ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 2019: ಎಚ್‌ಎಎಲ್ ಈಗಲೂ ಮುಂಚೂಣಿಯಲ್ಲಿ

|
Google Oneindia Kannada News

ಬೆಂಗಳೂರು, ಫೆ 15: ಏರೋ ಇಂಡಿಯಾ 2019 ರಲ್ಲಿ ವೈಮಾನಿ ಪ್ರದರ್ಶನದಲ್ಲಿ ಈ ಬಾರಿಗೂ ಎಚ್ಎಲ್ ಮುಂಚೂಣಿಯಲ್ಲಿದೆ.

ಎಲ್‌ಯುಎಚ್‌ ಪಿಟಿ-1, ಎಲ್‌ಸಿಎಚ್‌ ಟಿಡಿ-2, ಎಎಲ್‌ಎಚ್‌ (ಸುಧಾರಿತ ಲಘು ಹೆಲಿಕಾಪ್ಟರ್‌) ರುದ್ರ ಮತ್ತು ವೈದ್ಯಕೀಯ ತೀವ್ರ ನಿಗಾ ವ್ಯವಸ್ಥೆ ಇರುವ ಆ್ಯಂಬುಲೆನ್ಸ್‌ ಹೆಲಿಕ್ಯಾಪ್ಟರ್‌ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನೌಕಾಪಡೆ ಬಳಕೆಗಾಗಿ ಬಾಲ ಮತ್ತು ಮುಖ್ಯರೆಕ್ಕೆಗಳನ್ನು ಮಡಚಬಲ್ಲ ಹೆಲಿಕಾಪ್ಟರ್‌ (ಅಭಿವೃದ್ಧಿ ಹಂತದಲ್ಲಿದೆ) ಪ್ರಮುಖ ಆಕರ್ಷಣೆಯಾಗಲಿದೆ.

ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ

ಜಾಗ್ವಾರ್‌ ಸಿಮ್ಯುಲೇಟರ್‌: ವಿಮಾನ ಹಾರಾಟದ ನೈಜ ಅನುಭವ ನೀಡುವ ಹೋಲೋಗ್ರಾಫಿಕ್‌ ರೂಮ್‌ ಮತ್ತು ಜಾಗ್ವಾರ್‌ ವಿಮಾನದ ಸಿಮ್ಯುಲೇಟರ್‌ ಇರಲಿದೆ.

HAL leads the country at Aero India 2019

ಮಿಲಿಟರಿ, ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಯೂಆರ್‌ಎಸ್‌ಎಎಂ, ಬಾಂಬ್‌ ಪೆಲ್ಲೆಟ್‌ಗಳು, ನಿಲ್ದಾಣದಲ್ಲಿ ವಿಮಾನಗಳನ್ನು ಸಾಗಿಸುವ ಟ್ರ್ಯಾಕ್ಟರ್‌, ಕ್ಷಿಪಣಿ ಉಡಾವಣೆಗೆ ಬಳಕೆಯಾಗುವ ವಾಹನಗಳು ಸೇರಿದಂತೆ ಇನ್ನಿತರ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶಿಯವಾಗಿ ನಿರ್ಮಾಣವಾಗಿರುವ ಎಲ್‌ಸಿಎ ತೇಜಸ್‌, ಲಘು ತರಬೇತಿ ವಿಮಾನ ಎಚ್‌ಟಿಟಿ-40, ದೇಶಿಯವಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿರುವ ಮೊದಲ ಹಾಕ್‌ ಎಂಕೆ132 ವಿಮಾನ (ಹಾಕ್‌-ಐ), ನಾಗರೀಕ ವಿಮಾನ ಸರಣಿಯ ಡಾರ್ನಿಯರ್‌ 228, ಸುಧಾರಿತ ಲಘು ಹೆಲಿಕಾಪ್ಟರ್‌ ರುದ್ರ, ಲಘು ಬಳಕೆ ಹೆಲಿಕಾಪ್ಟರ್‌ (ಎಲ್‌ಯುಎಚ್‌), ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌) ಏರೋ ಇಂಡಿಯಾದಲ್ಲಿ ಹಾರಾಟ ನಡೆಸಲಿವೆ. ಇದೇ ವೇಳೆ ಸೂರ್ಯ ಕಿರಣ್‌ ಮತ್ತು ಎಎಲ್‌ಎಚ್‌ ಧ್ರುವ ಏರೋಬ್ಯಾಟಿಕ್‌ ತಂಡಗಳು ಎಂದಿನಂತೆ ವಿಶೇಷ ಪ್ರದರ್ಶನ ನೀಡಲಿವೆ.

English summary
Hindustan Aeronautics Limited (HAL) has taken a lead role in conducting the Aero India -2019 to be held at Air Force Station, Yelahanka, Bengaluru from February 20 to 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X