ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕಲಚೇತನರಿಗೆ ನೀಡುವ ಬೈಕ್ ಗಳು ತುಕ್ಕುಹಿಡಿಯುತ್ತಿದೆ

By ದೊಡ್ಡಬಳ್ಳಾಪುರ ಪ್ರತಿನಿಧಿ
|
Google Oneindia Kannada News

ದೊಡ್ಡಬಳ್ಳಾಪುರ, ಫೆಬ್ರವರಿ 2: ವಿಕಲಾಂಗ ಚೇತನರ ಕೈ ಸೇರಿ ಅವರ ಜೀವನಕ್ಕೆ ಅನುಕೂಲವಾಗುವಾಗಬೇಕಿದ್ದ ದ್ವಿಚಕ್ರವಾಹನಗಳು ಇದೀಗ ಸೂಕ್ತ ರಕ್ಷಣೆ ಇಲ್ಲದೆ ತುಕ್ಕುಹಿಡಿದಿವೆ.

ಶಾಸಕರ ರಾಜಕೀಯ ಕಾರಣಗಳಿಗಾಗಿ ಮಳೆ ಗಾಳಿ ಎನ್ನದೆ ಸೂಕ್ತ ರಕ್ಷಣೆ ಇಲ್ಲದೆ ತುಕ್ಕುಹಿಡಿಯುವ ಹಂತಕ್ಕೆ ಬರುತ್ತಿವೆ. ಅದಕ್ಕೆ ರಕ್ಷಣೆ ಇಲ್ಲದಿರುವುದರಿಂದ ಈಗಾಗಲೇ ಕೆಲ ಬೈಕ್ ಗಳ ಮಿರರ್‌ಗಳು ಕಳ್ಳರ ಪಾಲಾಗಿವೆ. ಸೀಟ್‌ಗಳನ್ನೂ ಕೂಡ ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಹಾಗಾದರೆ ರಾಜಕೀಯ ಪ್ರತಿಷ್ಟೆಯಿಂದಾಗಿ ಯೂಸ್‌ಲೇಸ್ ಆಗಿರುವ ಬೈಕ್ ಗಳ ಸ್ಟೋರಿ ಒಮ್ಮೆ ಓದಿ.

ಬಡ ವಿಕಲಚೇತನರು ಜೀವನ ರೂಪಿಸಿಕೊಳ್ಳಲು ಸಹಾಯವಾಗಲಿ ಎಂದು ರಾಜ್ಯ ಸರ್ಕಾರ ಅಂಗವೈಕಲ್ಯವುಳ್ಳವರಿಗೆ ಬೈಕ್ ಗಳನ್ನು ನೀಡುವ ಯೋಜನೆ ಜಾರಿಗೆ ತಂದಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಫುರ ತಾಲೂಕಿಗೂ ಕೂಡ ೩೮ ಫಲಾನುಭವಿಗಳಿಗೆ ಬೈಕ್ ಗಳು ಬಂದಿದ್ದವು.

Handicap beneficiaries crying for bikes

ಆದರೆ ಬೈಕ್ ಗಳ ವಿತರಣೆಗೆ ಸ್ಥಳೀಯ ಶಾಸಕ ವೆಂಕಟರಮಣಯ್ಯರ ಸಮಯಾಭವದಿಂದ ಹಾಗೂ ಸೂಕ್ತ ರಾಜಕೀಯ ವೇದಿಕೆ ಇಲ್ಲದೆ ಈ ಬೈಕ್ ಗಳು ಕಳೆದ ೩ ತಿಂಗಳಿಂದ ನಿಂತಲ್ಲಿಯೇ ನಿಂತಿವೆ. ಮಳೆ ಗಾಳಿಗೆ ರಕ್ಷಣೆ ಇಲ್ಲದಂತಾಗಿ ಕಬ್ಬಿಣಗಳು ತುಕ್ಕು ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಕೂಡಲೇ ಶಾಸಕರು ಫಲಾನುಭವಿಗಳಿಗೆ ವಿತರಣೆ ಮಾಡಿದರೇ ನಮ್ಮ ಜೀವನಕ್ಕೆ ಅನುಕೂಲವಾಗಲಿದೆ ಅಂತಿದ್ದಾರೆ ಇಲ್ಲಿನ ಸ್ಥಳೀಯರು.

ಇನ್ನೂ ಬಗ್ಗೆ ಶಾಸಕ ವೆಂಕಟರಮಣ್ಯರನ್ನು ಪ್ರಶ್ನೆ ಮಾಡಿದರೆ ಇನ್ನೂ ಫಲಾನುಭವಿಗಳ ಆಯ್ಕೆ ನಡೆಯಬೇಕಿದೆ. ಅಲ್ಲದೆ ಸಂಬಂಧ ಪಟ್ಟ ಇಲಾಖೆಯಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬಂದ ಕೂಡಲೇ ವಿತರಣೆ ಮಾಡುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಅಂತಾ ಜಾರಿಕೆ ಉತ್ತರ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಾಲೂಕಿಗೆ ಬರಲಿದ್ದಾರೆ ಆ ವೇಳೆ ಹಂಚಿಕೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ ಅಂತಾ ಪರೋಕ್ಷವಾಗಿ ತಮ್ಮ ರಾಜಕೀಯ ನಡೆಯನ್ನೂ ಕೂಡ ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮ ಯೋಜನೆ ಜಾರಿಗೆ ತಂದರೆ ಇತ್ತ ಅವರೇ ಸರ್ಕಾರದ ಶಾಸಕರ ನಿರ್ಲಕ್ಷ್ಯ ಹಾಗೂ ರಾಜಕೀಯ ನಡೆಯಿಂದಾಗಿ ಈ ಬೈಕ್ ಗಳ ಅನಾಥವಾಗಿ ಕೊಳೆಯುವ ಪರಿಸ್ಥಿತಿಗೆ ಬಂದಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

English summary
Doddaballapur taluk administration has been allotted two wheeler motor bikes for 38 handicapped beneficiaries but still have not been distributed the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X