ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಖ್ರಿ ವೃತ್ತ ಹೆಬ್ಬಾಳ ನಡುವಿನ ಎಲಿವೇಟೆಡ್ ಕಾರಿಡಾರ್ ಯೋಜನೆ ಅಂತಿಮ

|
Google Oneindia Kannada News

ಬೆಂಗಳೂರು, ಮೇ 20: ಹಲವಾರು ತೊಡಕುಗಳ ಬಳಿಕ ಮೇಖ್ರಿ ವೃತ್ತದಿಂದ ಹೆಬ್ಬಾಳ ನಡುವೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಕೊನೆಗೂ ಅನುಮತಿ ಸಿಕ್ಕಿದೆ.

ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಮೇಖ್ರಿ ವೃತ್ತದ ಮಾರ್ಗವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಲು ನಿರ್ಧರಿಸಿದೆ. ಈ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನಡುವಿನ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆ ಎಲ್ಲಿಂದ ಎಲ್ಲಿಯವರೆಗೆ?

ಎಲಿವೇಟೆಡ್ ಕಾರಿಡಾರ್ ಯೋಜನೆ ಎಲ್ಲಿಂದ ಎಲ್ಲಿಯವರೆಗೆ?

ಹೆಬ್ಬಾಳದ ಎಸ್ಟೀಂ ಮಾಲ್‌ನಿಂದ ಮೇಖ್ರಿ ವೃತ್ತ ಮಾರ್ಗವಾಗಿ ಚಾಲುಕ್ಯ ವೃತ್ತದವರೆಗೆ ನಿರ್ಮಿಸಲು ಉದ್ದೇಶಿದಿದ್ದ ಕಾಂಕ್ರೀಟ್ ಮೇಲ್ಸೇತುವೆಯನ್ನು ಚಾಲುಕ್ಯ ವೃತ್ತದಿಂದ ಮೇಖ್ರಿ ವೃತ್ತದವರೆಗೆ ಮಾತ್ರ ನಿರ್ಮಿಸಲು ನಿರ್ಧರಿಸಿದೆ.

ಸ್ಟೀಲ್ ಬ್ರಿಡ್ಜ್ ಯೋಜನೆಗೆ ವಿರೋಧವಿತ್ತು

ಸ್ಟೀಲ್ ಬ್ರಿಡ್ಜ್ ಯೋಜನೆಗೆ ವಿರೋಧವಿತ್ತು

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಈ ಹಿಂದೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿತ್ತು. ನಂತರ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ಈ ಮಾರ್ಗದಲ್ಲಿ ಸ್ಟೀಲ್ ಬ್ರಿಡ್ಜ್ ಬದಲು ಕಾಂಕ್ರೀಟ್ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪ ಮಾಡಿತ್ತು. ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‌ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಘೋಷಿಸಿದ್ದರು.

'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ 'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ

ಎರಡೂ ಯೋಜನೆಯ ಪ್ರಸ್ತಾಪ

ಎರಡೂ ಯೋಜನೆಯ ಪ್ರಸ್ತಾಪ

ಒಂದೇ ಮಾರ್ಗದಲ್ಲಿ ಎರಡು ಯೋಜನೆಗಳ ಪ್ರಸ್ತಾಪ ಬಂದಿದ್ದರಿಂದ ಒಂದು ಯೋಜನೆಯನ್ನು ಕೈಬಿಡಬೇಕಾಯಿತು. ಆದರೆ ಕೆಆರ್‌ಐಡಿಎಲ್ ಮೂಲಕ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಹೊರಟಿದ್ದ ಲೋಕೋಪಯೋಗಿ ಇಲಾಖೆಯಾಗಲು, ಬಿಡಿಎ ಮೂಲಕ ಕಾಂಕ್ರೀಟ್ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಹೊಂದಿದ್ದ ನಗರಾಭಿವೃದ್ಧಿ ಇಲಾಖೆಯಾಗಲಿ ತಮ್ಮ ಯೋಜನೆಯನ್ನು ಮೇಖ್ರಿ ವೃತ್ತಕ್ಕೆ ಮೊಟಕುಗೊಳಿಸಲು ಸಿದ್ಧವಿರಲಿಲ್ಲ.

ಎಲಿವೇಟೆಡ್ ಕಾರಿಡಾರ್‌ನಿಂದ ಮರಗಳಿಗಷ್ಟೇ ಅಲ್ಲ ಬಫರ್‌ ವಲಯಕ್ಕೂ ಅಪಾಯ ಎಲಿವೇಟೆಡ್ ಕಾರಿಡಾರ್‌ನಿಂದ ಮರಗಳಿಗಷ್ಟೇ ಅಲ್ಲ ಬಫರ್‌ ವಲಯಕ್ಕೂ ಅಪಾಯ

ಕಾಂಕ್ರೀಟ್ ಮೇಲ್ಸೇತುವೆ ಮೇಖ್ರಿ ವೃತ್ತದಲ್ಲೇ ಅಂತ್ಯ

ಕಾಂಕ್ರೀಟ್ ಮೇಲ್ಸೇತುವೆ ಮೇಖ್ರಿ ವೃತ್ತದಲ್ಲೇ ಅಂತ್ಯ

ಕೆಆರ್‌ಡಿಸಿ ಆದೇಶದಂತೆ ಕಾಂಕ್ರೀಟ್ ಮೇಲ್ಸೇತುವೆಯನ್ನು ಮೇಖ್ರಿ ವೃತ್ತಕ್ಕೆ ಅಂತ್ಯಗೊಳಿಸುವ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ, ಹೆಬ್ಬಾಳ ಮೇಲ್ಸೇತುವೆಯ ಹೆಚ್ಚುವರಿ ಲೂಪ್ ಅನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಬಳಿ ಎಲಿವೇಟಡ್ ಕಾರಿಡಾರ್‌ನ್ನು ಎಲಿವೇಟೆಡ್ ಕಾರಿಡಾರ್‌ಗೆ ವಿಲೀನಗೊಳಿಸಲು ಮತ್ತು ಉತ್ತರ-ದಕ್ಷಿಣ ಎಲಿವೇಟೆಡ್ ಕಾರಿಡಾರ್‌ನ್ನು ಮೇಖ್ರಿ ವೃತ್ದ ರಸ್ತೆಯಿಂದ ಕಾವೇರಿ ಜಂಕ್ಷನ್‌ ಕಡೆಗೆ 100 ಮೀಟರ್ ನಂತರ ಕೊನೆಗೊಳಿಸಲು ಅನುಮೋದನೆ ನೀಡಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು? ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

English summary
After many confusions Government gave green signal to Elevated corridor from Mekhri circle to Hebbala esteem Mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X