• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಪೂರ್ಣಗೊಳಿಸಿದ ಎಚ್‌ಎಎಲ್

|

ಬೆಂಗಳೂರು, ಮಾರ್ಚ್ 26: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 16ನೇ ಎಲ್‌ಸಿಎ ತೇಜಸ್ ಯುದ್ಧ ವಿಮಾನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಿಂಗಳಾಂತ್ಯಕ್ಕೆ ಸೇನಾಪಡೆ (ಗ್ರಾಹಕ) ಹಾರಾಟ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಸಲಾಗುವುದು. ವಾರ್ಷಿಕ 8 ವಿಮಾನಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯವನ್ನು ಎಚ್ಎಎಲ್ ಹೊಂದಿದೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಅತಿ ಹಗುರ ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್

ಒಟ್ಟು 40 ತೇಜಸ್‌ಗಳಿಗೆ ಭಾರತೀಯ ವಾಯುಸೇನೆ ಆರ್ಡರ್‌ ನೀಡಿದೆ. ಈ ಪೈಕಿ ಆರಂಭಿಕ ಕಾರ್ಯಾಚರಣೆ ಪ್ರಮಾಣಪತ್ರ (ಐಒಸಿ) ಹೊಂದಿರುವ ಮತ್ತು ಅಂತಿಮ ಕಾರ್ಯಾಚರಣೆ ಪ್ರಮಾಣಪತ್ರ ಹೊಂದಿರುವ ತಲಾ 16 ಫೈಟರ್‌ಗಳು ಹಾಗೂ 8 ತರಬೇತಿ ಉದ್ದೇಶದ ಫೈಟರ್‌ಗಳು ಸೇರಿವೆ.

ಇತ್ತೀಚೆಗೆ ಎಫ್‌ಒಸಿ ಸಂಬಂಧಿಸಿದ ದಾಖಲೆಗಳು ಎಚ್‌ಎಎಲ್‌ನಲ್ಲಿ ಸ್ವೀಕೃತಗೊಂಡಿವೆ. ಹೀಗಾಗಿ, ಎಫ್‌ಒಸಿ ಗುಣಮಟ್ಟದ ಫೈಟರ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಎಚ್‌ಎಎಲ್‌ ಹೇಳಿದೆ.

ಮಿರಾಜ್ ಯದ್ಧ ವಿಮಾನ ಪತನಕ್ಕೆ ಪೈಲೆಟ್ ಕಾರಣರಲ್ಲ

2014ರಲ್ಲಿ ತೇಜಸ್‌ ಉತ್ಪಾದನೆ ಆರಂಭಗೊಂಡಿದ್ದು, ಹಾಲಿ ವರ್ಷಕ್ಕೆ 8 ವಿಮಾನಗಳನ್ನು ಉತ್ಪಾದಿಸುವ ಸಾಮರ್ಥವನ್ನು ಎಚ್‌ಎಎಲ್‌ ಹೊಂದಿದೆ. ಬೆಂಗಳೂರು ಸಂಕೀರ್ಣದಲ್ಲೇ ಮತ್ತೊಂದು ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು, ವಿಮಾನ ಬಿಡಿಭಾಗಗಳ ಜೋಡಣೆ, ಅಂತಿಮ ಜೋಡಣೆ ಕಾರ್ಯ ನಡೆಸಲಾಗುತ್ತದೆ.

English summary
State-run Hindustan Aeronautics Ltd (HAL) on Monday said it has rolled out its 16th Light Combat Aircraft (LCA) Tejas fighter in the initial operational clearance (IOC) configuration to be inducted into the fleet of Indian Air Force (IAF).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X