ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧ್ಯಕ್ಷ ಹುದ್ದೆ ನಿಭಾಯಿಸಲಾಗದ ವಿಶ್ವನಾಥ್ ಬಗ್ಗೆ ಅನುಕಂಪವಿದೆ: ಸಿದ್ದರಾಮಯ್ಯ

|
Google Oneindia Kannada News

Recommended Video

ಬಿಜೆಪಿ ದುಡ್ಡು ಆಫರ್ ಕೊಡ್ತಿರೋದು ನಿಜ | Oneindia Kannada

ಬೆಂಗಳೂರು, ಜುಲೈ 04: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಮುಖಂಡ ಎಚ್ ವಿಶ್ವನಾಥ್ ಅವರ ನಡುವಿನ ವೈಮನಸ್ಯ ಮತ್ತೆ ಬೀದಿಗೆ ಬಂದಿದೆ.

ಮೈತ್ರಿ ಸರ್ಕಾರ ಬೀಳಲಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ಮೈತ್ರಿ ಸರ್ಕಾರ ಬೀಳಲಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌

ಇತ್ತೀಚೆಗಷ್ಟೆ ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ್ದ ಎಚ್ ವಿಶ್ವನಾಥ್ ಆವರ ನಡೆಯನ್ನು ಖಂಡಿಸಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, 'ಅಧ್ಯಕ್ಷ ಹುದ್ದೆಯನ್ನು ಆರು ತುಗಳ ಕಾಲವೂ ನಿಭಾಯಿಸಲಾಗದೆ ರಾಜೀನಾಮೆ ನೀಡಿದ ಫಲಾಯನವಾದಿ ಎಚ್ ವಿಶ್ವನಾಥ್' ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಸಭೆ ನಡೆಸಿ ರಾಜ್ಯದ ಗಮನ ಸೆಳೆದ ಎಚ್.ವಿಶ್ವನಾಥ್!ದೆಹಲಿಯಲ್ಲಿ ಸಭೆ ನಡೆಸಿ ರಾಜ್ಯದ ಗಮನ ಸೆಳೆದ ಎಚ್.ವಿಶ್ವನಾಥ್!

"ತಮಗೆ ಸಿಕ್ಕ ಅಧ್ಯಕ್ಷ ಹುದ್ದೆಯನ್ನು ಸರಿಯಾಗಿ 6 ತಿಂಗಳು ಕೂಡ ನಿಭಾಯಿಸಲಾಗದೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಹೆಚ್.ವಿಶ್ವನಾಥ್ ಅವರು ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತ ತಮ್ಮ ದೌರ್ಬಲ್ಯವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ಬಗ್ಗೆ ನನಗೆ ಅನುಕಂಪವಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ, ವಿಶ್ವನಾಥ್ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

H Vishwnath could not handle president post properly, I pity him: Siddaramaiah

ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದ ಮೇಲಿನ ತಮ್ಮ ಮುನಿಸನ್ನು ಹೊರಹಾಕುದ್ದ ಎಚ್ ವಿಶ್ವನಾಥ್, "ಮೈತ್ರಿ ಸರ್ಕಾರದ ನಾಯಕರುಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಸರ್ಕಾರವನ್ನು ಯಾರೂ ಬೀಳಿಸುವ ಅವಶ್ಯಕತೆ ಇಲ್ಲ, ಸರ್ಕಾರ ತಾನಾಗಿಯೇ ಬೀಳುತ್ತದೆ " ಎಂದಿದ್ದರು.

English summary
Former chief minister of Karnataka Siddarmaiah targets JDS leader H Vishwanath on his twitter and said, "Vishwanath is an opportunist and he did not handle his president post properly. I have sympathy for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X