ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಗ್ರಾಹಕರನ್ನು ಸೆಳೆಯುತ್ತಿರುವ ಮಣಿಪುರದ ಮಡಿಕೆ

|
Google Oneindia Kannada News

ಬೆಂಗಳೂರು ಜೂನ್ 27: ಭಾರತ ದೇಶದಲ್ಲಿ ಹಲವಾರು ಬಗೆ ಬಗೆಯ ಕರಕುಶಲಕಾರರಿದ್ದಾರೆ. ಅವರು ತಯಾರಿಸುವ ಕಲಾಕೃತಿಗಳು ಹಾಗೂ ದಿನನಿತ್ಯದ ಬಳಕೆಯ ಸಾಮಗ್ರಿಗಳು ಎಲ್ಲರ ಗಮನ ಸೆಳೆಯುತ್ತವೆ ಹಾಗೂ ವಿಶೇಷವಾಗಿರುತ್ತವೆ. ಇಂತಹ ವಿಶೇಷ ಮಣೀಪುರದ ಲಾಂಗ್ ಪೀ ಹಾಗೂ ಬ್ಯಾಕ್ ಸ್ಟೋನ್ ಪಾಟರಿ ಈ ಬಾರಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ದಿ ಸೋಕ್ ಮಾರ್ಕೇಟ್ ನ ಭರ್ಜರಿ ಹಿಟ್.

ಮಣಿಪುರ ರಾಜ್ಯದ ಲಾಂಗ್ ಪೀ ಗ್ರಾಮದಲ್ಲಿ ಮಾತ್ರ ಸಿಗುವ ಕಪ್ಪು ಕಲ್ಲು ಹಾಗೂ ವಿಶೇಷ ಕಂದು ಬಣ್ಣದ ಮಣ್ಣಿನಿಂದ ತಯಾರಿಸಲಾಗುವ ಈ ಕಮ್ಮಾರಿಕೆಯ ವಸ್ತುಗಳು ದೇಶ ಹಾಗೂ ವಿದೇಶದಲ್ಲಿ ಬಹಳ ಪ್ರಸಿದ್ದಿಯನ್ನ ಪಡೆದುಕೊಂಡಿವೆ.

ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್ ಮಾರ್ಕೆಟ್' ಉದ್ಘಾಟಿಸಿದ ಪದ್ಮಜಾ ರಾವ್ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್ ಮಾರ್ಕೆಟ್' ಉದ್ಘಾಟಿಸಿದ ಪದ್ಮಜಾ ರಾವ್

ಕಳೆದ 6 ದಿನಗಳಿಂದ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ಸೋಕ್ ಮಾರ್ಕೆಟ್ ನಲ್ಲಿ ಪಾಲ್ಗೊಂಡಿರುವ ಲಾಂಗ್ ಪಿ ಅಥವಾ ಕಪ್ಪು ಬಣ್ಣದ ಮಡಿಕೆಗಳ ಅಂಗಡಿ ಎಲ್ಲರ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ ಮಡಿಕೆಗಳನ್ನು ಅಥವಾ ಕಮ್ಮಾರಿಕೆಗೆ ಬಳಸುವ ಚಕ್ರವನ್ನು ಈ ಪಾಟರಿಗಳ ತಯಾರಿಕೆಯಲ್ಲಿ ಬಳಸಲಾಗುವುದಿಲ್ಲಾ. ತಮ್ಮ ಕೈಯಿಂದಲೇ ತಯಾರಿಸುವ ಈ ಕಮ್ಮಾರಿಕೆಯ ವಸ್ತುಗಳನ್ನು ಅಡಿಗೆ ಮಾಡಲು ಬಳಸಲಾಗುತ್ತದೆ.

ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ

ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ

ಜೂನ್ 21 ರಿಂದ ಜೂನ್ 30 ರ ವರೆಗೆ ನಗರದ ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ ದಿ ಸೋಕ್ ಮಾರ್ಕೆಟ್ ಎನ್ನುವ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಕಲಾವಿದರು ಹಾಗೂ ಕಲಾಪ್ರಕಾರಗಳು ಪಾಲ್ಗೊಳ್ಳಲಿವೆ. ಈ ಮೇಳದಲ್ಲಿ ಹೋಂ ಡೆಕೋರ್‍ಗಳು, ಲ್ಯಾಂಪ್‍ಶೇಡ್‍ಗಳು, ಹ್ಯಾಂಡ್‍ಲೂಮ್ಸ್, ಹ್ಯಾಂಡ್‍ಕ್ರಾಫ್ಟ್‍ಗಳು, ತಂಜಾವೂರ್ ಪೇಂಟಿಂಗ್‍ಗಳು, ಮಧುಬನಿ, ಒರಿಸ್ಸಾ ಪೇಂಟಿಂಗ್‍ಗಳು, ಕೋಲ್ಕತ್ತಾ ಪೇಂಟಿಂಗ್‍ಗಳು, ವಿವಿಧ ಬಗೆಯ ಸೀರೆಗಳು, ರೇಷ್ಮೆ ಸೀರೆಗಳು, ಕಾಶ್ಮೀರಿ ಸೀರೆಗಳು, ಕೋಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಮಣಿಪುರ, ಚಂದೇರಿ ಸೀರೆಗಳು, ಕಾಂತವರ್ಕ್ ಸೀರೆಗಳು, ಕಲಾಮ್ಕರಿ ಸೀರೆಗಳು, ಲೈನೆನ್ ಸಿಲ್ಕ್ ಸೀರೆಗಳು ಮತ್ತು ಬಾಗಲ್ಪುರಿ ಸೀರೆಗಳು ಇರಲಿವೆ

ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ

ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ

ಇಲ್ಲಿ ಹುಲ್ಲಿನ ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಈ ಮೇಳದ ಮುಖ್ಯ ಉದ್ದೇಶ

ಸಾಂಪ್ರದಾಯಿಕ ಕಲಾಕೌಶಲ್ಯವನ್ನು ಬಳಸಿ ಆಧುನಿಕ ಜೀವನ ಶೈಲಿಗೆ ತಕ್ಕ ಉತ್ಪನ್ನಗಳನ್ನು ತಯಾರಿಸುವುದಾಗಿದೆ.

ದ ಸೋಕ್ ಮಾರ್ಕೇಟ್
ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ಜೂನ್ 28 ರಿಂದ ಜೂನ್ 30, 2019 ರ ವರೆಗೆ
ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7.30 ರ ವರೆಗೆ

ಕಲಾಪ್ರಕಾರಗಳು ಮರೆಯಾಗುವ ಆತಂಕ

ಕಲಾಪ್ರಕಾರಗಳು ಮರೆಯಾಗುವ ಆತಂಕ

ಕಾರ್ಯಕ್ರಮದ ಸಂಚಾಲಕರಾದ ಅಫ್ತಾಬ್ ಮಾತನಾಡಿ, ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ. ಇಂತಹ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಮಾರಾಟ ಮೇಳ ಆಯೋಜಿಸಲಾಗಿದೆ ಎಂದರು,

ವಿವಿಧ ರೀತಿಯ ಕುಶಲ ಕಲಾಕೃತಿ

ವಿವಿಧ ರೀತಿಯ ಕುಶಲ ಕಲಾಕೃತಿ

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ 21/06/2019 ರಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಿದ್ದು, 30/06/2019 ರ ವರೆಗೆ ನಡೆಯಲಿದೆ. ಮಹಿಳೆಯರಿಗೆ ಇಷ್ಟವಾಗುವ ಕಾಶ್ಮೀರಿ ಬ್ಯಾಗ್‍ಗಳು, ಕಲಾಮ್ಕರಿ ಬ್ಯಾಗ್‍ಗಳು, ಖಾದಿ ಕುರ್ತಾಗಳು ಇವೆ. ವಿವಿಧ ಬಗೆಯ ವಿನ್ಯಾಸದ ಆಭರಣಗಳು, ಒರಿಸ್ಸಾ ಆಭರಣಗಳು, ರಾಜಸ್ಥಾನಿ ಆಭರಣಗಳು, ಹ್ಯಾಂಡ್‍ಮೇಡ್ ಆಭರಣಗಳು ಹೀಗೆ ನೂರಾರು ಬಗೆಯ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಲಿವೆ.

English summary
Handamade Black Pottery from Manipur has become main attraction at Consumer show cum shopping festival The Souq being held ta Chitra Kala Parishat, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X