ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಬದಲಾವಣೆ ಬಗ್ಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿರ್ಧರಿಸಿ: ಹೈಕೋರ್ಟ್

ಈಗಾಗಲೇ ಇರುವ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಾಯಿಸಬಾರದೆಂದು 34 ವಿದ್ಯಾರ್ಥಿಗಳು ಹೂಡಿದ್ದ ಅರ್ಜಿಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆಯಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳುವಂತೆ ಕೆ ಎಸ್ ಇಇಬಿ ಸಲಹೆ ನೀಡಿದೆ.

|
Google Oneindia Kannada News

ಬೆಂಗಳೂರು ಮಾರ್ಚ್ 9: ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ತೆಗೆದುಕೊಳ್ಳಬೇಕು ಎಂದು ಬುಧವಾರ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ(ಕೆ ಎಸ್ ಇಇಬಿ)ಗೆ ಹೈಕೋರ್ಟ್ ಸೂಚಿಸಿದೆ. [ಎಸ್.ಎಸ್.ಎಲ್.ಸಿ. ಪರೀಕ್ಷೆ - ಪೂರ್ವಸಿದ್ಧತೆಗಾಗಿ ಸಹಾಯವಾಣಿ]

ಈಗಾಗಲೇ ಇರುವ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಾಯಿಸಬಾರದೆಂದು 34 ವಿದ್ಯಾರ್ಥಿಗಳು ಹೂಡಿದ್ದ ಅರ್ಜಿಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆಯಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳುವಂತೆ ಕೆ ಎಸ್ ಇಇಬಿ ಸಲಹೆ ನೀಡಿದೆ.

 HC rejects plea against changes in SSLC answer script format.

ಅರ್ಜಿಯಲ್ಲೇನಿದೆ?
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಈಗಾಗಲೇ ಇರುವ ಪದ್ಧತಿ ಎಂದರೆ ಪ್ರಶ್ನೆ ಕಮ್ ಉತ್ತರ ಪತ್ರಿಕೆ. ಆದರೆ ಇನ್ನು ಮುಂದೆ ಪ್ರಶ್ನೆ ಮತ್ತು ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡುವ ನಿರ್ಧಾರವನ್ನು ಕೆಎಸ್ ಇಇಬಿ ಜನವರಿಯಲ್ಲಿ ತೆಗೆದುಕೊಂಡಿತ್ತು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಇಂಥ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ವಿದ್ಯಾರ್ಥಿಗಳ ಭವಿ‌ಷ್ಯಕ್ಕೆ ಮಾರಕ ಎಂದು 34 ವಿದ್ಯಾರ್ಥಿಗಳು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. [ಪ್ರತಿಯೊಬ್ಬವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳು ಇನ್ನು ಮುಂದೆ ಪ್ರತ್ಯೇಕವಾಗಿರಲಿವೆ ಎಂಬುದನ್ನು ಬಿಟ್ಟರೆ ಸ್ವರೂಪದಲ್ಲಿ ಯಾವುದೇ ಬದಲಾವಣೆಯಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಕೆ ಎಸ್ ಇಇಬಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

English summary
Karnataka High Court rejects plea against changes in answer script format Of SSLC. HC also suggested Karnataka Secondary Education Examination Board to take such decisions in the begining of the academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X