ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಫೋಟಿಸಿದವರಿಗೆ ಜೀವಾವಧಿ ಜೈಲು ಕಾಯಂ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 17: ರಾಜ್ಯದ ಬೆಂಗಳೂರು, ಕಲಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿ 2000ನೇ ವರ್ಷದಲ್ಲಿ ಸಂಭವಿಸಿದ್ದ ಚರ್ಚ್ ಸ್ಫೋಟದ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಹೈ ಕೋರ್ಟ್ ತಿರಸ್ಕರಿಸಿದ್ದು, ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.

ವಿಶೇಷ ನ್ಯಾಯಾಲಯವು 2008ರಲ್ಲಿ ಅಪರಾಧಿಗಳಲ್ಲಿ ಕೆಲವರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. 2000 ನೇ ವರ್ಷದಲ್ಲಿ ದಕ್ಷಿಣ ರಾಜ್ಯಗಳಲ್ಲಿ ತಲ್ಲಣ ಸೃಷ್ಟಿಸಿದ್ದ ಈ ಚರ್ಚ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇವರೆಲ್ಲ ನಿಷೇಧಿತ ದೀನದಾರ ಅಂಜುಮನ್ ಸಂಘಟನೆ ಸದಸ್ಯರಾಗಿದ್ದರು.

high

ಅಪರಾಧಿಗಳು ಭಾರತದಲ್ಲಿ ಕ್ರೈಸ್ತರು ಹಾಗೂ ಹಿಂದೂಗಳ ಮಧ್ಯೆ ಕಲಸ ಸೃಷ್ಟಿಸಲು ಯತ್ನಿಸಿದ್ದರು ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದಕ್ಕೆ ಹೈ ಕೋರ್ಟ್‌ನ ನ್ಯಾ. ಎನ್. ಕುಮಾರ್ ಮತ್ತು ನ್ಯಾ. ರತ್ನಕಲಾ ಅವರಿದ್ದ ವಿಭಾಗೀಯ ಪೀಠ ಸಹಮತ ವ್ಯಕ್ತಪಡಿಸಿದೆ.

English summary
The Karnataka High Court upheld the conviction of all persons in the 2000 serial church blast cases on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X