ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಸಲೇಖಾರ ಮಹೋನ್ನತ ಕನಸು ಐದನಿಗೆ ಚಾಲನೆ

|
Google Oneindia Kannada News

ಬೆಂಗಳೂರು, ಮೇ 27: ಭಾರತೀಯ ಜಾನಪದ ಸಂಗೀತಕ್ಕೆ ಹೊಸ ಶಾಸ್ತ್ರೀಯತೆ ಸ್ಪರ್ಶ ನೀಡುವ ಮೂಲಕ ಅದನ್ನು ಮುಂದಿನ ತಲಾಂತರಗಳವರೆಗೆ ಉಳಿಸಿ, ಬೆಳೆಸುವ ಮಹತ್ಕಾರ್ಯಕ್ಕೆ ಕೈ ಹಾಕಿರುವ ನಾದ ಬ್ರಹ್ಮ ಹಂಸಲೇಖ, 'ಐದನಿ' ಎಂಬ ಬೃಹತ್ ಯೋಜನೆಗೆ ಕೈ ಹಾಕಿದ್ದಾರೆ.

ಆ ಯೋಜನೆಯ ಅನಾವರಣ ನಗರದ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲ್ ನಲ್ಲಿ ಶನಿವಾರ ಜರುಗಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಐದನಿಯ ಮುಂದಿನ ಯೋಜನೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಜಾನಪದ ಕೋಗಿಲೆ ಸುಕ್ರಿ ಬೊಮ್ಮನ ಗೌಡ ಅವರು ಹಾಜರಿದ್ದರು.

ಏನಿದು ಐದನಿ?
ಕಾರ್ಯಕ್ರಮದಲ್ಲಿ ಮಾತನಾಡಿದ ಐದನಿಯ ರೂವಾರಿ ಹಂಸಲೇಖ, ಸಂಗೀತದ ಐದು ಧನಿಗಳು ನಿಸರ್ಗದಲ್ಲಿಯೇ ಇದ್ದವು. ಮನುಷ್ಯ ತನ್ನ ಅಂತರಾತ್ಮದ ಮೂಲಕ ಐದು ದನಿಗಳನ್ನು ಕಂಡುಕೊಂಡು ನಾದಗಳನ್ನು ಹೊರಹೊಮ್ಮಿಸಿದ.

hamsalekha-s-iydani-launched-bengaluru-the-presence-sp-balasubrahmanyam

ಹಂಸಲೇಖ ಮ್ಯೂಸಿಕ್ ಟ್ರಸ್ಟ್ ಐದನಿ ಮೂಲವನ್ನು ಕಂಡುಹಿಡಿಯಲು ಕಳೆದ 12 ವರ್ಷಗಳಿಂದ ಸಂಶೋಧನೆ ನೆಡೆಸಿದೆ.

ಬುಡಕಟ್ಟು ಜನಾಂಗಗಳು ಗಣೆ ಎಂಬ ವಾದ್ಯವನ್ನು ನುಡಿಸುತ್ತಿದ್ದವು. ಗಣೆಯಂಬುದು ನಾಲ್ಕು ರಂಧ್ರಗಳ ವಾದ್ಯ. ಆದರೆ ನಾಲ್ಕು ರಂಧ್ರಗಳು ಅವೈಜ್ಞಾನಿಕವಾಗಿ ಕೊರೆಯಲ್ಪಟ್ಟಿದ್ದವು.

ಆದರೂ, ಆ ಕೊಳಲುಗಳಿಂದ ಹೊರಹೊಮ್ಮುವ ನಾದದಲ್ಲಿ ಮೂಲಭೂತವಾಗಿ ಐದು ದನಿಗಳು ಮಾತ್ರ ಸಿಕ್ಕವು ಎಂದರು.

ಹೀಗೆ, ಜಾನಪದಗಳಿಗೆ ಮೂಲವಾಗಿರುವ ಐದು ದನಿಗಳನ್ನು ಗುರುತಿಸಿ ಅವಕ್ಕೆ ಐದನಿಗಳೆಂದು ಹೆಸರಿಟ್ಟು ಅವುಗಳನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿರುವುದಾಗಿ ತಿಳಿಸಿದರು.

