ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

GST ಗೊಂದಲ: ಜುಲೈ 1ರಿಂದ ಹೋಟೆಲ್ ತಿಂಡಿ ಗ್ರಾಹಕರಿಗೆ ಭಾರ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜೂನ್ 29: ದೇಶಾದ್ಯಂತ ಜುಲೈ 1ರಿಂದ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಹೊಸ ದರ ಪಟ್ಟಿ ಎದುರಾಗಲಿದೆ. ಹೆಚ್ಚಿನ ಎಲ್ಲಾ ಮಧ್ಯಮ ವಲಯದ ಹೋಟೆಲ್ ಗಳು, ಎಸಿ, ನಾನ್ ಎಸಿ ಹೊಟೇಲ್ ಗಳಲ್ಲಿ ಆಹಾರ ತಿನಿಸುಗಳ ಬೆಲೆ ಬದಲಾಗಲಿದೆ. ಹೋಟೆಲ್ ಗಳು ಮತ್ತು ರೆಸ್ಟಾರೆಂಟ್ ಗಳು ಅನಿವಾರ್ಯವಾಗಿ ಜಿಎಸ್ಟಿ ಜಾರಿಗೆ ತರಲೇ ಬೇಕಿದ್ದು, ಇನ್ನೂ ಈ ವಲಯದಲ್ಲಿ ಒಂದಷ್ಟು ಗೊಂದಲಗಳು ಮನೆ ಮಾಡಿವೆ.

ಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿ

ಐಶಾರಾಮಿ ಹೋಟೆಲ್ ಗಳಿಗೆ ಜಿಎಸ್ಟಿಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಸಾಮಾನ್ಯ ಹೋಟೆಲ್ ಗಳಲ್ಲಿ ಜಿಎಸ್ಟಿ ಜಾರಿಯಿಂದ ಮಾಲಿಕರಿಗೆ ಹೊರೆ ಬೀಳಲಿದ್ದು, ಹೊರೆಯನ್ನು ಹೋಟೆಲ್ ಗಳು ಗ್ರಾಹಕರ ಜೇಬಿಗೆ ಹಾಕಲಿವೆ. ಹಾಗಾಗಿ ಹೋಟೆಲ್ ತಿಂಡಿಗಳು ಇನ್ನು ಮುಂದೆ ಗ್ರಾಹಕರ ಜೇಬಿಗೆ ಭಾರವಾಗಲಿದೆ.

ಜುಲೈ 1ರಿಂದ ಜಿಎಸ್ಟಿ ಹೊರತಾಗಿ ಬದಲಾಗುವ 9 ಸಂಗತಿಜುಲೈ 1ರಿಂದ ಜಿಎಸ್ಟಿ ಹೊರತಾಗಿ ಬದಲಾಗುವ 9 ಸಂಗತಿ

ಐಶಾರಾಮಿ ಹೋಟೆಲುಗಳು ಶೇಕಡಾ 28 ತೆರಿಗೆ ವ್ಯಾಪ್ತಿಗೆ ಬರಲಿವೆ. ಈ ಹೋಟೆಲ್ ಗಳಿಗೆ ಮೊದಲೂ ಇಷ್ಟೇ ಪ್ರಮಾಣದಲ್ಲಿ ತೆರಿಗೆ ಇದ್ದುದರಿಂದ ಜಿಎಸ್ಟಿಯಿಂದ ಇವುಗಳ ದರಪಟ್ಟಿಯಲ್ಲಿ ಯಾವುದೇ ಬದಲಾವಣೆಗಳೂ ಆಗುವುದಿಲ್ಲ. ವರ್ಷಕ್ಕೆ 75 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಹೊಟೇಲುಗಳು ಶೇಕಡಾ 5ರ ತೆರಿಗೆ ವ್ಯಾಪ್ತಿಗೆ ಹಾಗೂ ದರ್ಶಿನಿ, ಢಾಬಾ, ಕಾಫಿ ಶಾಪ್ ಮತ್ತು ಫುಡ್ ಜಾಯಿಂಟ್ ಗಳು ಶೇಕಡಾ 12-18ರ ತೆರಿಗೆ ವ್ಯಾಪ್ತಿಗೆ ಬರಲಿವೆ.

