ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?

|
Google Oneindia Kannada News

ಬೆಂಗಳೂರು, ಫೆ. 12: ಎಚ್ 1 ಎನ್ 1 ನಗರದಲ್ಲಿ ಹರಡುತ್ತಿದ್ದು ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ತಿಳಿಸಿದೆ. ಇದೊಂದು ಸಾಮಾನ್ಯ ವೈರಸ್ ಜ್ವರವಾಗಿದ್ದು ಸೂಕ್ತ ಮತ್ತು ನಿರ್ದಿಷ್ಟ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ತಿಳಿಸಿದೆ.

ರೋಗ ಲಕ್ಷಣಗಳು, ಅನುಸರಿಸಬೇಕಾದ ಕ್ರಮಗಳು ಮತ್ತು ಯಾವ ರೀತಿ ವರ್ತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಿಮ್ಮ ಅಕ್ಕಪಕ್ಕದಲ್ಲಿ ಇಂಥ ರೋಗ ಲಕ್ಷಣ ಇರುವವರು ಕಂಡುಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ವಿನಂತಿ ಮಾಡಿಕೊಂಡಿದೆ.[ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]

H1N1

ರೋಗ ಲಕ್ಷಣಗಳೇನು?
* ತೀವ್ರ ಸ್ವರೂಪದ ಜ್ವರ
* ಅತಿ ಭೇದಿ ಮತ್ತು ವಾಂತಿ
* ಅತಿಯಾದ ಮೈ ಕೈ ನೋವು
* ಕೆಮ್ಮು ಮತ್ತು ಹಳದಿ ಕಫ
* ನೆಗಡಿ ಮತ್ತು ಗಂಟಲು ಕೆರೆತ
* ಉಸಿರಾಟ ತೊಂದರೆ

ಅನುಸರಿಸಬೇಕಾದ ಕ್ರಮಗಳು
* ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ
* ಬಾಯಿ ಅಥವಾ ಮೂಗನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ
* ಚೆನ್ನಾಗಿ ನಿದ್ದೆಮಾಡಿ, ಒತ್ತಡವನ್ನು ನಿವಾರಿಸಿಕೊಳ್ಳಿ, ಚಟುವಟಿಕೆಯಿಂದಿರಿ
* ಧಾರಾಳ ನೀರು ಕುಡಿಯಿತಿ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ
* ಜನಸಂದಣಿ ಸ್ಥಳಕ್ಕೆ ತೆರಳಿದಾಗ ಮಾಸ್ಕ್ ಧರಿಸುವುದು ಒಳ್ಳೆಯದು[ಎಚ್1ಎನ್ 1 ಲಕ್ಷಣಗಳೇನು? ಮುಚ್ಚರಿಕೆ ವಿಧಾನಗಳೆನು?]

ಏನೇನು ಮಾಡಬಾರದು ?
* ಹಸ್ತ ಲಾಘವ ಅಥವಾ ಇತರೆ ರೂಪದ ದೈಹಿಕ ಸಂಪರ್ಕದ ಶುಭಕೋರಿಕೆ
* ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳಬೇಡಿ
* ರಸ್ತೆಯಲ್ಲಿ ಮತ್ತು ಎಲ್ಲೆಂದರಲ್ಲಿ ಉಗುಳಬೇಡಿ
* ಅನಾವಶ್ಯಕವಾಗಿ ಜನಸಂದಣಿ ಪ್ರದೇಶಕ್ಕೆ ತೆರಳಬೇಡಿ
* ಜ್ವರ ಸೋಂಕು ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹುಸಬೇಡಿ

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಹಂದಿಜ್ವರ ನಿವಾರಣೋಪಾಯಗಳ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದು ಹೆಚ್ಚಿನ ಮಾಹಿತಿಗೆ ದಾಸಪ್ಪ ರೆಫರಲ್ ಆಸ್ಪತ್ರೆ ದೂರವಾಣಿ 080 22975684 ಕ್ಕೆ ಸಂಪರ್ಕಿಸಲು ಕೋರಿದೆ.

English summary
Bengaluru:The BBMP and Karnataka Health department issued a set of guidelines to tackle swine flu and urged citizens not to neglect minor cases of fever with breathlessness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X