ಮುಂದಿನ ಯೋಜನೆ
ಆನಂತರ, ತಮ್ಮ ಮುಂದಿನ ಕಾರ್ಯ ಯೋಜನೆಯನ್ನು ವಿವರಿಸಿದ ಅವರು, ''ಆಗಸ್ಟ್ 21 ವಿಶ್ವ ಜಾನಪದ ದಿನದಂದು ಕರ್ನಾಟಕದ ಮುಖ್ಯಮಂತ್ರಿಯವರು ಐದನಿಯ ವರ್ಷ-2017 ಉಧ್ಘಾಟಿಸಲಿದ್ದಾರೆ. ಆಗಸ್ಟ್ 21, 2018 ರಿಂದ ಒಂದು ವಾರ ಜಗದ್ ಜನಪದ ಜಾತ್ರೆ ನಡೆಯಲಿದೆ.

ಅದರಲ್ಲಿ 30 ರಾಜ್ಯಗಳ 45 ಪ್ರತಿನಿಧಿಗಳು ಹಾಗೂ ಬೇರೆ ಬೇರೆ ದೇಶಗಳ 15 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಐದನಿಯ ಕಾರ್ಯಕ್ರಮಗಳ ಪ್ರದರ್ಶನ ಒಂದು ವಾರ ನೆಡೆಯಲಿದೆ.

ಕ್ಲಿಯರ್ ನ್ಯೂಕ್ಲಿಯರ್ ಎಂಬ ಕಲೆಯ ಮೂಲಕ ಅಣ್ವಸ್ತ್ರದ ಬೆದರಿಕೆಯನ್ನು ಕಲೆಯ ಮೂಲಕ ಹೊಗಲಾಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

hamsalekha-s-iydani-launched-bengaluru-the-presence-sp-balasubrahmanyam

ಹಂಸಲೇಖ ಕೆಲಸಕ್ಕೆ ಶ್ಲಾಘನೆ
ಆನಂತರ ಮಾತನಾಡಿದ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರು, ಕಳೆದ ಹತ್ತು ವರ್ಷಗಳ ಹಿಂದೆ ಹಂಸಲೇಖ ಸಂಗೀತವಿಲ್ಲದ ಚಿತ್ರಗಳಲ್ಲಿ ಕನ್ನಡದಲ್ಲಿ ಬರುತ್ತಿದ್ದುದೇ ವಿರಳ. ಅಷ್ಟು ಬಿಡುವಿಲ್ಲದೆ ದುಡಿಯುತ್ತಿದ್ದ ಹಂಸಲೇಖ ಅವರು, ಈಗ ಕೊಂಚ ಆರಾಮಾಗಿದ್ದಾರೆ.

ಆದರೆ, ಈ ಬಿಡುವಿನ ವೇಳೆಯಲ್ಲಿ ಸತತ ಸಂಶೋಧನೆಗಳನ್ನು ನಡೆಸಿ ಜಾನಪದವನ್ನು ಮುಂದಿನ ತಲೆಮಾರಿಗೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆನಂತರ, ಐದನಿ ಬಗ್ಗೆ ಮಾತನಾಡಿದ ಅವರು, ಭಾರತೀಯ ಸಂಗೀತಕ್ಕೆ ಮಾತೃಭೂಮಿ ಕರ್ನಾಟಕ ಸಂಗೀತ ಶಾಸ್ತ್ರ. ಈ ರಾಗಭೂಮಿಯ ಗೌರಿ ಶಿಖರವೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ.

- ಈ ಭಾವ ಶಿಖರದಿಂದ ಆದ ರಾಗಾವತರಣವೇ ಜನಪದ ಶಾಸ್ತ್ರೀಯ ಸಂಗೀತ.

ಐದನಿ ಅಂದರೆ ಐದು ಸ್ವರಗಳ ರಾಗ. ಭಾರತೀಯ ಸಂಗೀತ ಶಾಸ್ತ್ರದಲ್ಲಿ ಇದಕ್ಕೆ ಔಢವ ರಾಗ ಅಂತ ಹೆಸರಿದೆ.

