ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಕೆಜೆಪಿ ವಿವಾದ

|
Google Oneindia Kannada News

high court
ಬೆಂಗಳೂರು, ಜ.9 : ಕರ್ನಾಟಕದ ಜನತಾ ಪಕ್ಷದ ವಿವಾದ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿದೆ. ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್‌ ಸುಳ್ಳು ಪ್ರಮಾಣ ಪತ್ರ ನೀಡಿ ಪಕ್ಷದ ನೋಂದಣಿ ಮಾಡಿಸಿದ್ದಾರೆ ಎಂದು ಹೊಟ್ಟೆಪಕ್ಷದ ರಂಗಸ್ವಾಮಿ ಅವರ ಪುತ್ರ ರಾಜೇಂದ್ರ ಪ್ರಸಾದ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಬುಧವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ರಾಜೇಂದ್ರ ಪ್ರಸಾದ್, ಕೇಂದ್ರ ಚುನಾವಣಾ ಆಯೋಗ 2013ರ ಸೆ.12ರಂದು ನೀಡಿದ್ದ ಕೆಜೆಪಿ ನೋಂದಣಿ ಕಾನೂನಿಯ ಅನ್ವಯ ನಡೆದಿದೆ. ಬಿ.ಎಸ್.ಯಡಿಯೂರಪ್ಪ ಅವರೆ ಕೆಜೆಪಿಯ ಅಧಿಕೃತ ಅಧ್ಯಕ್ಷರು ಎಂಬ ತೀರ್ಪನ್ನು ಪ್ರಶ್ನಿಸಿದ್ದಾರೆ. ಸುಳ್ಳು ಪ್ರಮಾಣ ಪತ್ರ ನೀಡಿ ಪದ್ಮನಾಭ ಪ್ರಸನ್ನ ಕುಮಾರ್ ಪಕ್ಷ ನೋಂದಣಿ ಮಾಡಿಸಿದ್ದಾರೆ ಎಂದು ದೂರಿದ್ದಾರೆ. [ಯಡಿಯೂರಪ್ಪ ಕೆಜೆಪಿ ಅಧ್ಯಕ್ಷ]

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ, ಕೇಂದ್ರ ಚುನವಣಾ ಆಯೋಗ, ಪದ್ಮನಾಭ ಪ್ರಸನ್ನ ಕುಮಾರ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ವಿ.ಧನಂಜಯ ಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಪ್ರಕರಣವೇನು : ಕೆಜೆಪಿ ಪಕ್ಷವನ್ನು ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ನೋಂದಣಿ ಮಾಡಿಸುವಾಗ ತಮ್ಮ ತಂದೆ ಹೆಸರು ಹೊಟ್ಟೆಪಕ್ಷದ ರಂಗಸ್ವಾಮಿ ಎಂದು ಸುಳ್ಳು ಪ್ರಮಾಣಪತ್ರ ನೀಡಿದ್ದಾರೆ ಎಂಬುದು ರಾಜೇಂದ್ರ ಪ್ರಸಾದ್ ಅವರ ಆರೋಪ. ಹಿಂದೆ ಸಹ ಕೆಜೆಪಿ ನೋಂದಣಿ ರದ್ದು ಮಾಡುವಂತೆ ಕೋರಿ ರಾಜೇಂದ್ರ ಪ್ರಸಾದ್‌ ಹಿಂದೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆಗ ಕೋರ್ಟ್ ವಿವಾದವನ್ನು ಚುನಾವಣಾ ಆಯೋಗದಲ್ಲಿ ಪರಿಹರಿಸಿಕೊಳ್ಳಿ ಎಂದು ಸೂಚನೆ ನೀಡಿತ್ತು.

ರಾಜೇಂದ್ರ ಪ್ರಸಾದ್ ಈ ವಿವಾದವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ತೆಗೆದುಕೊಂಡು ಹೋಗಿದ್ದರು. 2013ರ ಸೆ.12ರಂದು ತೀರ್ಪು ನೀಡಿದ ಆಯೋಗ, ಪದ್ಮನಾಭ ಪ್ರಸನ್ನ ಕುಮಾರ್‌ ಸುಳ್ಳು ಪ್ರಮಾಣ ಪತ್ರ ನೀಡಿಲ್ಲ ಎಂದು ಹೇಳಿತ್ತು. ಈಗ ಮತ್ತೊಮ್ಮೆ ತೀರ್ಪು ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ಪ್ರಸಾದ್‌, ಕೆಜೆಪಿ ನೋಂದಣಿ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.

English summary
The High Court ordered notices to former chief minister BS Yeddyurappa, former Union Minister Dhananjay Kumar and the Election Commission of India on a petition filed by Rajendra Prasad, son of Hottepaksha Rangaswami, over the merger of KJP with BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X