ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಡನ್‌ನಲ್ಲಿ ಕುಳಿತು ಉಪಚುನಾವಣೆ ರಣತಂತ್ರ ರೂಪಿಸುತ್ತಾರಾ ಎಚ್‌ಡಿಕೆ ?

|
Google Oneindia Kannada News

Recommended Video

ನಾಲ್ಕು ದಿನಗಳ ಲಂಡನ್ ಪ್ರವಾಸಕ್ಕೆ ತೆರಳಲಿರೋ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ನವೆಂಬರ್ 4: ಇಂದಿನಿಂದ 4 ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಲಂಡನ್ ಪ್ರವಾಸ ಪ್ರವಾಸ ಕೈಗೊಂಡಿದ್ದಾರೆ.

ಮಲೇಷಿಯಾ ಪ್ರವಾಸ ಯೋಜನೆ ವಿಫಲವಾದ ನಂತರ ಪುತ್ರ ಲಂಡನ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ನಾಯಕರನ್ನು ಒಲಿಸಲು ಪುತ್ರ ಎಚ್‌.ಡಿ ಕುಮಾರಸ್ವಾಮಿ ಶಾಸಕರನ್ನು ಮಲೇಷಿಯಾಕ್ಕೆ ಕರೆದುಕೊಂಡು ಹೋಗುವ ಯೋಜನೆಯಲ್ಲಿದ್ದರು.

ಎಚ್‌ಡಿ ಕುಮಾರಸ್ವಾಮಿ ಜೊತೆ ಮಲೇಷ್ಯಾ ಪ್ರವಾಸಕ್ಕೆ ಎಂಎಲ್ಸಿಗಳ ನಕಾರಎಚ್‌ಡಿ ಕುಮಾರಸ್ವಾಮಿ ಜೊತೆ ಮಲೇಷ್ಯಾ ಪ್ರವಾಸಕ್ಕೆ ಎಂಎಲ್ಸಿಗಳ ನಕಾರ

ಲಂಡನ್ ಪ್ರವಾಸ ಮುಗಿಸಿ ಉಪ ಚುನಾವಣೆ ರಣರಂಗಕ್ಕೆ ಇಳಿಯಲಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ . ಪಕ್ಷದ ನಾಯಕರಿಗೆ ಉತ್ತಮ-ಸ್ಥಾನ ಮಾನ ನೀಡದಿರುವುದು ಸೇರಿದಂತೆ ಇತರೆ ವಿಚಾರಗಳಿಗೆ ಜೆಡಿಎಸ್ ವರಿಷ್ಠರ ಮೇಲೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಕಳೆದ ವಾರ ಅತೃಪ್ತರ ಸಭೆ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿತ್ತು ಎಂದು ತಿಳಿದುಬಂದಿದೆ.

ಪ್ರವಾಸ ಏನೂ ಬೇಡ ಅಂದ್ರಾ ದೇವೇಗೌಡ್ರು

ಪ್ರವಾಸ ಏನೂ ಬೇಡ ಅಂದ್ರಾ ದೇವೇಗೌಡ್ರು

ಶಾಸಕರ ಜೊತೆಗೆ ಪ್ರವಾಸ ಏನೂ ಬೇಡ, ನವೆಂಬರ್ 6ಕ್ಕೆ ಶಾಸಕರು, ಎಂಎಲ್‌ಸಿಗಳ ಸಭೆ ಕರೆಯಿರಿ ಎಂದು ದೇವೇಗೌಡರು ಕುಮಾರಸ್ವಾಮಿಗೆ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರ ನಡುವಿನ ಅಸಮಾಧಾನ ಶಮನಗೊಳಿಸಲು ಕರೆದಿರುವ ಸಭೆ ಇದಾಗಿದೆ.

ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ

ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ

ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾ ಪ್ರಾಜೆಕ್ಟ್ ವಿಚಾರದ ಮೇಲೆ ಎಚ್‌ಡಿ ಕುಮಾರಸ್ವಾಮಿ ಲಂಡನ್‌ಗೆ ತೆರಳುತ್ತಿದ್ದಾರೆ. ಹೀಗಾಗಿ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಈ ವಿಚಾರವನ್ನು ಖುದ್ದು ಕುಮಾರಸ್ವಾಮಿಯವರೇ ಹೇಳಿಕೊಂಡಿದ್ದಾರೆ. ಇಂದು ಬೆಂಗಳೂರಿನಿಂದ ಹೊರಟು ನವೆಂಬರ್ 8ರಂದು ವಾಪಸ್ಸಾಗುತ್ತೇನೆ ಎಂದಿದ್ದಾರೆ ಹೆಚ್ ಡಿ ಕುಮಾರಸ್ವಾಮಿ.

ಜೆಡಿಎಸ್ ಶಾಸಕರ ಅಸಮಾಧಾನ

ಜೆಡಿಎಸ್ ಶಾಸಕರ ಅಸಮಾಧಾನ

ಎರಡು ದಿನಗಳ ಹಿಂದೆ ಅತೃಪ್ತ ಜೆಡಿಎಸ್ ಶಾಸಕರು ದೇವೇಗೌಡರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆಗ ಅವರಿಗೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ದೊಡ್ಡಗೌಡರು ಮಾತು ಕೊಟ್ಟಿದ್ದರು. ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆಯನ್ನು ಮುಂದಿನ ವಾರ ಕರೆದು ತಮ್ಮ ಮಗನನ್ನು ಕೂರಿಸಿ ಮಾತುಕತೆಯಾಡಿ ಭಿನ್ನಾಭಿಪ್ರಾಯ ಬಗೆಹರಿಸುವ ಯೋಜನೆಯಲ್ಲಿದ್ದರು. ಆದರೆ ಈ ಎಲ್ಲಾ ಯೋಜನೆಗಳನ್ನು ಪುತ್ರ ಕುಮಾರಸ್ವಾಮಿ ತಲೆಕೆಳಗೆ ಮಾಡುವಂತಿದೆ.

ದೇವೇಗೌಡರ ತೀರ್ಮಾನವೇ ಅಂತಿಮ

ದೇವೇಗೌಡರ ತೀರ್ಮಾನವೇ ಅಂತಿಮ

ಈ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿದಾಗ, ನಾನು ಯಾವತ್ತೂ ತಂದೆಯ ನಿರ್ಧಾರ ವಿರುದ್ಧ ಹೋಗುವುದೇ ಇಲ್ಲ. ನಾನು ಒಂದೇ ಒಂದು ಸಲ ತಂದೆಯ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಅದು 2006ರಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದಾಗ ಮಾತ್ರ ಎಂದಿದ್ದಾರೆ.

English summary
The former chief minister HD Kumaraswamy has Going to London for 4 days from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X