ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

|
Google Oneindia Kannada News

ಬೆಂಗಳೂರು, ಜುಲೈ 16 : ಕೊರೊನಾ ವೈರಸ್ ಸೋಂಕು ತಗುಲಿದರೂ ಸೋಂಕಿನ ಲಕ್ಷಣಗಳು ಇಲ್ಲವಾದಲ್ಲಿ ಮನೆಯಲ್ಲಿಯೇ ಆರೈಕೆ ಪಡೆಯಲು ಅವಕಾಶ ನೀಡಲಾಗಿದೆ. ಮನೆಯೇ ಕೋವಿಡ್ ಆರೈಕೆ ಕೇಂದ್ರವಾದರೆ ವ್ಯವಸ್ಥೆಗಳು ಹೇಗಿರಬೇಕು?.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕುರಿತು ಜನರಿಗೆ ಮಾಹಿತಿ ನೀಡಿದೆ. 'ನನ್ನ ಮನೆ, ನನ್ನ ಕೋವಿಡ್ ಆರೈಕೆ ಕೇಂದ್ರ' ಎಂಬ ಘೋಷಣೆಯಡಿ ಅಗತ್ಯವಾದ ಮಾಹಿತಿಯನ್ನು ನೀಡಿದೆ. ಸೋಂಕು ತಗುಲಿರುವವರು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬಹುದು ಎಂದು ಹೇಳಿದೆ.

ಕೋವಿಡ್ ಪರೀಕ್ಷೆಗೆ ಮಾದರಿ ಕೊಟ್ಟಿದ್ದರೂ ಐಸೋಲೇಷನ್ ಕಡ್ಡಾಯ ಕೋವಿಡ್ ಪರೀಕ್ಷೆಗೆ ಮಾದರಿ ಕೊಟ್ಟಿದ್ದರೂ ಐಸೋಲೇಷನ್ ಕಡ್ಡಾಯ

ಲಕ್ಷಣ ರಹಿತ ಮತ್ತು ಸೌಮ್ಯ ರೋಗ ಲಕ್ಷಣ ಇದ್ದಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಬಹುದು. ಹೆಚ್ಚಿನ ಮಾಹಿತಿಗಾಗಿ 24*7 ಶುಲ್ಕ ರಹಿತ ಸಹಾಯವಾಣಿ ಆಪ್ತಮಿತ್ರಕ್ಕೆ 14410 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಕರ್ನಾಟಕ; ಹೋಂ ಐಸೋಲೇಷನ್ ಮಾರ್ಗಸೂಚಿಗಳುಕರ್ನಾಟಕ; ಹೋಂ ಐಸೋಲೇಷನ್ ಮಾರ್ಗಸೂಚಿಗಳು

ಕೋವಿಡ್ - 19 ದೃಡಪಟ್ಟಿದ್ದರೂ ಮನೆಯಲ್ಲಿಯೇ ಐಸೊಲೇಷನ್‌ನಲ್ಲಿ ಇದ್ದರೆ ಈ ಕೆಳಕಂಡ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮನೆಯಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯಗಳಿಗೆ ಸಿಕ್ಕಿದ ಐಸೋಲೇಷನ್ ವಾರ್ಡ್‌ಗಳು ಎಷ್ಟು? ರಾಜ್ಯಗಳಿಗೆ ಸಿಕ್ಕಿದ ಐಸೋಲೇಷನ್ ವಾರ್ಡ್‌ಗಳು ಎಷ್ಟು?

ಮನೆಯೇ ಕೋವಿಡ್ ಆರೈಕೆ ಕೇಂದ್ರ

ಮನೆಯೇ ಕೋವಿಡ್ ಆರೈಕೆ ಕೇಂದ್ರ

* ಕಡ್ಡಾಯವಾಗಿ ವೈದ್ಯಕೀಯ ಅಥವ ಎನ್ 95 ಮಾಸ್ಕ್ ಧರಿಸಬೇಕು

* ಪ್ರತಿ 8 ಗಂಟೆಗೆ ಮಾಸ್ಕ್ ಅನ್ನು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಬಳಸಿ ವಿಲೇವಾರಿಗೊಳಿಸಿ

* ನಿಗದಿತ ಕೋಣೆಯಲ್ಲೇ ಉಳಿಯಿರಿ. ಇತರರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಿ

2 ಲೀಟರ್ ನೀರು ಕುಡಿಯಿರಿ

2 ಲೀಟರ್ ನೀರು ಕುಡಿಯಿರಿ

* ಕನಿಷ್ಠ 2 ಲೀಟರ್ ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ

* ಕೆಮ್ಮುವಾಗ ಮತ್ತು ಸೀನುವಾಗ ಮೊಣಕಯ ಅಥವ ಟಿಷ್ಯು/ಕರವಸ್ತ್ರ ಬಳಸಿ

* ಕನಿಷ್ಠ 40 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯಿರಿ.

ವಸ್ತುಗಳನ್ನು ಹಂಚಿಕೊಳ್ಳಬೇಡಿ

ವಸ್ತುಗಳನ್ನು ಹಂಚಿಕೊಳ್ಳಬೇಡಿ

* ನಿಮ್ಮ ವೈಯಕ್ತಿಕ ವಸ್ತುಗಳಾದ ಟವೆಲ್, ಪಾತ್ರೆಗಳು ಮೊದಲಾದವುಗಳನ್ನು ಹಂಚಿಕೊಳ್ಳಬೇಡಿ

* ನಿಮ್ಮ ಕೋಣೆಯನ್ನು ಆಗಾಗ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಚ ಪಡಿಸಿಕೊಳ್ಳಿ

* ಸ್ನಾನ ಗೃಹ/ಶೌಚಾಲಯಗಳನ್ನು ದಿನಕ್ಕೆ ಒಮ್ಮೆಯಾದರೂ ಸ್ವಚ್ಚಗೊಳಿಸಿ

ಪೌಷ್ಠಿಕ ಆಹಾರ ಸೇವಿಸಿ

ಪೌಷ್ಠಿಕ ಆಹಾರ ಸೇವಿಸಿ

* ಪ್ರತಿ ದಿನ ಪಲ್ಸ್ ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್‌ನೊಂದಿಗೆ ನಿಮ್ಮ ಆರೋಗ್ಯವನ್ನು ನಿವೇ ಪರಿಶೀಲಿಸಿಕೊಳ್ಳಿ.

* ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸಿ

* ಧೂಮಪಾನ, ತಂಬಾಕು, ಮದ್ಯ ಸೇವನೆ ಮಾಡಬೇಡಿ.

English summary
The Bruhat Bengaluru Mahanagara Palike (BBMP) guidelines for home COVID care centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X