• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳಲ್ಲಿ : ಹಾಲಕ್ಕಿ ಒಕ್ಕಲಿಗರ ಸೊಬಗು ಅನಾವರಣ

By ಹೃಷಿಕೇಶ ಬಹದ್ದೂರ ದೇಸಾಯಿ
|

ಬೆಂಗಳೂರು, ಅ.29: ಕರ್ನಾಟಕದ ಪ್ರಮುಖ ಬುಡಕಟ್ಟು ಜನಾಂಗವಾದ ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ, ಆಚರಣೆ, ಸಾಂಪ್ರದಾಯಿಕ ಉಡುಗೆ ತೊಡಗೆ ಮತ್ತು ವೇಷ ಭೂಷಣಗಳ ಸೊಬಗು ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಅನಾವರಣಗೊಂಡಿದೆ.

ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಛಾಯಾಗ್ರಾಹಕ ಕೆ. ವೆಂಕಟೇಶ್ ಅವರ ಕೆಮೆರಾ ಕೈಚಳಕ ಹಾಗೂ ಬುಡಕಟ್ಟು ಜನಾಂಗದ ವೈವಿಧ್ಯಮಯ ಬದುಕಿನ ಪರಿಚಯ ನೀಡುವ 'ಹಾಲಕ್ಕಿ ಒಕ್ಕಲಿಗ ಚಿತ್ರಕಲಾ ಪ್ರದರ್ಶನ'ವನ್ನು ಮೆಚ್ಚಿಕೊಂಡಿದ್ದಾರೆ. ಅಕ್ಟೋಬರ್ 27ರಂದು ಆರಂಭಗೊಂಡಿರುವ ಈ ಚಿತ್ರಗಳ ಪ್ರದರ್ಶನ ಅ.30ರಂದು ಕೊನೆಗೊಳ್ಳಲಿದೆ. ಆಸಕ್ತರು ಬೆಳಗ್ಗೆ 10 ರಿಂದ ಸಂಜೆ 7 ರೊಳಗೆ ಚಿತ್ರಕಲಾ ಪರಿಷತ್ ಗೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳಬಹುದು.

ಸೌಂದರ್ಯ ಅಂದರೆ ಏನು? ರೂಪ ಮತ್ತು ಅಪರೂಪದ ಸಂಗಮವೇ ? ಗುಂಪಿನಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದೇ ? ಸೌಂದರ್ಯ ಪ್ರಜ್ಞೆ ಹೊಂದಿದ ಯಾರಿಗಾದರು ಕೂಡ ಕಾಡುವ ಸಹಜ ಪ್ರಶ್ನೆಗಳಿವು. [ಹಾಲಕ್ಕಿ ಒಕ್ಕಲಿಗ ಗ್ಯಾಲರಿ]

ಇದೇ ತರಹದ ಪ್ರಶ್ನೆಗಳು ಬುಡಕಟ್ಟು ಸೌಂದರ್ಯ ವಿಷಯ ಪ್ರಸ್ತಾಪವಾದಗಲೂ ಕಾಡುತ್ತವೆ. ಬುಡಕಟ್ಟು ಜನಾಂಗದ ಸದಸ್ಯ ಅಂದರೆ ಏನು? ಆಧುನಿಕ ನಾಗರಿಕತೆಯ ಸ್ಪರ್ಶವಿಲ್ಲದೆ ದಟ್ಟ ಪರಿಸರದಲ್ಲಿ ಬೆಳೆಯುವುದು ಇದರ ಅರ್ಥವೇ ? ಅಥವಾ ಅಭಿವೃದ್ಧಿಶೀಲ ಪ್ರಾಂತ್ಯದ ಭಾಗವಾಗಿರುವುದು ಇದರ ಅರ್ಥವೇ ? ಇಂಥ ಪ್ರಶ್ನೆಗಳು ಸರಳವಾಗಿದ್ದರು ಕೂಡ ಇವುಗಳ ಉತ್ತರಗಳು ಜಟಿಲವಾಗಿವೆ. ಹಾಲಕ್ಕಿ ಒಕ್ಕಲಿಗ ಚಿತ್ರಕಲಾ ಪ್ರದರ್ಶನದ ಚಿತ್ರಗಳು ಇಲ್ಲಿವೆ...

ಬುಡಕಟ್ಟು ಜನಾಂಗ ಅಳಿವು ಉಳಿವು

ಬುಡಕಟ್ಟು ಜನಾಂಗ ಅಳಿವು ಉಳಿವು

ಬುಡಕಟ್ಟು ಎಂಬುದಕ್ಕೆ ಹೊಂದಿಕೊಂಡ ಪದ ಇಂದಿನ ದಿನಗಳಲ್ಲಿ ಬಹು ಬೇಗನೆ ಅಳಸಿ ಹೋಗುವ ಹಂತದಲ್ಲಿದೆ. ಹಾಲಕ್ಕಿ ಒಕ್ಕಲಿಗರು ವೇಷ ಭೂಷಣ ಮತ್ತು ಆಭರಣಗಳನ್ನು ಧರಿಸುವುದರಲ್ಲಿ ತಮ್ಮದೇ ಆದ ವಿಶೇಷತೆಯನ್ನು ಹೊಂದಿದವರಾಗಿದ್ದಾರೆ.

