ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಬಲಗಾಲಿನ ಮಂಡಿ ಟ್ವಿಸ್ಟ್: ಅಪಾಯವಿಲ್ಲ ಎಂದ ವೈದ್ಯರು

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಬಾತ್‌ರೂಮಿನಲ್ಲಿ ಕಾಲು ಜಾರಿ ಬಿದ್ದು ಪೆಟ್ಟುಮಾಡಿಕೊಂಡಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ ಅವರ ದೇಹಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದೇವೇಗೌಡ ಅವರು ತಮ್ಮ ನಿವಾಸಕ್ಕೆ ಮರಳಿದ್ದಾರೆ.

ಬಾತ್ ರೂಮಿನಲ್ಲಿ ಜಾರಿಬಿದ್ದ ದೇವೇಗೌಡರು, ಆಸ್ಪತ್ರೆಗೆ ದಾಖಲು ಬಾತ್ ರೂಮಿನಲ್ಲಿ ಜಾರಿಬಿದ್ದ ದೇವೇಗೌಡರು, ಆಸ್ಪತ್ರೆಗೆ ದಾಖಲು

ಬಿದ್ದ ರಭಸಕ್ಕೆ ದೇವೇಗೌಡ ಅವರ ಬಲಗಾಲಿನ ಮಂಡಿ ಸ್ವಲ್ಪ ಟ್ವಿಸ್ಟ್ ಆಗಿತ್ತು. ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. ಕಾಲಿನ ಮೂಳೆ ಮುರಿತ ಉಂಟಾಗಿಲ್ಲ. ಹೀಗಾಗಿ ಯಾವುದೇ ಅಪಾಯವಿಲ್ಲ ಎಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ತಿಳಿಸಿದ್ದಾರೆ.

ಹಳೆ ಮಿತ್ರ ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ ಹಳೆ ಮಿತ್ರ ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ

ದೇವೇಗೌಡ ಅವರು ಇನ್ನು 3-4 ದಿನ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದೂ ಅವರು ವಿವರಿಸಿದ್ದಾರೆ.

hd devegowda back to home from jayadeva hospital doctor said he need rest

ದೇವೇಗೌಡ ಅವರು ಬೆಂಗಳೂರಿನ ಪದ್ಮನಾಭನಗರದ ನಿವಾಸದ ಬಾತ್‌ರೂಮ್‌ನಲ್ಲಿ ಶನಿವಾರ ಬೆಳಿಗ್ಗೆ ಕಾಲು ಜಾರಿ ಬಿದ್ದಿದ್ದರು. ಅವರಿಗೆ ವೈದ್ಯರು ಮನೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಜಯದೇವ ಆಸ್ಪತ್ರೆಗೆ ಕರೆದೊಯ್ದಿದ್ದರು.

English summary
Former Prime Minister who was admitted to Jayadeva hospital in morning after felling down in Bath room, discharged in the afternoon. Doctor MS Manjunath said there is no fracture in the leg, he need 3-4 days of rest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X