ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಗೆ ತೆರಳಲಿರುವ ಎಚ್ ಡಿಕೆ

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಾಯಕರ ತಂಡದಿಂದ ಇಸ್ರೇಲ್ ಪ್ರವಾಸ. ಆ ದೇಶದ ಕೃಷಿ, ನೀರಾವರಿ ಬಗ್ಗೆ ಅಧ್ಯಯನಕ್ಕಾಗಿ ಪ್ರವಾಸ.

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಅನುಸರಿಸುವ ಮೂಲಕ ಅತಿ ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ ಪಡೆಯುತ್ತಿರುವ ಇಸ್ರೇಲ್ ದೇಶಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಎಚ್. ಡಿ. ಕುಮಾರ ಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು, ಹಾಗೂ ರೈತರು ಉಳ್ಳ 10 ಜನರ ತಂಡ ಭೇಟಿ ನೀಡಲಿದೆ.

ಅಸೆಂಬ್ಲಿ ಚುನಾವಣೆ: ಕುಮಾರಸ್ವಾಮಿ ನಡೆಸಿದ ಸಮೀಕ್ಷೆ ಹೇಳೋದೇ ಬೇರೆ?ಅಸೆಂಬ್ಲಿ ಚುನಾವಣೆ: ಕುಮಾರಸ್ವಾಮಿ ನಡೆಸಿದ ಸಮೀಕ್ಷೆ ಹೇಳೋದೇ ಬೇರೆ?

ಸಂಸದ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ. ರಂಗಪ್ಪ, ಆಯ್ದ ರೈತರುಳ್ಳ ಎಂಟು ಜನರ ತಂಡ ಆಗಸ್ಟ್ 26ರ ಸಂಜೆ ಇಸ್ರೇಲ್ ಗೆ ಪ್ರಯಾಣ ಬೆಳೆಸಲಿದೆ. ಈ ತಂಡವು ಸೆಪ್ಟಂಬರ್ 4ರಂದು ಭಾರತಕ್ಕೆ ವಾಪಸ್ಸಾಗಲಿದೆ ಎಂದು ಮೂಲಗಳು ತಿಳಿಸಿವೆ.

HD Kumaraswamy and his team flys to Isreal to study agriculture, irrigation systems

ನವದೆಹಲಿಯಿಂದ ಆಗಸ್ಟ್ 26ರ ಸಂಜೆ ಇಸ್ರೇಲ್ ಗೆ ಪಯಣಿಸಲಿರುವ ಈ ತಂಡ, ಐದು ದಿನಗಳ ಕಾಲ ಅಲ್ಲಿ ಅಧ್ಯಯನ ನಡೆಸಲಿದೆ ಎಂದು ಹೇಳಲಾಗಿದೆ.

ಅಮಿತ್ ಶಾ ಕರ್ನಾಟಕಕ್ಕೆ ಬಂದ ಕಾರಣ ಬಿಚ್ಚಿಟ್ಟ ಎಚ್‌ಡಿಕೆ!ಅಮಿತ್ ಶಾ ಕರ್ನಾಟಕಕ್ಕೆ ಬಂದ ಕಾರಣ ಬಿಚ್ಚಿಟ್ಟ ಎಚ್‌ಡಿಕೆ!

ಅಲ್ಲಿಗೆ ಭೇಟಿ ನೀಡಲಿರುವ ತಂಡ, ಅಲ್ಲಿನ ಕೃಷಿ ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ತೋಟಗಾರಿಕೆ, ಪಶು ಸಂಗೋಪನೆ, ಅಂತರ್ಜಲ ನಿರ್ವಹಣೆ ಮುಂತಾದ ಅನೇಕ ವಿಚಾರಗಳನ್ನು ಅಧ್ಯಯನ ಮಾಡಿ ಬರಲಿದೆ ಎಂದು ಹೇಳಲಾಗಿದೆ.

English summary
Ten members including JDS leader HD Kumaraswamy, other JDS leaders and selected farmers of Karnataka will be travelling to Isrel to study Israel's agriculture, irrigation, animal husbandary system
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X