• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಯವ ಮತ್ತು ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಳ: ಕುಮಾರಸ್ವಾಮಿ

|

ಬೆಂಗಳೂರು, ಜನವರಿ 18: ಸಾವಯವ ಮತ್ತು ಸಿರಿಧಾನ್ಯಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ಜನ ಇದನ್ನು ಹೆಚ್ಚು ಬಳಸಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶುಕ್ರವಾರ ಸಾವಯವ ಮತ್ತು ಸಿರಿಧಾನ್ಯಗಳು-2019 ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು ಉದ್ಫಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆ, ಇಂದಿರಾ ಕ್ಯಾಂಟೀನ್‌ನಲ್ಲಿ ಸಿರಿಧಾನ್ಯ ನೀಡಲು ಚಿಂತನೆ: ಪರಮೇಶ್ವರ

ಆಹಾರ ಸುರಕ್ಷತೆ ಕಾಯ್ದೆಯಡಿ ಸಿರಿಧಾನ್ಯವನ್ನು ಸ್ವಾಭಾವಿಕ ಬೆಳೆ ಎಂದು ಗುರುತಿಸಲಾಗಿದೆ. ಜನರಿಗೆ ಸಿರಿಧಾನ್ಯಗಳ ಬಳಕೆ ಕುರಿತು ಅರಿವು ಮೂಡಿಸಲು ರೈತರು, ಕೈಗಾರಿಕೋದ್ಯಮಿಗಳನ್ನು ಒಂದೇ ಸೂರಿನಡಿ ತಂದು ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದರು.

ಸಿರಿಧಾನ್ಯಗಳ ಬಳಕೆಯಿಂದ ನಮ್ಮ ಆರೋಗ್ಯ ಸಹ ಸುಧಾರಣೆಯಾಗಲಿದೆ. ಮಕ್ಕಳ ಮಧ್ಯಾಹ್ನದ ಬಿಸಿಯೂಟ ಹಾಗೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಹ ಸಿರಿಧಾನ್ಯಗಳನ್ನು ಬಳಸಲು ಸರ್ಕಾರ ಚಿಂತನೆ ನಡೆಸಿದೆ. ಇಲ್ಲಿ ರಾಜ್ಯ, ರಾಷ್ಟ್ರ ಹಾಗೂ ವಿದೇಶ ಮಟ್ಟದಲ್ಲಿ ಉದ್ದಿಮೆದಾರರು ಬಂದಿರುವುದು ಸಂತಸ ತಂದಿದೆ. ಇಂತಹ ದೊಡ್ಡ ಮಟ್ಟದ ಸಿರಿಧಾನ್ಯಗಳ ಮೇಳ ಇದೇ ಪ್ರಥಮ ಎಂದು ಹೇಳಿದರು.

ನಮ್ಮ ವಿಕೃತಿಗೆ ಬಲಿಪಶುಗಳಾದ ಸಿರಿಧಾನ್ಯ ಮತ್ತು ಸಿರಿಗನ್ನಡ

ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್, ಈ ಸಿರಿಧಾನ್ಯಗಳ ಮೇಳವನ್ನು 3ನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಇದರಿಂದ ಉತ್ತಮ ಪ್ರತಿಕ್ರಿಯೆ ಬಂದಿವೆ. ಜನರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಹಾಗೂ ಇದರಿಂದ ಆಗುವ ಪ್ರಯೋಜನದ ಬಗ್ಗೆ ಸಹ ಮಾಹಿತಿ ನೀಡಲಾಗುತ್ತಿದೆ ಎಂದರು.

ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಮಾತನಾಡಿ, ಸಿರಿಧಾನ್ಯಗಳಿಂದ ಪೌಷ್ಟಿಕತೆ ದೊರೆಯಲಿದ್ದು, ದೇಹವನ್ನು ತಂಪಾಗಿ ಇರುವಂತೆ ಮಾಡುತ್ತದೆ. ಇದರಿಂದ ಮಧುಮೇಹ ಮುಂತಾದ ಕಾಯಿಲೆಗಳನ್ನು ತಡೆಯಬಹುದು. ಈ ವಾಣಿಜ್ಯ ಮೇಳದಲ್ಲಿ ಇತರ ರಾಜ್ಯ, ವಿದೇಶಗಳಿಂದಲೂ ಪ್ರತಿನಿಧಿಗಳು ಭಾವಹಿಸಿ ಮೇಳಕ್ಕೆ ಮೆರಗು ನೀಡಿದ್ದಾರೆ. ಈ ಮೇಳ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 400 ರೂ ಹೆಚ್ಚಿನ ಮಳಿಗೆಗಳಲ್ಲಿ ಸಿರಿಧಾನ್ಯಗಳು ಹಾಗೂ ಅದರ ಉತ್ಪನ್ನಗಳು ಜನರನ್ನು ಕೈ ಬೀಸಿ ಕರೆಯುತ್ತಿತ್ತು. ಸಿರಿಧಾನ್ಯಗಳಿಂದ ತಯಾರಾದ ಖಾದ್ಯಗಳನ್ನು ಸಹ ಜನರು ಸವಿದರು.

ಈ ಮೇಳವು ಜನವರಿ 18 ರಿಂದ 20 ರವರೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿದೆ.

ಉದ್ಫಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಸಿ. ಮನುಗುಳಿ, ಕೃಷ್ಣಬೈರೇಗೌಡ, ಹೆಚ್. ವೆಂಕಟರಾವ್ ನಾಡಗೌಡ, ಕೇರಳ ಕೃಷಿ ಸಚಿವರಾದ ಸುನೀಲ್ ಪ್ರಭ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಗಂಗಾಂಬಿಕಾದೇವಿ, ವಿಧಾನ ಪರಿಷತ್ ಸದಸ್ಯರಾದ ರೇವಣ್ಣ, ರಮೇಶ್ ಗೌಡ, ದೇವೇಗೌಡ, ಇಕ್ರಿಸ್ಯಾಟ್ ಡೈರೆಕ್ಟರ್ ಜನರಲ್ ಡಾ ಪೀಡರ್ ಕಾರ್ಬೆರಿ, ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ ಸಿ.ಇ.ಒ. ಡಾ.ಅಶೋಕ್ ದಳವಾಯಿ ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister HD Kumaraswamy on Friday inaugurated Organic and Millets International Trade Fair at Tripura Vasini in Palace Ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more