ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರವೇ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿ ತಗ್ಗಲಿದೆ ಸಂಚಾರ ದಟ್ಟಣೆ

|
Google Oneindia Kannada News

ಬೆಂಗಳೂರು, ಜೂನ್ 25: ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಮುಂದಿನ ಎಂಟು ಒಂಬತ್ತು ತಿಂಗಳಲ್ಲಿ ಎಚ್‌ಎಎಲ್‌ ಪ್ರದೇಶದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ.

ಹಾಗೆಯೇ ಸಿಗ್ನಲ್ ಫ್ರೀ ಕಾರಿಡಾರ್ ಕೂಡ ನಿರ್ಮಾಣವಾಗುತ್ತಿದ್ದು, ವೈಟ್‌ಫೀಲ್ಡ್‌ನಿಂದ ವೆಲ್ಲಾರ ಜಂಕ್ಷನ್ , ರಿಚ್‌ಮಂಡ್ ವೃತ್ತದಲ್ಲಿ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗಲಿದೆ.

ಫ್ಲೈಓವರ್ ವಿಲೀನ, ಹೆಬ್ಬಾಳ ಔಟರ್ ರಿಂಗ್ ರಸ್ತೆ ಮಧ್ಯೆ ಸಂಚಾರ ಸುಗಮ ಫ್ಲೈಓವರ್ ವಿಲೀನ, ಹೆಬ್ಬಾಳ ಔಟರ್ ರಿಂಗ್ ರಸ್ತೆ ಮಧ್ಯೆ ಸಂಚಾರ ಸುಗಮ

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಸುರಂಜನ್ ದಾಸ್ ರಸ್ತೆಯಲ್ಲಿ ಪೀಕ್ ಅವಧಿಯಲ್ಲಿ ಹಾಗೂ ಸಂಜೆ ಹೊತ್ತು ಕಾರು ಹೊಂದಿರುವವರು ಸೇರಿ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ.

HAL underpass work will complete within 9 months

ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು ಈ ಅಂಡರ್‌ಪಾಸ್‌ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, 19 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ನಿರ್ಮಿಸಲಾಗುತ್ತಿದೆ. ಮಾರತ್ತಹಳ್ಳಿಯಿಂದ ನಗರದಕಡೆಗೆ ಬರುವವರಿಗೆ ನೇರವಾಗಿ ಉಪಯೋಗವಾಗಲಿದೆ. ಇನ್ನು ಸುರಂಜನ್ ದಾಸ್ ರಸ್ತೆ ಕಡೆಯಿಂದ ಬರುವವರಿಗೂ ಅನುಕೂಲವಾಗಲಿದೆ.

ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ ಎಚ್‌ಎಎಲ್ ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಭೂಮಿ ನೀಡಲು ಹಿಂದೇಟು ಹಾಕಿತ್ತು. ಒಂದು ವರ್ಷದ ಹಿಂದೆ 3,100 ಸ್ಕ್ವೇರ್ ಮೀಟರ್‌ನಷ್ಟು ಭೂಮಿಯನ್ನು ನೀಡಿತ್ತು. ಆದರೆ ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

English summary
HAL underpass work will complete within 9 months, The traffic congestion in Old Airport road is set to have big relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X