ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೆರೆಹಳ್ಳಿ, ಚಾಮರಾಜಪೇಟೆಯಲ್ಲಿ ಹನುಮ ಜಯಂತಿ ಸಂಭ್ರಮ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ನಗರದ ವಿವಿಧೆಡೆ ಡಿಸೆಂಬರ್ 20ರಂದು ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಡಿ. 20ರಂದು ಹೊಸಕೆರೆಹಳ್ಳಿ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ಹನುಮ ಜಯಂತಿ ಮಹೋತ್ಸವ ನಡೆಯಲಿದೆ.

ಹನುಮ ಜಯಂತಿ ಜತೆ ರಾಗಿಗುಡ್ಡ ದೇಗುಲದ ಸುವರ್ಣ ಸಂಭ್ರಮ ಹನುಮ ಜಯಂತಿ ಜತೆ ರಾಗಿಗುಡ್ಡ ದೇಗುಲದ ಸುವರ್ಣ ಸಂಭ್ರಮ

ಹೊಸಕೆರೆಹಳ್ಳಿಯಲ್ಲಿರುವ ಮಾರುತಿ ಹನುಮಂತಪ್ಪ ಮುಂಭಾಗದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 15 ನೇ ವರ್ಷದ ಹನುಮ ಜಯತಿ ಮಹೋತ್ಸವವನ್ನು ಆಯೋಜಿಸಲಾಗಿದೆ.

Hanuma Jayanti at Hosakerehalli Abhaya Anjaneya Temple

* ಡಿ. 19 ಬುಧವಾರ ಸಂಜೆ ವಿಶೇಷ ಶ್ರೀ ದುರ್ಗಾಪೂಜೆ ಮತ್ತು ಶ್ರೀ ದುರ್ಗಾ ದೀಪ ನಮಸ್ಕಾರ.
* ಡಿ. 20ರಂದು ಬೆಳಿಗ್ಗೆ ಜೀವೋತ್ತಮ್ಮನಾದ ಪ್ರಾಣದೇವರಿಗೆ ವಿಶೇಷ ಪವಮಾನ ಮಧು ಅಭಿಷೇಕ, ಶ್ರೀ ರಾಮನಾಮ ತಾರಕ ಹೋಮ, ಸಂಜೆ ಶ್ರೀ ಸೀತಾ ಕಲ್ಯಾಣ ಮಹೋತ್ಸವ ಏರ್ಪಡಿಸಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಸತೀಶ್ ದೀಕ್ಷಿತ್ ಮತ್ತು ಧರ್ಮದರ್ಶಿ ಹನುಮಂತಪ್ಪರವರು ತಿಳಿಸಿರುತ್ತಾರೆ.

ಚಾಮರಾಜಪೇಟೆಯಲ್ಲಿ ಹನುಮ ಜಯಂತಿ: ಚಾಮರಾಜಪೇಟೆ 3ನೇ ಚಾಮರಾಜಪೇಟೆ 3ನೇ ಮುಖ್ಯ ರಸ್ತೆಯಲ್ಲಿರುವ ಕನ್ನಡ ತಿಂಡಿ ಕೇಂದ್ರದ ಸಹಯೋಗದೊಂದಿಗೆ ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ 19ನೇ ಹನುಮ ಜಯಂತಿ ಮಹೋತ್ಸವವನ್ನು ಡಿ. 20 ರಿಂದ 22ರವರೆಗೆ ಏರ್ಪಡಿಸಿದೆ.

Hanuma Jayanti at Hosakerehalli Abhaya Anjaneya Temple

ಡಿ. 20 ಬೆಳಿಗ್ಗೆ ಪವಮಾನ ಹೋಮ, ಸಂಜೆ ಖ್ಯಾತ ಪರಿಸರವಾದಿ ಶಿವಮಲ್ಲು ದಾಸರಿಂದ ಮಾರುತಿ ವಿಜಯ ಹರಿಕಥೆ ಡಿ.21 ರಂದು ಬೆಳಿಗ್ಗೆ ಮಹಾಸುದರ್ಶನ ಹೋಮ ಸಂಜೆ ಜೀವಸ್ವರ ಸುಗಮ ಸಂಗೀತ ಆಕಾಡೆಮಿಯಿಂದ ಸುಗಮ ಸಂಗೀತ ಮತ್ತು ಪುಣ್ಯಕೋಟಿ ನೃತ್ಯರೂಪಕ.

ಡಿ. 22ರಂದು ಬೆಳಿಗ್ಗೆ ದತ್ತಾತ್ರೇಯ ಜಯಂತಿ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸಂಜೆ ಸೂರ್ಯ ಆರ್ಟ್ಸ್ ಇಂಟರನ್ಯಾಷನಲ್ ರವರಿಂದ ಧರೆಗಿಳಿದ ದಿವ್ಯ ಚೇತನ ಶ್ರೀ ಶಿರಡಿ ಸಾಯಿ ಬಾಬಾ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಡಾ. ಕೃ.ವೆ. ರಾಮಚಂದ್ರ ರವರು ತಿಳಿಸಿರುತ್ತಾರೆ.

English summary
Hanuma Jaynati will be celebrated on December 20 at Abhaya Anjaneya Temple, Hosakerehalli and Chamarajapet Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X