ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನತಾ ಕರ್ಫ್ಯೂ ಪಾಲಿಸಿದವರ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕೊರೊನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ನೀಡಿದ್ದ ಜನತಾ ಕರ್ಫ್ಯೂ ಕರೆಗೆ ಭಾರತ ಜನತೆ ಅದ್ಬುತ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಜನತಾ ಕರ್ಫ್ಯೂ ಪಾಲಿಸಿದ ಜನತೆಗೆ ಟ್ವಿಟ್ಟರ್ ಖಾತೆಯ ಮೂಲಕ ಧನ್ಯವಾದ ತಿಳಿಸಿದ್ದಾರೆ. ''ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ 'ಜನತಾ ಕರ್ಫ್ಯೂ'ಗೆ ಬೆಂಬಲಿಸಿದ ಸಮಸ್ತ ನಾಗರಿಕರಿಗೂ ಅಭಿನಂದನೆಗಳು. ಕರೋನಾ ವೈರಸ್ ಸೋಂಕು ತಗುಲದಂತೆ ಇನ್ನು ಕೆಲ ವಾರಗಳ ಕಾಲ ಸಂಯಮ ಕಾಯ್ದುಕೊಳ್ಳುವ ಅಗತ್ಯವಿದೆ.'' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Janta Curfew Live Updates: ಜನತಾ ಕರ್ಫ್ಯೂ: ಜಾಗಟೆ, ಗಂಟೆ, ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಭಾರತJanta Curfew Live Updates: ಜನತಾ ಕರ್ಫ್ಯೂ: ಜಾಗಟೆ, ಗಂಟೆ, ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಭಾರತ

ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತೋರುತ್ತಿರುವ ಅತೀವ ಜನಪರ ಕಾಳಜಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ.

HD Kumaraswamy Thanked Who Supported Janata Curfew

ಜನತಾ ಕರ್ಫ್ಯೂ ಇಂದು ರಾತ್ರಿ 9 ಗಂಟೆಯವರೆಗೆ ಇರಲಿದೆ. ಇಂದು 5 ಗಂಟೆಗೆ ಸರಿಯಾಗಿ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಡಿದ ಸಮೂಹಕ್ಕೆ ಹೃದಯಪೂರ್ವಕ ಧನ್ಯವಾದವನ್ನು ಜನರು ತಿಳಿಸಿದರು.

ಅಂದಹಾಗೆ, ಕರ್ನಾಟಕ ರಾಜ್ಯದಲ್ಲಿ ‌ನಾಳೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದು ಮಾಡಲಾಗಿದೆ. ಎಸಿ ಬಸ್ ಸೇವೆ 31 ರವರೆಗೆ ಇಲ್ಲರುವುದಿಲ್ಲ. ಇಂದು ರಾತ್ರಿ 9 ರಿಂದ 11 ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ.

English summary
Former Chief Minister HD Kumaraswamy thanked who supported janata curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X