- ಪಾಶ್ಚಿಮಾತ್ಯ ಸಂಗೀತದ ಸ್ಟಾಫ್ ನೊಟೇಷನ್ ಪ್ರಪಂಚ ಸಂಗೀತ ಲಿಪಿ. ಅದಕ್ಕೆ ಸರಿಸಮಾನವಾಗಿ, ಅದಕ್ಕಿಂತಲೂ ಸರಳವಾಗಿ ದೇಸಿ ನೊಟೇಷನ್ ಬೆಳಕಿಗೆ ಬಂದಿದೆ. ಇದು ಹಂಸಲೇಖ ಮ್ಯೂಸಿಕ್ ಟ್ರಸ್ಟ್ ನ ಮುಖೇನ ಜಗತ್ ಜಾನಪತ ಸಂಗೀತಕ್ಕೆ ಕರ್ನಾಟಕದ ಕೊಡುಗೆ.

- ಹಂಸಲೇಖ ಅವರು ಜನಪದ ಸಂಗೀತ ಶಾಸ್ತ್ರದಲ್ಲಿ ಔಢವ ರಾಗಗಳಿಗೆ ಐದನಿ ಅಂತ ಹೆಸರಿಟ್ಟಿದ್ದಾರೆ.

ಇದು ಜನಪದ ಸಂಗೀತದ ಶಾಸ್ತ್ರೋಕ್ತ ಶಿರೋನಾಮೆ.

ಇನ್ನು ಮುಂದೆ ದೇಸೀ ಶಾಸ್ತ್ರೀಯ ಸಂಗೀತಕ್ಕೆ ಐದನಿಯೇ ಅಡಿಪಾಯ. ಇದಕ್ಕೆ ಕಾರಣ ಐದನಿಗಳು ಪಂಚಭೂತಗಳ ಪ್ರತಿನಿಧಿಗಳು. ಪ್ರಪಂಚ ಸಂಗೀತದ ಪ್ರಥಮ ಪ್ರಧಾನಿ.

ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 21ರಿಂದ ನಡೆಯುವ ವಿಶ್ವ ಜನಪದ ದಿನಾಚರಣೆಯಂದು ಕಳೆದ ಹನ್ನೆರಡು ವರ್ಷಗಳಿಂದ ಹಂಸಲೇಖ ಅವರು ನಡೆಸಿಕೊಂಡು ಬಂದಿರುವ ಪ್ರಯೋಗಗಳನ್ನು ಲೋಕಾರ್ಪಣೆ ಮಾಡಲಿದೆ.

ಭಾರತದ ಸಂಗೀತ, ನೃತ್ಯ, ನಾಟಕ ಮತ್ತು ದೃಶ್ಯಕಲಾ ಮಾಧ್ಯಮಗಳಿಗೆ ಗ್ಲೋಬಲ್ ಸ್ಟೇಟಸ್ ತರುವ ಮಹತ್ವದ ಯೋಜನೆಯಿದು.

ಐದನಿಗೆ ತನ್ನದೇ ಆದ ಸಂಗೀತ ಲಿಪಿ ಆವಿಷ್ಕಾರವಾಗಿದೆ. ಅದಕ್ಕೆ ದೇಸೀ ನೊಟೇಷನ್ ಎಂದು ಹೆಸರು.

ಇದು ಕಮರ್ಷಿಯಲ್ ಆಗಿ ಸಕ್ಸಸ್ ಆಗಲಿ. ಕಮರ್ಷಿಯಲ್ ಆಗದಿರಲಿ. ಇದು ನನ್ನ ವಿನಂತಿ ಎಂದು ಚಟಾಕಿ ಹಾರಿಸಿದರು.

ಕೋಗಿಲೆಯ ಶುಭ ಹಾರೈಕೆ
ಈ ಸಂದರ್ಭದಲ್ಲಿ ಒಂದು ಹಾಲಕ್ಕಿ ಹಾಡನ್ನು ಹಾಡಿ, ಆನಂತರ ಮಾತನಾಡಿದ ಕರ್ನಾಟಕದ ಜಾನಪದ ಕೋಗಿಲೆ ಸುಕ್ರಿ ಬೊಮ್ಮನಗೌಡ, ಹಂಸಲೇಖಾರ ಪ್ರಯತ್ನಕ್ಕೆ ಶುಭವಾಗಲಿ ಎಂದರು.

English summary
Hamsalekha's Iydani launched on May 27, 2017 at an Atria Hotel Bengaluru. It is a year program said Hamsalekha which has an ideology to promote folk music to higher levels. Legendary singer SP Balasubrahmanyam announced the one year program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X