ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಹಿಂದಿ ಹೇರಿಕೆ ಕುರಿತು ಸಿಎಂ ಕುಮಾರಸ್ವಾಮಿ ಏನಂತಾರೆ?

|
Google Oneindia Kannada News

Recommended Video

ತ್ರಿಭಾಷಾ ಸೂತ್ರದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ಜೂನ್ 3: ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ತಾವು ಈ ಕರಡು ನೀತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.

ಕನ್ನಡ ಪರ ಸಂಘಟನೆಗಳಂತೂ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸುತ್ತಿವೆ. ಕರ್ನಾಟಕದಲ್ಲಿರುವ ಹಿಂದಿ ಭಾಷಿಗರು ಕನ್ನಡ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ ಎನ್ನುವಾಗ ಕನ್ನಡಿಗರು ಹಿಂದಿಯನ್ನು ಯಾಕೆ ಕಲಿಯಬೇಕು ಎಂದು ಅನೇಕ ಟ್ವೀಟಿಗರು ಪ್ರಶ್ನೆ ಮಾಡಿದ್ದಾರೆ. #StopHindiImposition ಹ್ಯಾಷ್​ಟ್ಯಾಗ್ ಇದೀಗ ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಗಿದೆ.

ಹಿಂದಿ ಹೇರಿಕೆ ಸುಳ್ಳೇ ಸುಳ್ಳು: ತಮಿಳಿನಲ್ಲಿ ನಿರ್ಮಲಾ ಸೀತಾರಾಮನ್ ಟ್ವೀಟ್ ಹಿಂದಿ ಹೇರಿಕೆ ಸುಳ್ಳೇ ಸುಳ್ಳು: ತಮಿಳಿನಲ್ಲಿ ನಿರ್ಮಲಾ ಸೀತಾರಾಮನ್ ಟ್ವೀಟ್

ಹಿಂದಿ ಬಳಸುವುದರಲ್ಲಿ ತಪ್ಪೇನಿದೆ ಎಂದು ವಾದಿಸುವವರು, ಮರಾಠಿ, ಕನ್ನಡ, ಗುಜರಾತಿ, ತಮಿಳು ಮೊದಲಾದ ಭಾಷೆಗಳನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಬಳಸುವುದರಲ್ಲಿ ತಪ್ಪೇನಿದೆ ಎಂದು ಯಾಕೆ ಯಾವತ್ತೂ ಕೇಳುವುದಿಲ್ಲ?

ಹಿಂದಿ ಇಲ್ಲದೆಯೇ ದಕ್ಷಿಣ ರಾಜ್ಯಗಳು ಸಾಕಷ್ಟು ಪ್ರಗತಿ ಹೊಂದಿವೆ. ಹೀಗಿರುವಾಗ ದಕ್ಷಿಣದಲ್ಲಿ ಹಿಂದಿಯ ಅಗತ್ಯವೇನಿದೆ?

 HD kumaraswamy opposes three language policy

ಹಿಂದಿ ಬಾರದ ಕನ್ನಡಿಗರು ಸ್ವಂತ ನೆಲದಲ್ಲಿ ಬ್ಯಾಂಕಿಂಗ್ ಸೇವೆ ಇತ್ಯಾದಿಗಳನ್ನು ಪಡೆಯಲು ಒದ್ದಾಡುವಂಥ ಪರಿಸ್ಥಿತಿ ಬಂದಿದೆ ಇದಕ್ಕೆಲ್ಲ ಹಿಂದಿ ಹೇರಿಕೆಯೇ ಕಾರಣ ಎಂದಿದ್ದಾರೆ.

ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ

ಹಿಂದಿ ಹೇರಿಕೆಗೆ ಕನ್ನಡಪರ ಸಂಘಟನೆಗಳ ವಿರೋಧ: ಕೇಂದ್ರದ ಶಿಕ್ಷಣ ಕರಡು ನೀತಿ 2019ರ ವಿರುದ್ಧ ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಿವೆ. ಪ್ರತಿಭಟನೆಯನ್ನೂ ಕೂಡ ನಡೆಸುತ್ತಿವೆ. ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಹೊರತುಪಡಿಸಿ ಅದರ ಜೊತೆಗೆ ಶಾಲೆಗಳಲ್ಲಿ ಹಿಂದಿಯನ್ನೂ ಕಲಿಯಬೇಕು ಎಂಬ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಇಡೀ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕನ್ನಡ ಗ್ರಾಹಕರ ಕೂಟದ ಸದಸ್ಯ ಗಣೇಶ್ ಚೇತನ್ ಹೇಳಿದ್ದಾರೆ.

English summary
Joining the chorus against a proposal for teaching Hindi in non-Hindi speaking states, Karnataka Chief Minister H D Kumaraswamy Sunday said one language should not be imposed on others in the name of the three-language formula.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X