ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೆಂಕಟೇಶ್ ಗೋಡ್ಖಿಂಡಿ ಅವರಿಗೆ ನಾದನಮನ ಜುಲೈ 23ಕ್ಕೆ

|
Google Oneindia Kannada News

ಬೆಂಗಳೂರು, ಜುಲೈ, 22: ಕೊಳಲಿನ ನಾದದಿಂದ ಹಿಂದುಸ್ಥಾನಿ ಪರಂಪರೆಯನ್ನು ಸಂಗೀತ ಪ್ರಿಯರಿಗೆ ಹಂಚಿದ್ದ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥವಾಗಿ ಗುರುವಂದನೆ ಕಾರ್ಯಕ್ರಮವನ್ನು ಜುಲೈ, 23, ಶನಿವಾರ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಅವರ್ ಸ್ಕೂಲ್ ನ ಶ್ರೀ ವಿದ್ಯಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಜೋಗ್ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಅವರ ಪುತ್ರ ಮಾಸ್ಟರ್ ಷಡ್ಜ ಗೋಡ್ಖಿಂಡಿ ಜೊತೆ ಜುಗಲ್‍ಬಂದಿ ಪ್ರಸ್ತುತ ಪಡಿಸಲಿದ್ದಾರೆ. ತಬಲಾದಲ್ಲಿ ವಿದ್ವಾನ್ ಕಿರಣ್ ಗೋಡ್ಖಿಂಡಿ ಸಹಕರಿಸಲಿದ್ದಾರೆ.

Guruvandana: In Memory of Artist Venkatesh Godkhindi on 23 July

ಸಂಜೋಗ್ ನ ವಿದ್ಯಾರ್ಥಿಗಳು ಸಹ ಗುರುವಿಗೆ ಸಂಗೀತ ನಮನ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

* ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥ ಗುರುವಂದನೆ 2016
* ಸ್ಥಳ: ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ಅವರ್ ಸ್ಕೂಲ್ ನ ಶ್ರೀ ವಿದ್ಯಾ ಸಭಾಭವನ
* ಜುಲೈ, 23, ಶನಿವಾರ. ಮಧ್ಯಾಹ್ನ 4 ಗಂಟೆಗೆ ಆರಂಭ

English summary
Bengaluru: Sanjog Institution is organizing a musical tribute ‘Guruvandana', in memory of Pandit Venkatesh Godkhindi, for his eternal contribution to the music World. All the students of sanjog will be paying tributes to this legendary musician through their flute and vocal recitals. Pandit Pravin Godkhindi will perform a jugalbandi with his son Shadaj Godkhindi . The event is scheduled on 23 July, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X