ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 1ರ ನಂತರವೂ ಜಿಮ್ ಮತ್ತು ರೆಸ್ಟೋರೆಂಟ್ ಓಪನ್ ಆಗಲ್ಲ

|
Google Oneindia Kannada News

ಬೆಂಗಳೂರು, ಮೇ 28: ಈ ವಾರಾಂತ್ಯಕ್ಕೆ ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ ಮುಕ್ತಾಯವಾಗಲಿದೆ. ಸೋಮವಾರದಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಫ್ರಿ ಆಗಬಹುದು ಎಂಬ ನಿರೀಕ್ಷೆ ಇದೆ. ಜೂನ್ 1ರ ನಂತರ ರಾಜ್ಯದಲ್ಲಿ ಮತ್ತಷ್ಟು ಸಡಿಲಿಕೆ ಸಿಗುವ ಸಾಧ್ಯತೆ ಇದ್ದು, ಜಿಮ್ ಮತ್ತು ರೆಸ್ಟೋರೆಂಟ್ ಮಾಲೀಕರು ಕೆಲಸ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.

Recommended Video

ನನ್ನ ಪತಿಗೆ ನೀವೆ ಬಲ ಎಂದ ರೇಣುಕಾಚಾರ್ಯ ಪತ್ನಿ | Sumitra Renukacharya | Oneindia Kannada

ಆದರೆ, ಜೂನ್ 1ರ ನಂತರವೂ ಜಿಮ್ ಮತ್ತು ರೆಸ್ಟೋರೆಂಟ್ ತೆರೆಯುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ. ಈ ಮೂಲಕ ಜಿಮ್, ರೆಸ್ಟೋರೆಂಟ್ ಮಾಲೀಕರಿಗೆ ಮತ್ತೆ ನಿರಾಸೆಯಾಗಿದೆ.

ಕಂದಾಯ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಿಎಂ ಯಡಿಯೂರಪ್ಪ

'ಕೊರೊನಾ ವೈರಸ್ ಜತೆ ಬದುಕುವುದು ಅನಿವಾರ್ಯವಾಗಿದೆ. ಲಾಕ್ ಡೌನ್ ಫ್ರೀಗೆ ಸರ್ಕಾರ ಮುಕ್ತ ಮನಸ್ಸಿನಿಂದ ಇದೆ. ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಖಾಯಿಲೆ ಗುಣ ಪಡಿಸುವುದಕ್ಕೂ ಒತ್ತು ನೀಡ್ತೇವೆ. ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದೇವೆ' ಎಂದು ಆರ್ ಆಶೋಕ್ ವಿಧಾನಸೌದದಲ್ಲಿ ಹೇಳಿದ್ದಾರೆ.

gym and restaurant will not open after june 1 said minister r ashok

'ಜೂನ್ 1ರ ಬಳಿಕ ಹೋಟೆಲ್ ಗಳು ಓಪನ್ ಆಗಬಹುದು. ಜಿಮ್ ತೆರೆಯುವುದಿಲ್ಲ. ಬಾರ್ ಆಂಡ್ ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ. ಕುಡಿದ್ರೆ ಗಲಾಟೆಗಳು ಆಗಬಹುದು' ಎಂದು ತಿಳಿಸಿದ್ದಾರೆ.

ಇನ್ನು ಜಮೀನುಗಳ ಮೌಲ್ಯಮಾಪನದಲ್ಲಿ ರಿಜಿಸ್ಟ್ರೇಷನ್ ಮೊತ್ತ ಜಾಸ್ತಿ ಇದೆ ಎಂಬ ಮಾತಿದೆ. ಅದನ್ನು ಕಡಿಮೆ ಮಾಡುವ ಚಿಂತನೆ ಮಾಡಲಾಗುತ್ತಿದೆ. ಸೈಟ್, ಮನೆ ಖರೀದಿಗೆ ಉತ್ತೇಜನ ನೀಡಲು ಯೋಜನೆ ರೂಪಿಸುತ್ತೇವೆ ಎಂದು ಸಚಿವ ಅಶೋಕ ಮುಂದಿನ ಲಾಕ್‌ಡೌನ್‌ ಹೇಗಿರಲಿದೆ ಎಂದು ಸುಳಿವು ನೀಡಿದ್ದಾರೆ.

English summary
Coronavirus Update In Karnataka: Hotels may be restarted, but Gym and Restaurant will not open after june 1 said Minister R Ashok at vidhana soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X