ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ವಿಶ್ವನಾಥ್ ಟಾಂಗ್: ಸೋಮನಹಳ್ಳಿ ಮುದುಕಿ ನನ್ನ‌ ಹುಂಜದಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಮೂರ್ಖತನ!

|
Google Oneindia Kannada News

ಬೆಂಗಳೂರು, ಡಿ, 11: ಸೋಮನಹಳ್ಳಿ ಮುದುಕಿ ಹುಂಜ ಇಟ್ಕೊಂಡು ನನ್ನ‌ ಕೋಳಿಯಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಮೂರ್ಖತನ ಎಂದು ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಲೇವಡಿ ಮಾಡಿದ್ದಾರೆ. ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸಮುದಾಯದ ನಾಯಕ ಎಂದಿದ್ದ ಕುರುಬ ಜನಾಂಗದ ನಾಯಕರಿಗೆ ಮಾಜಿ ಸಚಿವ, ವಿಧಾನದ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೋರಾಟ ಇಲ್ಲದೆ ಏನೂ ನಡೆಯೋದೇ ಇಲ್ಲ. ಹೋರಾಟದ ಬಗ್ಗೆ ಗೊತ್ತಿಲ್ಲದವರು ಹೀಗೆ ಮಾತನಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಕುರುಬ ಸಮಾಜದವರು. ಅವರು ವಿಶ್ವಾಸದಿಂದ ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರದ ವಿರುದ್ಧ ಈಶ್ವರಪ್ಪ ಅವರು ಹೋರಾಟ ಮಾಡುತ್ತಿಲ್ಲ ಎಂದು ವಿಶ್ವನಾಥ್ ಅವರು ಸಿದ್ದರಾಮಯ್ಯ ಆ್ಯಂಡ್ ಟೀಂಗೆ ಟಾಂಗ್ ಕೊಟ್ಟಿದ್ದಾರೆ.

ಎಸ್‌ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!ಎಸ್‌ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!

ಇದು ಜನರನ್ನು ದಿಕ್ಕು ತಪ್ಪಿಸಲು ಹೀಗೆ ಈಶ್ವರಪ್ಪ ಅವರ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ. ಯಾರ ಪ್ರಭಾವವನ್ನು ಯಾರೂ ತಗ್ಗಿಸಲು ಆಗುವುದಿಲ್ಲ. ಯಾರಾದರೂ ನಾನು ಇಲ್ಲದೆ ಈ ಸಮಾಜ ಇಲ್ಲ ಅಂದು ಕೊಂಡಿದ್ದರೆ ಅವರಂತಹ ಮೂರ್ಖರು ಬೇರೆ ಯಾರೂ ಇಲ್ಲ. ಪ್ರತಿ ವ್ಯಕ್ತಿಗೆ ಸಮಾಜ ಅನಿವಾರ್ಯವೇ ಹೊರತು ಸಮಾಜಕ್ಕೆ ಯಾರೋಬ್ಬರೂ ಅನಿವಾರ್ಯ ಅಲ್ಲ. ಸೋಮನಹಳ್ಳಿ ಮುದುಕಿ ಹುಂಜ ಇಟ್ಕೊಂಡು ನನ್ನ‌ ಕೋಳಿಯಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಮೂರ್ಖತನ ಎಂದು ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

H Vishwanath targeted Siddaramaiah and fallowers over issue of Kuruba ST agitation

ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ಹೋರಾಟ ನಮ್ಮದು, ಇದು ಯಾರ ಪ್ರಭಾವನ್ನು ಕುಗ್ಗಿಸಲು ಅಲ್ಲ. ನಮ್ಮ ಹೋರಾಟಕ್ಕೆ ಆರ್‌ಎಸ್‌ಎಸ್‌ ಬೆಂಬಲ ಕೊಟ್ಟರೆ ತಪ್ಪೇನಿದೆ? ಆರ್ಎಸ್ಎಸ್ ಸಮಾಜ ಒಡೆಯುತ್ತದೆ ಅನ್ನೋ ಹೇಳಿಕೆ ದಿಕ್ಕಿತಪ್ಪಿಸುವ ಹೇಳಿಕೆ

English summary
Formere Minister H Vishwanath targeted Former CM Siddaramaiah and his fallowers over the issue of the Kuruba ST agitation. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X