ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸಹಾಯಕರು ಅಧಿಕಾರದಲ್ಲಿದ್ದರೇನು ಪ್ರಯೋಜನ?; ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಮಾರ್ಚ್ 12: ''ಇಂದು ಭೂ ಮಾಫಿಯಾದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವವರು ಯಾರು? ಪಕ್ಷಗಳ ಹಿಂಬಾಲಕರು, ಬಾಲಬಡುಕರೇ ಅಲ್ಲವೇ? ಅವರಿಗೆ ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ ನಿಯಂತ್ರಿಸಲಾಗುತ್ತಿಲ್ಲ ಎಂದರೆ ಏನರ್ಥ'' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಭೂ ಮಾಫಿಯಾದಲ್ಲಿ ಅಕ್ರಮ ನಡೆಸುತ್ತಿರುವ ಅಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಗುರುವಾರ ಕಂದಾಯ ಸಚಿವರು ಹೇಳಿಕೆ ನೀಡಿದ್ದು, ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಭೂ ಮಾಫಿಯಾ ದಂಧೆ ಬೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ಕಾರಣ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದಾರೆ. ಮುಂದೆ ಓದಿ...

ಒಕ್ಕಲಿಗರಿಗೆ 500 ಕೋಟಿಯಲ್ಲ, 5 ರೂಪಾಯಿ ಕೂಡ ಸಿಗಲ್ಲ: ಎಚ್‌ಡಿಕೆ ವ್ಯಂಗ್ಯ ಒಕ್ಕಲಿಗರಿಗೆ 500 ಕೋಟಿಯಲ್ಲ, 5 ರೂಪಾಯಿ ಕೂಡ ಸಿಗಲ್ಲ: ಎಚ್‌ಡಿಕೆ ವ್ಯಂಗ್ಯ

"ಭೂಮಿ ನುಂಗುವ ದಂಧೆ ಬೆಳೆಯಲು ಎರಡು ಪಕ್ಷಗಳ ಪಾಲು ಸಮಾನ"

ಭೂಮಾಫಿಯಾದಲ್ಲಿ ತೊಡಗಿಕೊಂಡಿರುವವರಿಗೆ ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ 'ನಿಯಂತ್ರಿಸಲಾಗುತ್ತಿಲ್ಲ' ಎಂದು ಹೇಳಿಕೊಳ್ಳುವುದು ಹೊಣೆಗೇಡಿತನ. ಇಂಥ ಮಾತುಗಳು ಭೂ ಮಾಫಿಯಾಗೆ ಪ್ರೇರಕ. ಭೂಮಿ ನುಂಗುವ ದಂಧೆ ಬೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ಪಾಲು ಸಮಾನ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಭೂಮಿ ಉಳಿಸಲಾಗದೇ ಅಸಹಾಯಕತೆ ತೋರುವವರು ಅಧಿಕಾರದಲ್ಲಿ ಇದ್ದರೇನು ಉಪಯೋಗ ಎಂದು ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ನೈತಿಕ ಬೆಂಬಲ ನೀಡಿ ಎಚ್‌ಡಿಕೆ ಟ್ವೀಟ್ಮಮತಾ ಬ್ಯಾನರ್ಜಿಗೆ ನೈತಿಕ ಬೆಂಬಲ ನೀಡಿ ಎಚ್‌ಡಿಕೆ ಟ್ವೀಟ್

"ಕಾರಣವನ್ನೂ ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು"

ಕಂದಾಯ ಸಚಿವರ ಉತ್ತರವನ್ನು ಗಮನಿಸಿದೆ. ಭೂ ಮಾಫಿಯಾ ವಿರುದ್ಧ ವಿರೋಧ ಪಕ್ಷದಲ್ಲಿದ್ದಾಗ ಮಾತನಾಡಿದ ನಮಗೇ ಈಗ ಕೈಕಟ್ಟಿಹಾಕಿದಂತಾಗಿದೆ. ಅದನ್ನು ನಿಯಂತ್ರಿಸುವುದು ಅಸಾಧ್ಯ' ಎಂದು ಸಚಿವರು ಹೇಳಿದ್ದಾರೆ. ವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಮಾತನಾಡಿರುವ ಸಚಿವರು, ಅದರ ಹಿಂದಿನ ಕಾರಣವನ್ನೂ ಪ್ರಸ್ತಾಪಿಸಿದಿದ್ದರೆ ಚೆನ್ನಾಗಿರುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ.

'ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವರು ಮತ್ತೆ ಅದೇ ಸ್ಥಾನದಲ್ಲಿ ಬಂದು ಕೂರುತ್ತಾರೆ,' ಎಂದೂ ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಈ ಮಟ್ಟಿನ ಭಂಡತನ ತೋರಲು ರಾಜಕಾರಣಿಗಳು ಹುಟ್ಟುಹಾಕಿದ ವಿಷಮ ವ್ಯವಸ್ಥೆಯೇ ಕಾರಣ. ಸರ್ಕಾರ ಅಸಹಾಯಕತೆ ಪ್ರದರ್ಶಿಸಿ, ದುರ್ವ್ಯವಸ್ಥೆ ಪ್ರೋತ್ಸಾಹಿಸದೇ ಶುದ್ಧೀಕರಣ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

"ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕಷ್ಟೆ"

ಒಂದು ಅವ್ಯವಸ್ಥೆ ವಿರುದ್ಧ ಸರ್ಕಾರ ಕಠಿಣ ನೀತಿ ರೂಪಿಸಿ ಅದನ್ನು ಜಾರಿ ಮಾಡಲು ಹೊರಟು ನಿಂತರೆ ಯಾವ ಮಾಫಿಯಾ ಏನು ಮಾಡಲು ಸಾಧ್ಯ? ಇದಕ್ಕೆ ಇಚ್ಛಾಶಕ್ತಿ ಬೇಕಷ್ಟೆ. ಸ್ವಹಿತಾಸಕ್ತಿ ಹೊಂದಿರುವವರು ಮಾತ್ರ ವ್ಯವಸ್ಥೆ ಸರಿಪಡಿಸಲಾಗದ ಮಾತಾಡುತ್ತಾರೆ. ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದೆ ಅಸಹಾಯಕತೆ ತೋರುವವರು ಅಧಿಕಾರದಲ್ಲಿದ್ದು ಉಪಯೋಗವೇನು? ಎಂದು ಪ್ರಶ್ನಿಸಿದ್ದಾರೆ.

Recommended Video

ಗವಿ ಗಂಗಾಧರೇಶ್ವರನ ದರ್ಶನ ಪಡೆದ ಡಿಕೆಶಿ..! | Oneindia Kannada
 ಕಂದಾಯ ಸಚಿವ ಅಶೋಕ್ ಹೇಳಿದ್ದೇನು?

ಕಂದಾಯ ಸಚಿವ ಅಶೋಕ್ ಹೇಳಿದ್ದೇನು?

ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಸಚಿವ ಆರ್ ಅಶೋಕ್, "ಅಕ್ರಮವಾಗಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಿದರೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಕ್ರಮ ತಪ್ಪಿಸಲು ವರ್ಗಾವಣೆ ಮಾಡಿದರೆ, ತಕ್ಷಣವೇ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದು ಅಲ್ಲೇ ಬಂದು ಕೂರುತ್ತಾರೆ. ವಿರೋಧ ಪಕ್ಷದಲ್ಲಿದ್ದಾಗ ನಾವು ಈ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದೇವೆ. ಈಗ ಕೈಕಟ್ಟಿದ ಹಾಗೆ ಆಗಿದೆ" ಎಂದು ಹೇಳಿದ್ದರು.

English summary
Former CM and JDS Leader HD Kumaraswamy has reacted to R Ashok statement on controlling land mafia,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X