಎಂ ಆಗುವುದಕ್ಕೆ ಮುಂಚಿನಿಂದಲೂ ತಾಜ್ ವೆಸ್ಟ್‌ ಎಂಡ್‌ನ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ನಿವಾಸವನ್ನು ಬಿಟ್ಟು ತಾಜ್ ವೆಸ್ಟ್‌ ಎಂಡ್‌ನ ಆ ಹೊಟೆಲ್‌ನಲ್ಲಿಯೇ ವಾಸ್ತವ್ಯ ಹೂಡಿದ್ದರು. ಅದು ತಮ್ಮ ಅದೃಷ್ಟದ ರೂಂ ಎಂಬುದು ಅವರ ನಂಬಿಕೆ ಆಗಿತ್ತು. ಆದರೆ ಈಗ ಅದನ್ನು ಖಾಲಿ ಮಾಡಿದ್ದಾರೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣ: ಸಂಕಷ್ಟದಲ್ಲಿ ಕುಮಾರಸ್ವಾಮಿಟೆಲಿಫೋನ್ ಕದ್ದಾಲಿಕೆ ಪ್ರಕರಣ: ಸಂಕಷ್ಟದಲ್ಲಿ ಕುಮಾರಸ್ವಾಮಿ

ತಾಜ್ ವೆಸ್ಟ್‌ ಎಂಡ್‌ ಹೊಟೆಲ್‌ ನಲ್ಲಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಐಶಾರಾಮಿ ರೂಂ ನಲ್ಲಿ ಉಳಿದುಕೊಂಡು ಆಡಳಿತ ನಡೆಸುವ ಕುಮಾರಸ್ವಾಮಿ ವೈಖರಿಯನ್ನು ಟೀಕಿಸಿತ್ತು ಬಿಜೆಪಿ. ಆದರೆ ಇದಾವುದಕ್ಕೂ ತಲೆಕೆಡೆಸಿಕೊಳ್ಳದೆ ಕುಮಾರಸ್ವಾಮಿ ಅವರು ರೂಂ ನಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು.

HD Kumaraswamy vacates his lucky room in Taj west end hotel

ಈ ಬಗ್ಗೆ ಸದನದಲ್ಲಿಯೇ ಒಮ್ಮೆ ಸ್ಪಷ್ಟನೆ ಕೊಟ್ಟಿದ್ದ ಕುಮಾರಸ್ವಾಮಿ, 'ನಾನು 2018ರ ಚುನಾವಣಾ ಫಲಿತಾಂಶ ಅದೇ ರೂಂ ನಲ್ಲಿ ಕೂತು ನೋಡಿದ್ದೆ. ಅಲ್ಲಿ ಕೂತಿದ್ದಾಗಲೇ ಗುಲಾಂ ನಬಿ ಆಜಾದ್ ಅವರ ಕರೆ ಬಂದು ಸಿಎಂ ಮಾಡುವ ಆಫರ್ ಬಂದಿತ್ತು. ಹಾಗಾಗಿ ಆ ರೂಂ ನನಗೆ ಲಕ್ಕಿ ಎಂಬ ಕಾರಣಕ್ಕೆ ಆ ರೂಂ ಅನ್ನು ಇಟ್ಟುಕೊಂಡಿದ್ದೇನೆ, ಅಲ್ಲಿಗೆ ಯಾವ ಅಧಿಕಾರಿಗಳನ್ನೂ ಕರೆಸಿಕೊಂಡಿಲ್ಲ' ಎಂದು ಹೇಳಿದ್ದರು.

ಅಂದು ಎಚ್ಡಿಕೆಯದ್ದು ಅಂದು ಎಚ್ಡಿಕೆಯದ್ದು "ಅಣ್ತಮ್ಮ ಬಜೆಟ್" ಅಂದಿದ್ದ ಬಿಎಸ್ವೈ ಈಗ ಮಾಡುತ್ತಿರುವುದೇನು?

ಒಂದೂವರೆ ವರ್ಷಕ್ಕೂ ಆ ರೂಂ ನಲ್ಲಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಇದೀಗ ರೂಂ ಅನ್ನು ತೆರವು ಮಾಡಿದ್ದಾರೆ. ಅಧಿಕಾರ ಕಳೆದುಕೊಂಡ 22 ದಿನಗಳ ಬಳಿಕ ಅವರು ರೂಂ ಖಾಲಿ ಮಾಡಿದ್ದಾರೆ. ಕೆಲವು ದಿನಗಳಿಂದಲೂ ಅವರು ಜೆಪಿ ನಗರದ ತಮ್ಮ ನಿವಾಸದಿಂದಲೇ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ.

English summary
Former CM HD Kumaraswamy vacates his lucky room in Taj west end hotel. He was staying in that room from last one and half year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X