ಎಷ್ಟು ಹೆಚ್ಚುವರಿ ಹಣ ನೀಡಬೇಕು

ಎಷ್ಟು ಹೆಚ್ಚುವರಿ ಹಣ ನೀಡಬೇಕು

ತಾವು ಯಾವ ವ್ಯಾಪ್ತಿಗೆ ಬರುತ್ತೇವೆ ಎಂಬ ಆಧಾರದ ಮೇಲೆ ಹೋಟೆಲ್ ಗಳು ಆಹಾರಗಳ ಬೆಲೆ ನಿಗದಿಪಡಿಸಬೇಕಾಗಿದೆ. ಶೇಕಡಾ 5 ತೆರಿಗೆ ವ್ಯಾಪ್ತಿಗೆ ಬರುವ ಹೋಟೆಲ್ ಗಳ ತಿಂಡಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

ಆದರೆ ನಾನ್ ಎಸಿ ಹೊಟೇಲುಗಳು ಸದ್ಯ ಬೆಂಗಳೂರಿನಲ್ಲಿ ಶೇಕಡಾ 4 ತೆರಿಗೆ ಪಾವತಿಸುತ್ತಿದ್ದರೆ ಇನ್ನುಮುಂದೆ ಶೇಕಡಾ 12 ತೆರಿಗೆ ಪಾವತಸಿಬೇಕಾಗುತ್ತದೆ. ಇನ್ನು ಎಸಿ ಹೊಟೇಲುಗಳಲ್ಲಿ ಶೇಕಡಾ 6-8ರಷ್ಟು ಹೆಚ್ಚಿನ ಮೊತ್ತ ಪಾವತಿಸಬೇಕಾಗಿ ಬರಬಹುದು. ಈ ಹಿಂದಿನ ಶೇ. 4 ತೆರಿಗೆಯನ್ನು ಈಗಲೂ ಹೋಟೆಲ್ ಮಾಲಿಕರು ಪಾವತಿಸಿದರೆ ಉಳಿದಿದ್ದನ್ನು ಗ್ರಾಹಕರ ತಲೆ ಮೇಲೆ ದೂಡುತ್ತವೆ.

ಗ್ರಾಹಕರ ಮೇಲೆ ಹೊರೆ ಗ್ಯಾರಂಟಿ

ಗ್ರಾಹಕರ ಮೇಲೆ ಹೊರೆ ಗ್ಯಾರಂಟಿ

ಸದ್ಯ ಬೆಂಗಳೂರಿನಲ್ಲಿರುವ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಶೇಕಡಾ 4 ತೆರಿಗೆ ಪಾವತಿಸುತ್ತಿವೆ. ಇದೀಗ ಜಿಎಸ್ಟಿಯಿಂದಾಗಿ ಗ್ರಾಹಕರು ಹೊರೆ ಹೊರಲೇಬೇಕಾಗಿದೆ. ಪ್ರತಿಯೊಂದನ್ನೂ ಗ್ರಾಹಕರ ಬಿಲ್ಲಿನಲ್ಲಿ ತೋರಿಸಿ ಸಂಗ್ರಹ ಮಾಡಬೇಕಾಗಿದೆ. ಬೇರೆ ಆಯ್ಕೆಯೇ ಇಲ್ಲ," ಎನ್ನುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಒಕ್ಕೂಟದ ಕಾರ್ಯದರ್ಶಿ ಸುಬ್ರಮಣ್ಯಂ ಹೊಳ್ಳ.

ಸಾಮಾನ್ಯ ಮಧ್ಯಮ ವರ್ಗದ ಎಸಿ ಹೋಟೆಲ್ ಗಳಲ್ಲಿ ನೀವು ಶೇಕಡಾ 12-16ರಷ್ಟು ಹೆಚ್ಚು ಬಿಲ್ ನೀಡಬೇಕಾಗುತ್ತದೆ. ವಿಶೇಷವೆಂದರೆ ಸ್ಟಾರ್ ಹೋಟೆಲ್ ಗಳಲ್ಲಿ ಹಾಲಿ ದರಕ್ಕಿಂತ ಕನಿಷ್ಠ ಶೇಕಡಾ 4 ಕಡಿಮೆ ದರವಿರಲಿದೆ.

ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...

ಆಹಾರ ಉತ್ಪನ್ನಗಳ ಬೆಲೆ ವ್ಯತ್ಯಯದ ತಲೆ ಬಿಸಿ

ಆಹಾರ ಉತ್ಪನ್ನಗಳ ಬೆಲೆ ವ್ಯತ್ಯಯದ ತಲೆ ಬಿಸಿ

ಆಹಾರ ಉತ್ಪನ್ನಗಳ ಬೆಲೆ ಆಗಾಗ ಬದಲಾಗುತ್ತಿರುತ್ತವೆ. "ಸದ್ಯಕ್ಕೆ ಈಗಿನ ಆಹಾರ ಉತ್ಪನ್ನಗಳ ಬೆಲೆ ನೋಡಿಕೊಂಡು ಶೇಕಡಾ 8-9ರಷ್ಟು ಬೆಲೆ ಏರಿಕೆ ಮಾಡಬೇಕಾಗಿದೆ. ಆಹಾರ ಉತ್ಪನ್ನಗಳ ಬೆಲೆ ಮುಂದೆ ಏನು ಎಂಬುದು ಗೊತ್ತಿಲ್ಲ. ಒಂದೊಮ್ಮೆ ಜುಲೈನಿಂದ ಬೆಲೆ ಏರಿಕೆ ಮಾಡಬೇಕಿದ್ದರೆ ತ್ರೈಮಾಸಿಕದ ಅಂತ್ಯಕ್ಕೆ ಬೆಲೆಗಳ ಮರು ನಿಗದಿ ಮಾಡೇಕಾಗುತ್ತದೆ.

ಅಡುಗೆಗೆ ಬಳಸುವ ಆಹಾರ ಉತ್ಪನ್ನಗಳ ಬೆಲೆ ಶೇಕಡಾ 2.5-3 ರಷ್ಟು ಮಾತ್ರ ವ್ಯತ್ಯಾಸವಾಗುತ್ತಿರುತ್ತದೆ ಎಂಬ ಅಂದಾಜಿನ ಮೇಲೆ ಬೆಲೆಗಳನ್ನು ಹೋಟೆಲ್ ಮಾಲಿಕರು ನಿಗದಿ ಮಾಡಲಿದ್ದಾರೆ. ಉತ್ಪನ್ನಗಳಿಗೆ ನೀಡಿದ ಬೆಲೆಯನ್ನು ಕಳೆದು ಹೋಟೆಲುಗಳು ಟ್ಯಾಕ್ಸ್ ಕಟ್ಟಲಿವೆ. ಒಂದೊಮ್ಮೆ ಹೆಚ್ಚಾದಲ್ಲಿ ಹೆಚ್ಚಿನ ದರವನ್ನು ಗ್ರಾಹಕರಿಂದ ಅನಿವಾರ್ಯವಾಗಿ ಸುಲಿಗೆ ಮಾಡಲಿವೆ.

ಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನ

ಲಾಡ್ಜ್ ಗಳಿಗೆ ರಿಲೀಫ್

ಲಾಡ್ಜ್ ಗಳಿಗೆ ರಿಲೀಫ್

ಜಿಎಸ್ಟಿಯಿಂದ ಲಾಡ್ಜ್ ಗಳಿಗೆ ಮಾತ್ರ ಯಾವುದೇ ತಲೆಬಿಸಿ ಇಲ್ಲ. ಹೆಚ್ಚಿನ ಲಾಡ್ಜ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಬಹುಶಃ ಲಾಡ್ಜ್ ಗಳಿಗೆ ಗ್ರಾಹಕರು ಕಡಿಮೆ ದರ ಪಾವತಿಸಬೇಕಾದ ಸಂದರ್ಭ ಬರುವ ಸಾಧ್ಯತೆಯೇ ಜಾಸ್ತಿ. "800-1000 ರೂಪಾಯಿ ಬೆಲೆಯ ಲಾಡ್ಜ್ ರೂಂಗಳ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹಿಂದೆ ಈ ರೂಂಗಳಿಗೆ ಶೇಕಡಾ 8 ಸೇವಾ ತೆರಿಗೆ ಮತ್ತು ಶೇಕಡಾ 6 ಐಶಾರಾಮಿ ತೆರಗೆಗಳಿತ್ತು. ಸದ್ಯ ಶೇಕಡಾ 12ರ ತೆರಿಗೆ ವ್ಯಾಪ್ತಿಗೆ ಇವುಗಳು ಬರುವುದರಿಂದ ರೂಂಗಳ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದೆ," ಎನ್ನುತ್ತಾರೆ ಹೊಳ್ಳ.

ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ಹೇಗಿರಲಿದೆ?ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ಹೇಗಿರಲಿದೆ?

ಗ್ರಾಹಕರನ್ನು ವಶದಲ್ಲಿಟ್ಟುಕೊಳ್ಳುವುದೇ ಕಷ್ಟ

ಗ್ರಾಹಕರನ್ನು ವಶದಲ್ಲಿಟ್ಟುಕೊಳ್ಳುವುದೇ ಕಷ್ಟ

ಜಿಎಸ್ಟಿಯಲ್ಲಿ ಹೋಟೆಲ್ ಗಳ ಮೇಲೆ ಮಾತ್ರ ಶೇಕಡಾ 5, 12, 18 ಮತ್ತು 28 ನಾಲ್ಕು ರೀತಿಯ ತೆರಿಗೆ ಇದೆ. ಇದು ಹೋಟೆಲ್ ಗಳಿಗೆ ಹೊರೆಯಾಗಲಿದೆ ಎಂಬುದು ಮಾಲಿಕರ ವಾದ. "ಬಿಸಿನೆಸ್ ಗೆ ಹೊಡೆತ ಬೀಳಲಿದೆ ಎಂಬುದು ನಮ್ಮ ಆತಂಕ. ಅದರಲ್ಲೂ ಮಧ್ಯಮ ವರ್ಗದ ಹೋಟೆಲ್ ಗಳಿಗೆ ಈ ಭೀತಿ ಇದೆ. ನಮ್ಮ ಗ್ರಾಹಕರಲ್ಲಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಜನರು ಬರುತ್ತಾರೆ. ಅವರೆಲ್ಲಾ ಶೇ. 5 ತೆರಿಗೆ ವ್ಯಾಪ್ತಿಗೆ ಬರುವ ಸಣ್ಣ ಹೋಟೆಲ್ ಗಳ ಕಡೆ ಮುಖ ಮಾಡಬಹುದು. ಇದರಿಂದ ಆದಾಯ ಕಡಿಮೆಯಾಗುತ್ತದೆ. ಆದಾಯ ಕಡಿಮೆಯಾಗುತ್ತಿದ್ದಂತೆ ಉದ್ಯೋಗಕ್ಕೆ ಹೊಡೆತ ಬೀಳುತ್ತದೆ," ಎನ್ನುತ್ತಾರೆ ಹೊಳ್ಳರು.

ಹೀಗೆ ಜಿಎಸ್ಟಿ ಎನ್ನುವುದು ಹೋಟೆಲ್ ವಲಯದಲ್ಲಿ ತಲ್ಲಣ ಎಬ್ಬಿಸಿದೆ. ಜತೆಗೆ ಗ್ರಾಹಕರ ಜೇಬಿಗೆ ಭಾರವಾಗುವ ಸಾಧ್ಯತೆಗಳಿವೆ.

English summary
Come July 1 and fresh, revised rate cards will be presented to customers at most mid-level, A/C and non A/C restaurants across the country. With hotels and restaurants all set to implement GST with uncertainty still looming large, customers will have shell out more at mid-level hotels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X