ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮಗೂ ಪ್ಯಾಕೇಜ್ ಕೊಡಿ': ಸಿಎಂಗೆ ಮನವಿ ಮಾಡಿದ ಜಿಮ್ ರವಿ

|
Google Oneindia Kannada News

ಬೆಂಗಳೂರು, ಜುಲೈ 18: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜಿಮ್ ಮಾಲೀಕರ ನೆರವಿಗೆ ಬರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರ್ನಾಟಕ ಜಿಮ್ ಮತ್ತು ಫಿಟ್ನೆಸ್ ಮಾಲಿಕರ ಸಂಘದ ಅಧ್ಯಕ್ಷ ರವಿ ಅವರು ಮನವಿ ಮಾಡಿದ್ದಾರೆ.

Recommended Video

ಹೆಂಡತಿಗೆ ಮಕ್ಕಳೊಂದಿಗೆ 4 Km ನಡೆದುಕೊಂಡು ಸಿಎಂ ಮನೆಮುಂದೆ ಬಂದ ಕೊರೊನ ಸೊಂಕಿತ | Oneindia Kannada

ಲಾಕ್ ಡೌನ್ ನಿಂದ ಎಲ್ಲಾ ಜಿಮ್ ಮಾಲಿಕರರು ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಜೊತೆಗೆ ಬಾಡಿಗೆ ಕಟ್ಟುವುದಕ್ಕೆ, ಕರೆಂಟ್ ಬಿಲ್, ಮೈಂಟೈನೆಸ್ ಮಾಡುವುದಕ್ಕೆ ಕಷ್ಟ ಆಗುತ್ತಿದೆ. ಹೀಗಾಗಿ, ಹಲವು ಸಮುದಾಯಕ್ಕೆ ನೀಡಿದ ರೀತಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ರವಿ ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ಹೆಚ್ಚುತ್ತಿದೆ ಕೊರೊನಾ; ಆದರೂ ಲಾಕ್‌ಡೌನ್ ಯಾಕಿಲ್ಲ?ಕೊಡಗಿನಲ್ಲಿ ಹೆಚ್ಚುತ್ತಿದೆ ಕೊರೊನಾ; ಆದರೂ ಲಾಕ್‌ಡೌನ್ ಯಾಕಿಲ್ಲ?

'ರಾಜ್ಯದಲ್ಲಿ ಜಿಮ್ ನಡೆಸುವವರು, ಟ್ರೈನರ್ಸ್ ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಜಿಮ್ ಬಾಡಿಗೆ ಕಟ್ಟುವುದಕ್ಕೆ ಆಗುತ್ತಿಲ್ಲ, ಕರೆಂಟ್ ಬಿಲ್ ಕಟ್ಟುವುದಕ್ಕೆ ಆಗುತ್ತಿಲ್ಲ, ಕುಟುಂಬ ನಡೆಸುವುದಕ್ಕೆ ಕಷ್ಟ ಆಗುತ್ತಿದೆ. ನಾವು ಸಮಾಜದ ಆರೋಗ್ಯವನ್ನು ಹೆಚ್ಚು ಮಾಡುವವರು. ಎಲ್ಲರಿಗೂ ಅನುದಾನ ಕೊಟ್ಟಿದ್ದೀರಾ, ನಮಗೂ ಏನಾದರೂ ಅನುದಾನ ಕೊಡಿ ದಯವಿಟ್ಟು' ಎಂದು ಕೇಳಿಕೊಂಡಿದ್ದಾರೆ.

Gym Owners Association President Ravi Request To Cm To Help Fitness Industry

'ನಾವು ಸರ್ಕಾರಕ್ಕೆ ಜಿಎಸ್ ಟಿ ಕಟ್ಟುತ್ತೇವೆ, ಸರ್ಕಾರದ ಪರ್ಮಿಶನ್ ಇದೆ. ಜಿಮ್ ಓಪನ್ ಮಾಡುವುದಕ್ಕೆ ಸರ್ಕಾರ ಅನುಮತಿ ಇಲ್ಲ. ಸರಿ, ನಾವು ಜಿಮ್ ಓಪನ್ ಮಾಡಲ್ಲ, ಸರ್ಕಾರಕ್ಕೆ ನಾವು ಬೆಂಬಲ ಕೊಡುತ್ತೇವೆ. ಕೊರೊನಾ ಪರಿಸ್ಥಿತಿ ನಮಗೂ ಅರ್ಥ ಆಗುತ್ತೆ. ನಮಗೂ ಏನಾದ್ರು ವಿಶೇಷ ಪ್ಯಾಕೇಜ್ ಕೊಡಿ' ಎಂದು ಬೇಡಿಕೆಯಿಟ್ಟಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಮಾರ್ಚ್ ತಿಂಗಳಲ್ಲಿ ಜಿಮ್ ಮತ್ತು ಫಿಟ್ನೆಸ್ ಕೇಂದ್ರಗಳನ್ನು ಮುಚ್ಚಲಾಗಿತ್ತು. ನಾಲ್ಕು ತಿಂಗಳು ಕಳೆದರೂ ಜಿಮ್ ತೆರೆಯಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಜಿಮ್ ಮಾಲೀಕರಿಗೂ ಯಾವುದೇ ರೀತಿ ಪರಿಹಾರ ನೀಡಿಲ್ಲ.

English summary
Karnataka Gym and Fitness Owners Association president Ravi request to CM yediyurappa to help fitness industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X