• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎರಡು ದಶಕಗಳ ಕನಸು ನನಸು: ಹಾಸನ -ಬೆಂಗಳೂರು ರೈಲಿಗೆ ಚಾಲನೆ

By Mahesh
|

ಬೆಂಗಳೂರು, ಮಾರ್ಚ್ 26: ಹಾಸನ ಹಾಗೂ ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಭಾನುವಾರ ಬೆಳಗ್ಗೆ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಪ್ರಯಾಣಿಕರ ಸರಿ ಸುಮಾರು ಎರಡು ದಶಕಗಳ ಕನಸು ನನಸಾಗಿದೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ಯಶವಂತಪುರ-ಹಾಸನ(ಚಿಕ್ಕ ಬಾಣವಾರ ಮಾರ್ಗ) ರೈಲಿಗೆ ಹಸಿರು ನಿಶಾನೆ ಸೇರಿದಂತೆ ವಿವಿಧ ಯೋಜನೆ, ಸೌಲಭ್ಯಗಳಿಗೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

167 ಕಿ.ಮೀ ಮಾರ್ಗದ ಈ ರೈಲು ಯೋಜನೆಯ ಅಂತಿಮ ಹಂತದ ಪ್ರಾಯೋಗಿಕ ಸಂಚಾರ ಫೆಬ್ರವರಿ 15ರಿಂದ 28ರ ವರೆಗೆ ನಡೆಸಲಾಗಿತ್ತು.

ದಿನನಿತ್ಯ ಸಂಚರಿಸುವ ಪ್ರಯಾಣಿಕರಲ್ಲದೆ 2018ರಲ್ಲಿ ನಡೆಯುವ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೂ ಈ ಮಾರ್ಗದ ರೈಲು ಸಂಚಾರ ಅನುಕೂಲವಾಗಲಿದೆ.

ಎರಡು ದಶಕಗಳ ಕನಸು

ಎರಡು ದಶಕಗಳ ಕನಸು

1996ರಲ್ಲಿ ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ಅಂದಿನ ರೈಲ್ವೆ ಸಚಿವರಾದ ಜಾಫರ್ ಷರೀಫ್ ಅವರು ರಾಜಧಾನಿಯಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ನಂತರ 2008-09ರ ವೇಳೆಗೆ ಶೈಕ್ಷಣಿಕ ಕ್ಷೇತ್ರವಾದ ಬೆಳ್ಳೂರಿಗೂ ಕೂಡ ರೈಲ್ವೆ ಸಂಪರ್ಕಗಳಿಗೆ ಚಾಲನೆ ನೀಡಲಾಗಿತ್ತು.

ಯಾರಿಗೆ ಅನುಕೂಲ

2011-14ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚೆಲುವರಾಯಸ್ವಾಮಿ, ಎಚ್.ಡಿ.ಕುಮಾರಸ್ವಾಮಿ, ಡಿವಿ ಸದಾನಂದ ಗೌಡ ಅವರ ಪರಿಶ್ರಮದಿಂದ ರೈಲ್ವೆ ಕಾಮಗಾರಿ ಮತ್ತೆ ಆರಂಭವಾಯಿತು. 2016ರಲ್ಲಿ ಪ್ರಾಯೋಗಿಕ ಚಾಲನೆ ಸಿಕ್ಕಿತು. ಮಾರ್ಚ್ 26, 2017ರಂದು ಚಾಲನೆ ಸಿಕ್ಕಿದ್ದು, ಮಾರ್ಚ್ 27ರಿಂದ ರೈಲು ಸಂಚಾರ ಆರಂಭ. ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳವನ್ನು ಬೆಸೆಯಲಿದೆ.

