ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಊಬ್ಲೋ ವಾಚ್ ಪ್ರಕರಣ: ಎಸಿಬಿಗೆ ಹೈಕೋರ್ಟ್‌ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಜುಲೈ 2: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾಜಿ ಯಾದರೂ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೊಡುಗೆಯಾಗಿ ಪಡೆದಿದ್ದಾರೆ ಎನ್ನಲಾದ ಊಬ್ಲೋ ವಾಚ್‌ ಪ್ರಕರಣ ಅವರನ್ನು ಇನ್ನೂ ಕೈಬಿಡುತ್ತಿಲ್ಲ.

ಸೋಮವಾರ ಪ್ರಕರಣದ ಕುರಿತು ಹೈಕೋರ್ಟ್‌ ಮಹತ್ವದ ಆದೇಶ ನೀಡಿದ್ದು, ಎಸಿಬಿಗೆ ನಿರ್ದೇಶನವೊಂದನ್ನು ನೀಡಿದೆ. ಆರ್ಟಿಐ ಕಾರ್ಯಕರ್ತ ನಟರಾಜ್‌ ಶರ್ಮಾ ಎನ್ನುವವರು ಎಸಿಬಿಗೆ ಇದೇ ಪ್ರಕರಣದ ದಾಖಲೆಗಳನ್ನು ಕೊಡುವಂತೆ ಕೋರಿದ್ದರು. ಆದರೆ ಎಸಿಬಿ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಶರ್ಮಾ ಹೈಕೋರ್ಟ್ ಮೆಟ್ಟಿಲೇರಿದ್ದರು.

HC directs ACB in Hublot watch case

ಸಿದ್ದರಾಮಯ್ಯ ಊಬ್ಲೋ ವಾಚ್: ಪಿಐಎಲ್ ಹಿಂಪಡೆದ ಅನುಪಮಾ ಶೆಣೈಸಿದ್ದರಾಮಯ್ಯ ಊಬ್ಲೋ ವಾಚ್: ಪಿಐಎಲ್ ಹಿಂಪಡೆದ ಅನುಪಮಾ ಶೆಣೈ

ಸೋಮವಾರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಎಸಿಬಿ ಮಾಹಿತಿ ಕೋಟಾದಡಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಊಬ್ಲೋ ವಾಚ್‌ ಪ್ರಕರಣ ಕುರಿತಂತೆ ದಾಖಲಾತಿಗಳನ್ನು ಒದಗಿಸುವುದನ್ನು ಪರಿಗಣಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ಅರ್ಜಿದಾರ ನಟರಾಜ್‌ ಶರ್ಮಾ ಅವರಿಗೆ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡ ಅರ್ಜಿಯನ್ನಿ ಇತ್ಯರ್ಥಪಡಿಸಿದೆ.

ಈ ಹಿನ್ನಲೆಯಲ್ಲಿ ಆರ್‌ಟಿಐ ಕಾರ್ಯಕರ್ತ ನಟರಾಜ್‌ ಶರ್ಮಾ ಎಸಿಬಿಗೆ ಅರ್ಜಿ ಸಲ್ಲಿಸಿದರೆ ಮುಂದೆ ಎಸಿಬಿ ಯಾವ ಕ್ರಮ ಕೈಗೊಳ್ಳುತ್ತಿದೆ ಎನ್ನುವುದು ಮುಂದಿನ ಕುತೂಹಲವಾಗಿದೆ.

English summary
Karnataka high court has given direction to Anti Corruption Bureau to consider the application inn Right To Information act by petitioner in former CM Siddaramaiah alleged received Hublot watch from industrialist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X