ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಗ್ಲಾದೇಶಿಗಳ ಅಕ್ರಮ ವಲಸೆ, ಪರಂ ಕೊಟ್ಟ ಲೆಕ್ಕ ತಪ್ಪೇ?

ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸೆಗರ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ನೀಡಿದ ಮಾಹಿತಿಯನ್ನು ಸಂಪೂರ್ಣವಾಗಿ ಬಿಜೆಪಿ ತಿರಸ್ಕರಿಸಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಳಗಾವಿ, ನವೆಂಬರ್ 23: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸೆಗರ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ನೀಡಿದ ಮಾಹಿತಿಯನ್ನು ಸಂಪೂರ್ಣವಾಗಿ ಬಿಜೆಪಿ ತಿರಸ್ಕರಿಸಿದೆ. ಕೂಡಲೇ ಮರು ಸಮೀಕ್ಷೆ ನಡೆಸುವಂತೆ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದ ಘಟನೆ ನಡೆದಿದೆ.

ಬಿಜೆಪಿ ಲೆಕ್ಕಾಚಾರದಂತೆ ಕರ್ನಾಟಕದಲ್ಲಿ ಸರಿ ಸುಮಾರು 748ಕ್ಕೂ ಅಧಿಕ ಅಕ್ರಮ ವಲಸಿಗರು ನೆಲೆಸಿದ್ದಾರೆ. ಆದರೆ, ಸರ್ಕಾರದ ಅಧಿಕೃತ ದಾಖಲೆ ಪ್ರಕಾರ ಈ ಸಂಖ್ಯೆ 283 ದಾಟುವುದಿಲ್ಲ.

Has the Karnataka government underplayed the presence of Bangladeshis staying illegally in the state

ಜಿ ಪರಮೇಶ್ವರ ಅವರು ನೀಡಿದ ಮಾಹಿತಿಯಂತೆ ರಾಜ್ಯದಲ್ಲೆಡೆ ಅಕ್ರಮ ವಲಸಿಗರು ನೆಲೆಸಿದ್ದು, ವಿಶೇಷ ಕಾರ್ಯಪಡೆ ಮೂಲಕ ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಕಾನೂನಿನ ಪ್ರಕಾರವಾಗಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

283 ಜನರ ಪೈಕಿ ಮಂಡ್ಯದಲ್ಲಿ 16, ದಕ್ಷಿಣ ಕನ್ನಡದಲ್ಲಿ ಒಬ್ಬರು, ಕೆಜಿಎಫ್ ನಲ್ಲಿ ಮೂವರು, ರಾಮನಗರದಲ್ಲಿ 11, ಮೈಸೂರು ಜಿಲ್ಲೆಯಲ್ಲಿ 13, ಚಿಕ್ಕಮಗಳೂರಿನಲ್ಲಿ ಒಬ್ಬರು, ಬೆಂಗಳೂರು ಜಿಲ್ಲೆಯಲ್ಲಿ 25, ಮೈಸೂರು ನಗರ 25, ಶಿವಮೊಗ್ಗದಲ್ಲಿ 2, ಬೆಂಗಳೂರು ನಗರ ಜಿಲ್ಲೆಯಲ್ಲಿ 197 ಮಂದಿ ಇದ್ದಾರೆ.

ಈ ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದ್ದು, 25 ಪ್ರಕರಣಗಳನ್ನು ನೋಂದಾಯಿಸಿಕೊಳ್ಳಲಾಗಿದ್ದು, 52 ಮಂದಿಯನ್ನು ಹೊರ ಹಾಕಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಭಾರತದ ಗಡಿ ಪ್ರವೇಶಿಸುತ್ತಿದ್ದಂತೆ ಇಲ್ಲಿನ ಐಡಿ ಕಾರ್ಡ್ ಪಡೆದುಕೊಂಡು ನುಸುಳುವುದರಿಂದ ಅಕ್ರಮ ವಲಸಿಗರ ತಡೆ ಕಷ್ಟವಾಗುತ್ತಿದೆ. ಗುಪ್ತಚರ ಮಾಹಿತಿಯಂತೆ ಕರ್ನಾಟಕದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಐಡಿ ಕಾರ್ಡ್ ಇದೆ ಎಂಬ ಮಾತ್ರಕ್ಕೆ ಇಲ್ಲಿ ನೆಲೆಸಲು ಬಿಟ್ಟರೆ ಅಪಾಯ ಕಾದಿದೆ ಎಂದು ಐಬಿ ಎಚ್ಚರಿಸಿದೆ.

English summary
Has the Karnataka government underplayed the presence of Bangladeshis staying illegally in the state. The BJP claims the figure is 748 while the government maintains it is 283.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X