ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ 15 ನಿಮಿಷ ಕಣ್ಣೀರಿಟ್ಟಿದ್ದರು: ದೇವೇಗೌಡ

|
Google Oneindia Kannada News

Recommended Video

ನಮ್ಮಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡರು | HD Deve Gowda | Oneindia Kannada

ಬೆಂಗಳೂರು, ಜುಲೈ 27: 'ನನ್ನ ಮಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಸಂದರ್ಭದಿಂದಲೂ ಸಾಕಷ್ಟು ನೋವು ಅನುಭವಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುಮಾರು 15 ನಿಮಿಷ ಕಣ್ಣೀರಿಟ್ಟಿದ್ದರು. ನನಗೆ ಎಲ್ಲವೂ ಗೊತ್ತಿದೆ' ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದರು.

ಬೆಂಗಳೂರಿನ ಜೆಪಿ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ಮತ್ತು ಕೆಆರ್ ಪುರಂ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು ಉಪ ಚುನಾವಣೆಯ ಕುರಿತ ಸಿದ್ಧತೆಗೆ ಸಮಾಲೋಚನೆ ನಡೆಸಿದರು.

ಅತೃಪ್ತರ ಮಣಿಸಲು ದೇವೇಗೌಡ ತಯಾರಿ: ಬೆಂಗಳೂರು ಜೆಡಿಎಸ್ ಮುಖಂಡರ ಸಭೆ ಅತೃಪ್ತರ ಮಣಿಸಲು ದೇವೇಗೌಡ ತಯಾರಿ: ಬೆಂಗಳೂರು ಜೆಡಿಎಸ್ ಮುಖಂಡರ ಸಭೆ

ಮೈತ್ರಿ ಸರ್ಕಾರ ಹೋದರೂ ಚಿಂತೆಯಿಲ್ಲ. ಯಾರು ಬಂದರೂ ಕೂಡ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

HD Kumaraswamy Cried For 15 Minutes JDS Chief HD Deve Gowda Said

ಸರ್ಕಾರದ ಎಲ್ಲ ಕೆಲಸಗಳನ್ನೂ ವಿರೋಧ ಮಾಡಲು ಹೋಗುವುದಿಲ್ಲ. ವಿಷಯಾಧಾರಿತವಾಗಿ ಕೆಲಸ ಮಾಡುತ್ತೇವೆ. ಏನೇ ಮಾಡಿದರೂ ಜೆಡಿಎಸ್ ಪಕ್ಷವನ್ನು ನಾಶಪಡಿಸಲು ಆಗುವುದಿಲ್ಲ. ಸರ್ಕಾರ ಹೋದರೂ ಪರವಾಗಿಲ್ಲ, ಪಕ್ಷ ಸಂಘಟನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾಗಿ ಹೇಳಿದರು.

ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು

ನಾವು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿಯೇ ಕೆಲಸ ಮಾಡುತ್ತೇವೆ. ಬಿಜೆಪಿಗೆ ಸರ್ಕಾರ ರಚಿಸಲು ಜೆಡಿಎಸ್ ಬಾಹ್ಯ ಬೆಂಬಲ ನೀಡುತ್ತದೆ ಎನ್ನುವುದು ಸುಳ್ಳು. ನಾವು 34 ಶಾಸಕರಿದ್ದೇವೆ. ಜಿಟಿ ದೇವೇಗೌಡ ಅವರ ಹೇಳಿಕೆಯನ್ನು ನಾನು ಅಲ್ಲಗಳೆಯುವುದಿಲ್ಲ. ಕೇವಲ 14 ತಿಂಗಳಿಗೇ ಪತನವಾದ ಹಿನ್ನೆಲೆಯಲ್ಲಿ ಮನೆಗೆ ಹೋಗಬೇಕಲ್ಲ ಎಂಬ ನೋವಿನೊಂದಿಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಕಾಂಗ್ರೆಸ್ ಶಾಸಕರಲ್ಲಿ ಕೂಡ ಇದೆ. ಇದನ್ನೇ ಜಿಟಿಡಿ ಹೇಳಿದ್ದಾರೆ. ಆ ಚರ್ಚೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

English summary
JDS Cheif HD Deve Gowda said that, HD Kumaraswamy had cried for 15 miniutes in party office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X