ಆದರೆ, ಅವರುಗಳಲ್ಲಿ ಕೇವಲ 50 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನವರೇ ಇಂಥ ವಿಶಿಷ್ಟ ವೇಷ ಭೂಷಣ ಹಾಗೂ ಆಭರಣಗಳನ್ನು ಧರಿಸುತ್ತಿದ್ದಾರೆ. ಯುವ ವೃಂದ ಸಾಂಪ್ರದಾಯಿಕ ಉಡುಗೆ ತೊಡಗೆ ಮತ್ತು ವೇಷ ಭೂಷಣಗಳಿಂದ ದೂರ ಉಳಿದಿದೆ. ಯುವಕರು ಜೀನ್ಸ್ ಮತ್ತು ಟಿ ಶರ್ಟ್ ಗಳನ್ನು ಮತ್ತು ಯುವತಿಯರು ಸಲ್ವಾರ್ ಕಮೀಜ್ ಮಾತ್ರವಲ್ಲದೆ ಲೆಗ್ಗಿಂಗ್ಸ್ ಮತ್ತು ಟಾಪ್ ಗಳನ್ನು ಕೂಡ ಧರಿಸಿರುವುದನ್ನು ನೀವು ನೋಡಬಹುದಾಗಿದೆ.

ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಬದಲಾವಣೆ

ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಬದಲಾವಣೆ

ಮುಂದಿನ 5 ವರ್ಷಗಳಲ್ಲಿ ಒಬ್ಬ ಮಹಿಳೆ ಕೂಡ ಸಾಂಪ್ರಾದಾಯಿಕ ಉಡುಗೆ ಧರಿಸಿರುವುದನ್ನು ನೀವು ನೋಡಲಾರಿರಿ ಎಂದು ಎಚ್ಚರಿಕೆ ನೀಡುತ್ತಾರೆ ಬುಟಕಟ್ಟು ಜನಾಂಗದ ಹಿರಿಯ ನಾಗರಿಕ ಚೌಡಪ್ಪ.

ಕೇವಲ ಉಡುಗೆ ತೊಡುಗೆಗಳು ಮಾತ್ರವಲ್ಲದೆ ಅವರು ಅನುಸರಿಸುವ ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಕೂಡ ಬದಲಾವಣೆಯಾಗಿವೆ. ಬಾಲಕ ವಯಸ್ಸಿಗೆ ಬಂದಾಗ ಆತನ ಪಾಲಕರು ಯುವತಿಯನ್ನು ಆಯ್ಕೆ ಮಾಡಿ ಆಕೆ ಮದುವೆಗೆ ಒಪ್ಪುವವರೆಗೂ ಕೂಡ ಆಕೆ ಮುನೆಯ ಮುಂದೆ ಬಿಡಾರ ಹೂಡುವುದು ಇವರ ವಾಡಿಕೆಯಾಗಿದ್ದರು ಕೂಡ ಕಾಲ ಚಕ್ರ ಉರುಳುತ್ತಿದ್ದಂತೆ ಹಾಲಕ್ಕಿ ಒಕ್ಕಲರಿಗಾಗಿ ವಧು-ವರ ಹುಡುಕಾಟಕ್ಕೆ ಆನ್ ಲೈನ್ ಮಾರ್ಗ ಅನುಸರಿಸುತ್ತಿದ್ದಾರೆ.

ಆಧುನಿಕತೆಗೆ ಮಾರು ಹೋಗಿರುವುದೇ

ಆಧುನಿಕತೆಗೆ ಮಾರು ಹೋಗಿರುವುದೇ

ಅವರ ಭಾಷೆ, ಆಹಾರ ಪದ್ಧತಿ, ಹಾಡು ಹಾಗೂ ನೃತ್ಯ ಮತ್ತು ಬಿಡುವಿನ ವೇಳೆಯನ್ನು ಕಳೆಯುವ ರೀತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಇಲ್ಲವೆ ಕಾಣೆಯಾಗಿದೆ. ಇದಕ್ಕೆ ಕಾರಣಗಳು ಅಚ್ಚರಿಕರವಾಗಿಲ್ಲ. ಅವರು ನೋಡುವುದಕ್ಕೆ ಸುಂದರವಾಗಿಲ್ಲ, ಗೌರವ ವರ್ಣ ಹೊಂದಿಲ್ಲ ಎಂಬುದು ಸಕಾರಣವಲ್ಲ. ಆಧುನಿಕತೆಗೆ ಮಾರು ಹೋಗಿರುವುದೇ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.

