ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌1ಎನ್1ನಿಂದ ಸತ್ತ ವ್ಯಕ್ತಿಗೆ ಚಿಕಿತ್ಸೆ ಕೊಟ್ಟ ಆಸ್ಪತ್ರೆ?

|
Google Oneindia Kannada News

ಬೆಂಗಳೂರು, ಮಾ.5 : ಬೆಂಗಳೂರಿನಲ್ಲಿ ಎಚ್‌1 ಎನ್‌1ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಆದರೆ, ರೋಗಿಯ ಸಾವಿನ ವಿಷಯವನ್ನು ಬಚ್ಚಿಟ್ಟು ಖಾಸಗಿ ಆಸ್ಪತ್ರೆಯವರು ಹಣ ಸುಲಿಗೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬದವರು ಆರೋಪಿಸಿದ್ದಾರೆ. ಆಸ್ಪತ್ರೆ ಈ ಆರೋಪವನ್ನು ತಳ್ಳಿ ಹಾಕಿದೆ.

ಕಳೆದ ಎಂಟು ದಿನಗಳಿಂದ ರಾಮಮೂರ್ತಿನಗರದ ಕೋಶಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜು (43) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿನ ವಿಷಯವನ್ನು ತಿಳಿಸದೆ, ಆಸ್ಪತ್ರೆಯವರು ಹಣ ಸುಲಿಗೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Hospital

ಹೆಚ್ಚಿನ ಚಿಕಿತ್ಸೆಗೆಂದು ನಾಗರಾಜು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ವೈದ್ಯರು ನಾಗರಾಜ್ ಮೃತಪಟ್ಟಿದ್ದಾರೆ ಎಂದು ಹೇಳಿ, ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. [ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?]

ಆಸ್ಪತ್ರೆಯವರು ಹೇಳುವುದೇನು : ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಕೋಶಿಸ್ ಆಸ್ಪತ್ರೆಯ ವೈದ್ಯರು, ಎಂಟು ದಿನಗಳ ಹಿಂದೆ ರಕ್ತಹೀನತೆಯ ಚಿಕಿತ್ಸೆಗಾಗಿ ನಾಗರಾಜು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಚ್1ಎನ್1 ಇರುವುದು ದೃಢಪಟ್ಟಿತ್ತು. ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಿದ್ದಾರೆ. [ಹಂದಿಜ್ವರ ರೋಗಿಯ ಪ್ರಾಣ ತೆಗೆದ ಕರೆಂಟ್]

ನಾಗರಾಜು ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದೆವು. ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಅವರು ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ. [ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]

ಮಧ್ಯಾಹ್ನ 1.30ರ ಸುಮಾರಿಗೆ ನಾಗರಾಜು ಅವರನ್ನು ರಾಜೀವ್‌ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂತು. ಈ ಕುರಿತು ಕುಟುಂಬದವರಿಗೆ ಮಾಹಿತಿ ನೀಡಿದೆವು ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕೋಶಿಸ್ ಆಸ್ಪತ್ರೆಗೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ.

52 ಬಲಿ : ಅಂದಹಾಗೆ ಮಹಾಮಾರಿ ಎಚ್1ಎನ್1 ಗೆ ರಾಜ್ಯದಲ್ಲಿ ಇದುವರೆಗೂ 52 ಜನರು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ವಿಜಯ ಅನಂತ ಕುಲಕರ್ಣಿ (66) ಮತ್ತು ಚಿಂತಾಮಣಿಯ ಗಾಣಿಗರ ಪೇಟೆಯ ನಿವಾಸಿ ನಾಗರಾಜು (43) ಬುಧವಾರ ಮೃತಪಟ್ಟವರು.

English summary
Bengaluru : Family members of a Nagaraju, who died of H1N1 staged a protest in front of Koshys Hospital at Ramurthy Nagar on Wednesday. Family members said hospital had tried to fleece them in the name of treatment even after the patient died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X