ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂನಲ್ಲಿ ಬರಲಿದೆ ಗ್ರಾಹಕ ಸ್ನೇಹಿ ಪವರ್ಡ್ ಚಾಟ್‌ಬೋಟ್ಸ್, ಏನಿದರ ಕೆಲಸ?

|
Google Oneindia Kannada News

ಬೆಂಗಳೂರು, ಜನವರಿ 19: ಗ್ರಾಹಕರ ಸೇವೆಗಾಗಿ ಬೆಸ್ಕಾಂ 'ಪವರ್ಡ್ ಚಾಟ್‌ಬೋಟ್ಸ್‌' ಎನ್ನುವ ಹೊಸ ಮಾಹಿತಿ ತಂತ್ರಜ್ಞಾನವನ್ನು ಆರಂಭಿಸುತ್ತಿದೆ.

ಪವರ್ಡ್ ಚಾಟ್‌ಬೋಟ್ಸ್‌ ಎಂದರೇನು? ಅದು ಏನೇನು ಕೆಲಸ ಮಾಡುತ್ತೆ.. ವಿದ್ಯುತ್ ಸಮಸ್ಯೆ, ಪವರ್ ಕಟ್ ಇನ್ನಿತರೆ ಸಾವಿರಾರು ದೂರುಗಳು ನಿತ್ಯ ಬೆಸ್ಕಾಂಗೆ ಬರುತ್ತವೆ. ಆದರೆ ಎಲ್ಲಾ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಸ್ಪಂದಿಸಲು ಬೆಸ್ಕಾಂ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಪವರ್ಡ್ ಚಾಟ್‌ಬೋಟ್ಸ್ ಅಭಿವೃದ್ಧಿಪಡಿಸಲಾಗುತ್ತಿದೆ.

ಬೆಸ್ಕಾಂ ಗ್ರಾಹಕ ಸ್ನೇಹಿ ಪವರ್ಡ್ ಚಾಟ್‌ಬೋಟ್ಸ್‌ನಲ್ಲಿ ಹಿಂದಿ ಏಕೆ? ಬೆಸ್ಕಾಂ ಗ್ರಾಹಕ ಸ್ನೇಹಿ ಪವರ್ಡ್ ಚಾಟ್‌ಬೋಟ್ಸ್‌ನಲ್ಲಿ ಹಿಂದಿ ಏಕೆ?

ಪವರ್ಡ್ ಚಾಟ್‌ ಬೋಟ್ಸ್ ಮನುಷ್ಯರಂತೆಯೇ ಕೆಲಸ ಮಾಡುತ್ತದೆ ಇದೊಂದು ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಗಿದ್ದು, ಗ್ರಾಹಕರಿಂದ ದೂರುಗಳನ್ನು ಪಡೆಯುವುದು, ಅವರಿಗೆ ಮಾಹಿತಿ ನೀಡುವುದು, ಎಸ್‌ಎಂಎಸ್‌ಗಳನ್ನು ಕಳುಹಿಸುವುವ ಕೆಲಸವನ್ನು ಅದು ಮಾಡುತ್ತದೆ. ಹೀಗಾಗಿ ದಿನಕ್ಕೆ ಎಷ್ಟೇ ದೂರುಗಳು ಬಂದರೂ ಸುಲಭವಾಗಿ ಇತ್ಯರ್ಥವಾಗುತ್ತದೆ. ಎಲ್ಲಾ ದೂರುಗಳು ಕಂಪ್ಯೂಟರ್‌ಗಳಲ್ಲಿ ದಾಖಲಾಗಲಿದೆ.

Have a Bescom issue? AI-powered chatbots will soon answer you

ಬೆಸ್ಕಾಂ ಸಹಾಯವಾಣಿಗೆ ಬಂದ ಎಷ್ಟೋ ಕರೆಗಳಿಗೆ ಉತ್ತರ ನೀಡಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿರಲಿಲ್ಲ ಇದೀಗ ಫರ್ಸ್ಟ್ ಲೈನ್ ಇಂಟರಾಕ್ಷನ್‌ನ್ನು ಈ ಪವರ್ಡ್ ಚಾಟ್‌ಬೋಟ್ಸ್ ಮಾಡಲಿದೆ.

ಇದೀಗ ವಿದ್ಯುತ್ ಸಮಸ್ಯೆಗಳಿದ್ದರೆ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡುವ ಅಗತ್ಯವಿಲ್ಲ, ವಾಟ್ಸಪ್,ವೆಬ್‌ಸೈಟ್ ಮೂಲಕ ದೂರು ನೀಡಬಹುದಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಬೆಸ್ಕಾಂ ಅಧಕಾರಿಗಳು ಮಾಹಿತಿ ನೀಡಿದ್ದಾರೆ.

English summary
As complaints of power cuts continue to pour in even before the onset of summer, the Bangalore Electricity Supply Company (Bescom) is preparing to put in place a new army AI (artificial intelligence)-powered chatbots to deal with the innumerable calls and messages that its multiple helplines receive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X