ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ವಿರುದ್ಧದ ಫೋರ್ಜರಿ ಆರೋಪದ ದೂರನ್ನು ಸ್ವೀಕರಿಸುವಂತೆ ಕೋರಮಂಗಲದ ಪಾಸ್ ಪೋರ್ಟ್ ಕಚೇರಿಗೆ ಹೈಕೋರ್ಟ್ ಸೂಚಿಸಿದೆ.

ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ಅವರ ಮೊದಲ ಪತಿ ಕುಮಾರ್ ವಿ. ಜಾಗೀರ್ ದಾರ್ ಅವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ಶಿಕ್ಷಣ ಇಲಾಖೆಗಾಗಿ ಮ್ಯೂಸಿಕ್ ಆಲ್ಬಂ-ಪುನೀತ್, ಕುಂಬ್ಳೆರಿಂದ ಬಿಡುಗಡೆ ಶಿಕ್ಷಣ ಇಲಾಖೆಗಾಗಿ ಮ್ಯೂಸಿಕ್ ಆಲ್ಬಂ-ಪುನೀತ್, ಕುಂಬ್ಳೆರಿಂದ ಬಿಡುಗಡೆ

"ತಮ್ಮಿಬ್ಬರಿಗೆ ಜನಿಸಿದ್ದ ಮಗಳ ಪಾಸ್ಪೋರ್ಟ್ ನವೀಕರಣಕ್ಕೆ ನಾನು ಸಹಿ ಹಾಕಬೇಕಿತ್ತಾದರೂ ನನ್ನ ಪತ್ನಿಯ ಎರಡನೇ ಪತಿ, ತಂದೆಯ ಸಹಿ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ" ಎಂದು ಕುಮಾರ್ ವಿ. ಜಾಗೀರ್ ದಾರ್ ದೂರು ನೀಡಿದ್ದರು.

HC directs Passport office to take complaint against Anil Kumble

ಆದರೆ. ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಗಳು ಈ ದೂರನ್ನು ಪರಿಗಣಿಸಿರಲಿಲ್ಲ, ಈ ಹಿಂದೆ ಇದೇ ಪ್ರಕರಣದಲ್ಲಿ ಅನಿಲ್ ಕುಂಭ್ಳೆ ವಿರುದ್ಧ ಹಾಕಲಾಗಿದ್ದ ಎಫ್ಐಆರ್ ಕೂಡಾ ರದ್ದಾಗಿತ್ತು. ಆದರೆ, ಈಗ ಕುಮಾರ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಕ್ರಮ ಜರುಗಿಸುವಂತೆ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಗೆ ಸೂಚನೆ ನೀಡಿದೆ.

2012ರ ಜನವರಿ 10ರಂದು ಅರ್ಜಿದಾರರು ನೀಡಿರುವ ದೂರನ್ನು ಪರಿಗಣಿಸಿ, ಕಾನೂನು ಪ್ರಕಾರ ಸೂಕ್ತ ಎನಿಸಿದರೆ, ಈ ಬಗ್ಗೆ ಕೋರ್ಟಿಗೆ ತಿಳಿಸುವಂತೆ ಪಾಸ್ ಪೋರ್ಟ್ ಕಚೇರಿಗೆ ಹೇಳಲಾಗಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಕುಂಬ್ಳೆ ಅವರ ಪುತ್ರಿ ಆರುಣಿ ಅವರ ಪಾಸ್ ಪೋರ್ಟ್ ನವೀಕರಣ ಕೂಡಾ ಸಾಧ್ಯವಿಲ್ಲ.

ನೀವೂ ಮತ ಚಲಾಯಿಸಿ ಎಂದು ಅನಿಲ್ ಕುಂಬ್ಳೆ ಮನವಿ ನೀವೂ ಮತ ಚಲಾಯಿಸಿ ಎಂದು ಅನಿಲ್ ಕುಂಬ್ಳೆ ಮನವಿ

ಕುಮಾರ್ ವಿ ಜಾಗೀರ್ ದಾರ್ ಹಾಗೂ ಚೇತನಾ ರಾಮತೀರ್ಥ ಅವರು 1986ರಲ್ಲಿ ಮದುವೆಯಾಗಿದ್ದರು, ಇವರಿಗೆ ಹೆಣ್ಣು ಮಗು ಜನಿಸಿತ್ತು. 1999ರಲ್ಲಿ ಇಬ್ಬರು ವಿವಾಹ ವಿಚ್ಛೇದನ ಪಡೆದುಕೊಂಡರು. ನಂತರ ಅನಿಲ್ ಕುಂಬ್ಳೆ ಮದುವೆಯಾಗಿದ್ದರು. 2012ರಲ್ಲಿ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ದೂರು ನೀಡಿರುವ ಕುಮಾರ್, ಅಪ್ರಾಪ್ತ ಪುತ್ರಿಯ ತಂದೆ ಸಹಿ ಹಾಕುವ ಜಾಗದಲ್ಲಿ ನನ್ನ ಸಹಿ ಇರಬೇಕು, ಬದಲಿಗೆ ಕುಂಬ್ಳೆ ಸಹಿ ಹಾಕುವ ಮೂಲಕ ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಿದ್ದರು.

English summary
The Karnataka High Court today directed Koramangala Passport office to receive complaint against former Cricketer Anil Kumble in regard to allged Forgery case of his daughter's passport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X