ಕುಣಿಗಲ್ ಕುದುರೆ ಫಾರ್ಮ್

ಯಡಿಯೂರು ಕುಣಿಗಲ್, ನೆಲಮಂಗಲ ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ಕುಣಿಗಲ್ ಪಟ್ಟಣದಲ್ಲಿ ಹಾದುಹೋಗುವ ರೈಲ್ವೆ ಹಳಿ ನಿರ್ಮಾಣಕ್ಕೆ ಇತಿಹಾಸ ಪ್ರಸಿದ್ಧ ಟಿಪ್ಪು ಸುಲ್ತಾನ್ ಕಾಲದ ಕುದುರೆ ಫಾರಂ ಅಡ್ಡ ಬಂದ ಪರಿಣಾಮ ಕಾಮಗಾರಿಗೆ ತೊಡಕು ಉಂಟಾಯಿತು. ರೈಲ್ವೆ ಹಳಿ ಹಾಕಲು ಉದ್ಯಮಿ ವಿಜಯ್ ಮಲ್ಯ ಕೂಡಾ ಅಡ್ಡಿಪಡಿಸಿದ್ದರು. ಶಾಸಕ ಡಿ.ನಾಗರಾಜಯ್ಯನವರು ರೈಲ್ವೆ ಅಧಿಕಾರಿಗಳು ಮತ್ತು ಕುದುರೆ ಫಾರಂ ಅಧಿಕಾರಿಯೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿ ಕಾಮಗಾರಿ ನಡೆಯಲು ಅನುವು ಮಾಡಿಕೊಟ್ಟರು.

ವೈಫೈ ನಿಲ್ದಾಣಗಳು

*179.28 ಕಿ.ಮೀ ಉದ್ದದ ಟ್ರ್ಯಾಕ್ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಮಾನಾಂತರವಾಗಿ ಈ ಮಾರ್ಗ ಸಾಗಲಿದೆ.

* 50 ಕಿ.ಮೀ. ಅಂತರ ಕಡಿಮೆಯಾಗುವುದರಿಂದ ಒಂದೂವರೆ ಗಂಟೆ ಪ್ರಯಾಣ ಕಡಿತವಾಗುತ್ತಿದೆ. * ಕುಣಿಗಲ್‌ನಲ್ಲಿರುವ ವಿಜಯ್ ಮಲ್ಯ ಒಡೆತನದ ಕುದುರೆ ಫಾರ್ಮ್ ಮಧ್ಯದಲ್ಲೇ ರೈಲು ಮಾರ್ಗ ಹಾದು ಹೋಗಲಿದೆ.

* ಬೆಂಗಳೂರು, ಮೈಸೂರು, ಯಶವಂತಪುರ ರೈಲು ನಿಲ್ದಾಣಗಳ ವೈಫೈ ಸೌಲಭ್ಯಕ್ಕೂ ಇದೇ ಸಂದರ್ಭದಲ್ಲಿ ಚಾಲನೆ.

ನಿಲ್ದಾಣಗಳಲ್ಲಿ ವಿವಿಧ ಸೌಲಭ್ಯ

ಯಶವಂತಪುರದಲ್ಲಿ ಹೊಸ ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆಗೆ ಚಾಲನೆ ನೀಡಿದ ಸಚಿವ ಸುರೇಶ್ ಪ್ರಭು.

2006ರಲ್ಲೇ ಸಂಪರ್ಕ ಸಾಧ್ಯವಿತ್ತು

2006ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕಾಗಿ ಹಾಸನದಿಂದ ಶ್ರವಣ ಬೆಳಗೊಳಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿತ್ತು ಆನಂತರ ಹಲವಾರು ಸಮಸ್ಯೆಗಳಿಂದ ಈ ಮಾರ್ಗದ ಕಾಮಗಾರಿ ಕುಂಠಿತವಾಗಿತ್ತು. ಈ ಬಾರಿ ಮಸ್ತಕಾಭಿಶೇಕಕ್ಕೆ ರೈಲು ಸಂಚಾರ ಲಭ್ಯವಿದೆ.

ನಿಲ್ದಾಣಗಳಲ್ಲಿ ಡಿಜಿಟಲ್ ಪೇ

ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಪೇ ವಿಸ್ತರಿಸುವ ಭರವಸೆಯನ್ನು ಸಚಿವ ಸುರೇಶ್ ಪ್ರಭು ನೀಡಿದರು.

English summary
Union Minister Suresh Prabhu today flagged off Hassan-yeshwanthpur Bengaluru train. The direct line will reduce the distance between Bengaluru and Hassan from 259 km (via Arsikere) to 167 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X