ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಹಾಕಿದವರ ವಿರುದ್ಧ ಕೇಸ್, ಸಂಪೂರ್ಣ ಮಾಹಿತಿ ಬೇಕು ಎಂದ ಹೈಕೋರ್ಟ್

|
Google Oneindia Kannada News

ಬೆಂಗಳೂರು, ನವೆಂಬರ್ 5: ಕಸ ಹಾಕಿದವರ ಬಗ್ಗೆ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದೀರಾ ವಿವರವನ್ನು ಡಿಸೆಂಬರ್ 15ರೊಳಗೆ ಸಲ್ಲಿಸಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ತಾಕೀತು ಮಾಡಿದೆ.

ದೀಪಾವಳಿ ವಿಶೇಷ ಪುರವಣಿ

ಬೆಂಗಳೂರಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎನ್ನುವ ಕುರಿತು ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್ ಎಷ್ಟು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದೀರ, ಸಾರ್ವಜನಿಕರ ಮೇಲೆ ದೂರು ದಾಖಲಿಸಿದ್ದೀರ, ಎಷ್ಟು ದಂಡ ವಿಧಿಸಿದ್ದೀರಾ ಎನ್ನುವ ಕುರಿತು ಮಾಹಿತಿ ನೀಡುವಂತೆ ತಿಳಿಸಿದೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಬಿಎಂಪಿ ಪರ ವಕೀಲ ಕಳೆದ 48 ಗಂಟೆಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗಿದೆ, ಪೌರ ಕಾರ್ಮಿಕರು ತ್ಯಾಜ್ಯವನ್ನು ವಿಲೇವಾರಿ ಂಆಡಿ ಬಳಿಕ ಆ ಜಾಗವನ್ನು ಶುಚಿಗೊಳಿಸಿ ರಂಗೋಲಿಯನ್ನು ಹಾಕುತ್ತಿದ್ದಾರೆ. ಆದರೂ ಜನರು ಕಸ ತಂದು ಸುರಿಯುತ್ತಿದ್ದಾರೆ ಎಂದು ಹೇಳಿದರು.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

HC saught information regarding garbage related cases

ಹಿಂದೊಮ್ಮೆ ಬೀಟ್ ಪೊಲೀಸರ ಸಹಾಯ ಪಡೆಯಲು ತಿಳಿಸಲಾಗಿತ್ತು, ಬೀಟ್ ಪೊಲೀಸ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಕೋರ್ಟ್ ಪೌರಕಾರ್ಮಿಕ ಕಾಯ್ದೆ ಅನ್ವಯ ಕಾಯ್ದೆಯಲ್ಲಿ ಯಾವ್ಯಾವ ಪ್ರಕರಣವನ್ನು ದಾಖಲಿಸಲಾಗುತ್ತದೆಯೇ ಅದೆಲ್ಲವನ್ನೂ ದಾಖಲಿಸಿ ಎಂದು ಹೇಳಿತು. ಡಿಸೆಂಬರ್ 15ಕ್ಕೆ ವಿಚಾರಣೆ ಮುಂದೂಡಿತು.

English summary
Karnataka high court chief justice saught information from BBMP regarding its strict measures over garbage dumping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X