ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ್ಯಸಿಡ್ ಎರಚುತ್ತೀರಾ, 5 ಲಕ್ಷ ಕೊಡಲು ರೆಡಿಯಾಗಿ!

By Vanitha
|
Google Oneindia Kannada News

ಬೆಂಗಳೂರು, ಜುಲೈ, 10 : ಹಣಕಾಸಿನ ವಿಷಯದಲ್ಲಿ ಕಲಹ ಏರ್ಪಟ್ಟ ಕಾರಣ ಆಪ್ತ ಸ್ನೇಹಿತನ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಶಾಂತ್ ಎಂಬುವನಿಗೆ ಹೈಕೋರ್ಟ್ 5 ಲಕ್ಷ ರೂ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಪ್ರಶಾಂತ್ ಮೂಲತಃ ಮೈಸೂರಿನ ಗೋಕುಲದವನು. ಆತ ತನ್ನ ಸ್ನೇಹಿತ ಸತೀಶ್ ಭಟ್ ಬಳಿ ಮೊಬೈಲ್ ಅಂಗಡಿ ಪ್ರಾರಂಭಿಸಲು 4 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದನು. ಅದನ್ನು ಹಿಂತಿರುಗಿಸಲು ಕೇಳಿದ ಪರಿಣಾಮ ಪ್ರಶಾಂತ್ ಸತೀಶ್ ಮೇಲೆ ಮಲ್ಲಹಳ್ಳಿ ಹತ್ತಿರ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ಪರಾರಿಯಾಗಲು ಯತ್ನಿಸಿದ್ದ. ಇದು ಸುಮಾರು 8 ವರ್ಷಗಳ ಹಿಂದೆ ಘಟಿಸಿತ್ತು [ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ]

HC awards Rs. five lakh to an acid attack victim

ಈ ಘಟನೆ ಸೆಪ್ಟೆಂಬರ್ 2, 2007 ರಲ್ಲಿ 8 ವರ್ಷಗಳ ಹಿಂದೆ ನಡೆದಿತ್ತು. ಈ ಪ್ರಕರಣದ ವಿಚಾರಣೆಯನ್ನು ಮೈಸೂರಿನ ೩ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2010 ರ ಆಗಸ್ಟ್ 18 ರಂದು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ ಸರ್ಕಾರ ಶಿಕ್ಷೆ ನೀಡಲು ಕೋರಿತ್ತು [ಶಿಕ್ಷಕಿ ಮೇಲೆ ಆಸಿಡ್ ದಾಳಿ: ಭಗ್ನಪ್ರೇಮಿ ಬಂಧನ]

ಮೈಸೂರಿನ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾ. ಮೋಹನ್ ಶಾಂತನ್ ಅವರಿದ್ದ ವಿಭಾಗೀಯ ಪೀಠ, ಅಧೀನ ನ್ಯಾಯಾಲಯ ನೀಡಿದ್ದ 7 ವರ್ಷಗಳ ಜೈಲು ಶಿಕ್ಷೆ ಕಾಯಂಗೊಳಿಸಿದೆ. ಅಲ್ಲದೆ 50 ಸಾವಿರ ರೂ ಇದ್ದ ದಂಡದ ಮೊತ್ತವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದೆ. ಅಕಸ್ಮಾತ್ ಅಪರಾಧಿ ದಂಡ ಕಟ್ಟದಿದ್ದಲ್ಲಿ ಮತ್ತೆ 5 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.

English summary
Prashanth and Sathish both are good friends. Prashanth had taken 4 lakh loan from a friend of Sathish. One day Sathish asked to return the money. But Prashanth not gave money to Sathish. Then he threw acid. The Karnataka High Court on Thursay enhanced to rs.5lakh compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X