ಅವರು ಯಾರು ?: ಹಾಲಕ್ಕಿ ಒಕ್ಕಲಿಗರು ಕರ್ನಾಟಕದ ಭಾಗಗಳಲ್ಲಿ ಕಾಣಸಿಗುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲಿನ ದಟ್ಟ ಅರಣ್ಯಗಳಲ್ಲಿ ಬುಡಕಟ್ಟು ಜನಾಂಗದ ಸದಸ್ಯರ ಮೂಲ ತಾಣವಾಗಿದೆ. ಇವರಲ್ಲಿ ಅನೇಕರ ಜೀವನ ಶೈಲಿ ಸಾಂಪ್ರದಾಯಿಕವಾಗಿದೆ.

ವಿವಿಧ ಗುಂಪುಗಳಲ್ಲಿ ವಿಭಜನೆಯಾಗಿದೆ

ವಿವಿಧ ಗುಂಪುಗಳಲ್ಲಿ ವಿಭಜನೆಯಾಗಿದೆ

ಇವರು ವಿವಿಧ ಗುಂಪುಗಳಲ್ಲಿ ವಿಭಜನೆಗೊಂಡಿದ್ದು ಇವರು ಯಾವ ಕಡೆಯಲ್ಲಿ ವಾಸವಾಗಿದ್ದಾರೆ ಎಂಬುದರ ಮೇಲೆ ಅವರ ಜೀವನ ಶೈಲಿ ಅವಲಂಬಿತವಾಗಿದೆ. ಇವರ ನಾಯಕನನ್ನು ಗೌಡ ಅಥವಾ ಬುದ್ಧಿವಂತ ಎಂದು ಕರೆಯಲಾಗುತ್ತದೆ. ನಾಯಕತ್ವ ಬಹುತೇಕ ಆನುವಂಶಿತವಾಗಿದೆ. ಆದರೆ, ತಂಟೆ ತಕರಾರುಗಳ ಸಂದರ್ಭದಲ್ಲಿ ಚುನಾವಣೆ ಮೂಲಕ ನಾಯಕನನ್ನು ಆಯ್ಕೆ ಮಾಡುತ್ತಾರೆ.

ಮಣ್ಣು ಬಳಸಿ ಕಟ್ಟಲಾದ ಮತ್ತು ಗಿಡ ಮರಗಳಿಂದ ಆವೃತವಾದ ಮನೆಯಲ್ಲಿ ಅವರು ವಾಸವಾಗಿರುತ್ತಾರೆ. ಬಹುತೇಕ ಕುಟುಂಬಗಳು ಹಿಂದೂ ದೇವರನ್ನು ಆರಾಧಿಸುತ್ತವೆ. ಮನೆ ಸುತ್ತಮುತ್ತ ತುಳಸಿ ಸಸಿಗಳನ್ನು ಬೆಳೆಸಿ ದೇವತೆಗಳನ್ನು ಮತ್ತು ದೇವರನ್ನು ಪೂಜಿಸುತ್ತಾರೆ, ಪ್ರಮುಖ ಹಬ್ಬಗಳು ಹಾಲಕ್ಕಿ ಕೊಪ್ಪಗಳಲ್ಲಿ ಸಾಮಾನ್ಯವಾಗಿವೆ.

ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಬಳಕೆಯಾಗಲಿ

ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಬಳಕೆಯಾಗಲಿ

ಮಹಿಳೆಯರು ಗಾಢವಾದ ಬಣ್ಣದ ಹೂಗಳನ್ನು ಮುಡಿಯುತ್ತಾರೆ, ನೆಕ್ಲೆಸ್, ಮೂಗುತಿ ಮತ್ತು ಬಳೆಗಳು ಅವರು ಧರಿಸುವ ಆಭರಣಗಳಾಗಿವೆ. ಅವರು ಸೀರೆಯನ್ನು ಕಿರಿದಾಗಿ ರವಿಕೆ ಇಲ್ಲದೆ ಧರಿಸುತ್ತಾರೆ. ಅವರು ಸುಂದರರಾಗಿರುತ್ತಾರೆ, ಆದರೆ, ಅಸಭ್ಯವಾಗಿರುವುದಿಲ್ಲ.

ನಗರ ವಾಸಿಗಳು ಮತ್ತು ಉದಾರ ಮನೋಭಾವನೆ ಹೊಂದಿರುವ ಆಭರಣಗಳ ಮತ್ತು ಡ್ರೆಸ್ ಡಿಸೈನರ್ ಗಳು ಬುಡಕಟ್ಟು ಜನಾಂಗದವರು ಧರಿಸುವ ಉಡುಗೆ ತೊಡಗೆಗಳನ್ನು ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಬಳಸದಿದ್ದರೆ ಇಂಥ ಉಡುಗೆ ತೊಡಗೆಗಳು ಕೊನೆಯ ಗುಂಪಿನ ಧರಿಸುವ ಉಡುಗೆ ತೊಡುಗೆಯಾಗಿ ಸೀಮಿತವಾಗುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ.

English summary
Power Minister DK Shivakumar with K Venkatesh, Photographer themed on Lifestyle of Haalakki Okkaligara Photo Exhibition, at Karnataka Chitrakala Parishath, in Bangalore on Monday This exhibition duration Oct 27-30, 2014, visiting timings 10 PM-7 PM
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more