ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಎಲೆಕ್ಷನ್ ಡ್ಯೂಟಿಗೆ ಹೊಸ ಮಾರ್ಗಸೂಚಿ ರೆಡಿ!

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ, ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ನಾಗರಿಕರಿಗೆ ಆಮಿಷಗಳನ್ನೊಡ್ಡಲು ಪ್ರಾರಂಭಿದ್ದಾರೆ. ಶಸ್ತ್ರಾಸ್ತ್ರ, ಹಣ, ಮದ್ಯ ಸಾಗಾಟವನ್ನು ನಿಲ್ಇಸುವಂತೆ ಎಲ್ಲೆಂದರಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಸಂಚಾರ ಪೊಲೀಸರ ಕೊರತೆ: ದಟ್ಟಣೆ ತಗ್ಗಿಸಲು ಹರಸಾಹಸಸಂಚಾರ ಪೊಲೀಸರ ಕೊರತೆ: ದಟ್ಟಣೆ ತಗ್ಗಿಸಲು ಹರಸಾಹಸ

ಇದು ಸಾರ್ವಜನಿಕರ ಜೀವ ಹಾಗೂ ಜೀವನಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯನಿರತ ಪೊಲೀಸರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ರಾಜಕೀಯ ಮುಖಂಡರು ಮತದಾರರ ಓಲೈಕೆಗಾಗಿ ಹಣ, ಮದ್ಯ, ಸೀರೆ, ಕುಕ್ಕರ್, ಚಿನ್ನಾಭರಣ ಇನ್ನಿತರೆ ವಸ್ತುಗಳ ಸಾಗಾಟ ತಡೆಯಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6 ತಂಡಗಳನ್ನು ರಚಿಸಿ ನಿಯೋಜಿಸಲಾಗಿದೆ.

Guidelines issued to police for vehicles checking

ಆದರೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಹಠಾತ್ತನೆ ವಾಹನಗಳನ್ನು ತಡೆಯುವುದರಿಂದ ಕೆಲವೆಡೆ ಅಪಘಾತ ಸಂಭವಿಸಿ ಜೀವಹಾನಿಯಾಗಿರುವುದರ ಕುರಿತು ದೂರುಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಪೊಲೀಸರ ಕರ್ಯ ನಿರ್ವಹಣೆ ಬಗ್ಗೆ ಮಾರ್ಗಸೂಚಿ ಹೊರಡಿಸಿ, ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಬೆಂಗಳೂರು ಚಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ 400 ಚೆಕ್ ಪೋಸ್ಟ್: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3ರಂತೆ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 400 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಗಡಿ ಭಾಗದಲ್ಲಿ 20 ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಅನುಮಾನಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಹೊರಗಿನಿಂದ ನಗರಕ್ಕೆ ಬರುವ ಪ್ರತಿಯೊಂದು ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ. ಪ್ರತಿ ಕ್ಷೇತ್ರಕ್ಕೂ ಒಬ್ಬ ಎಸಿಪಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಏನು ಮಾಡಬೇಕು: ವಾಹನ ಚೆಕಿಂಗ್ ಪಾಯಿಂಟ್ ನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಬೇಕು, ತಪಾಸಣೆ ವೇಳೆ ಸಿಬ್ಬಂದಿಗೆ ಗೊಂದಲವಾದರೆ ಅವರಿಗೆ ಹಿರಿಯ ಅಧಿಕಾರಿಗಳ ನೆರವು ನೀಡಬೇಕು, ವಾಹನ ನಿಧಾನಗತಿ ಚಾಲನೆಗಾಗಿ ಜಿಗ್ ಜಾಗ್ ಬ್ಯಾರಿಕೇಡ್ ವ್ಯವಸ್ಥೆ ಅಳವಡಿಸಬೇಕು.

ಏನು ಮಾಡಬಾರದು: ಬೆಳಕಿನ ವ್ಯವಸ್ಥೆ ಇಲ್ಲದ ಕಡೆ ವಾಹನ ತಪಾಸಣೆ ಸ್ಥಳಗಳನ್ನು ಗುರುತಿಸಬಾರದು, ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾನ್ ಸ್ಟೆಬಲ್ ಗಳು ವಾಹನ ತಪಾಸಣೆ ಮಾಡುವಂತಿಲ್ಲ, ತಪಾಸಣೆ ಮುಗಿದ ಬಳಿಕ ಬ್ಯಾರಿಕೇಡ್ ಗಳನ್ನು ರಸ್ತೆಯ ಎಡಭಾಗದಲ್ಲೇ ಜೋಡಿಸಬಾರದು.

English summary
During model code of conduct police have to check private or government vehicles, but following with some guidelines to avoid unnecessary trouble for general public. The department of home has issued guidelines for police officials and staff regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X