ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇತನ ಹೆಚ್ಚಳಕ್ಕೆ ಒತ್ತಾಯಿಸಿ 2000 HAL ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಮುಷ್ಕರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ವೇತನ ಪರಿಷ್ಕರಣೆಗೆ ಒತ್ತಾಯಿಸಿ 2000 ಕ್ಕೂ ಹೆಚ್ಚು ಎಚ್‌ಎಎಲ್‌ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳಿಗಾಗಿ ಎಚ್‌ಎಎಲ್‌ ಸಿಬ್ಬಂದಿ ತಮ್ಮ ವ್ಯವಸ್ಥಾಪನಾ ಮಂಡಳಿ ಜೊತೆಗೆ ಭಾನುವಾರ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಫಲಪ್ರದವಾಗದ ಕಾರಣ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.

ವೇತನ ತಾರತಮ್ಯ ಖಂಡಿಸಿ ಎಚ್ ಎಎಲ್ ನೌಕರರಿಂದ ಉಪವಾಸ ಸತ್ಯಾಗ್ರಹವೇತನ ತಾರತಮ್ಯ ಖಂಡಿಸಿ ಎಚ್ ಎಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ

ಎಚ್‌ಎಎಲ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಎಚ್‌ಎಎಲ್‌ ನೌಕರರ ಸಂಘಗಳೆಲ್ಲವೂ ಪ್ರತಿಭಟನೆಗೆ ಬೆಂಬಲ ನೀಡಿವೆ. ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿರುವ ಎಚ್‌ಎಎಲ್‌ ಸಿಬ್ಬಂದಿ ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆಲ್ ಇಂಡಿಯಾ ಎಚ್‌ಎಎಲ್‌ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

HAL Employees On Indefinite Strike From Monday

ಎಚ್‌ಎಎಲ್‌ ಸಿಬ್ಬಂದಿ ಈಗಾಗಲೇ ಎಚ್‌ಎಎಲ್‌ ಗೇಟಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದು ದೇಶದ ವಿವಿಧ ರಾಜ್ಯಗಳಲ್ಲಿರುವ ಎಚ್‌ಎಎಲ್‌ ಸಿಬ್ಬಂದಿ ಸಹ ಆಯಾ ಕಚೇರಿ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.

ಶೀಘ್ರವೇ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿ ತಗ್ಗಲಿದೆ ಸಂಚಾರ ದಟ್ಟಣೆ ಶೀಘ್ರವೇ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿ ತಗ್ಗಲಿದೆ ಸಂಚಾರ ದಟ್ಟಣೆ

ಕೆಫೆಟೇರಿಯಾಗೆ ಭತ್ಯೆ ಹೆಚ್ಚಳ, ಫಿಟ್‌ಮೆಂಟ್ ಭತ್ಯೆ ಹೆಚ್ಚಳ ಸೇರಿ ಇನ್ನೂ ಕೆಲವು ವೇತನ ಪರೀಕ್ಷರಣೆಗೆ ಎಚ್‌ಎಎಲ್‌ ಸಿಬ್ಬಂದಿ ಒತ್ತಾಯಿಸಿದ್ದರು. ತಮ್ಮ ಬೇಡಿಕೆಗಳು ನ್ಯಾಯಯುತ ಮತ್ತು ಈಡೇರಿಸಬಹುದಾದ ಬೇಡಿಕೆಗಳು ಎಂದು ಎಚ್‌ಎಎಲ್‌ ನೌಕರರ ಸಂಘ ಹೇಳಿದೆ.

English summary
HAL employees on indefinite strike from Monday demanding wage revision. All India HAL employees organization call for strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X