ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಆಟೋಗಳಿಗೆ ಇ-ಪರ್ಮಿಟ್:ನಕಲಿ ಪರವಾನಗಿ ಹಾವಳಿಗೆ ತಡೆ

|
Google Oneindia Kannada News

ಬೆಂಗಳೂರು, ಮಾರ್ಚ್ 24: ನೆನಗುದಿಗೆ ಬಿದ್ದಿದ್ದ ಇ-ಪರ್ಮಿಟ್ ವ್ಯವಸ್ಥೆಗೆ ಮರುಜೀವ ಬಂದಿದ್ದು, ಆಟೋಗಳಿಗೆ ಇ-ಪರ್ಮಿಟ್ ನೀಡಲು ಸಾರಿಗೆ ಇಲಾಖೆ ಸಮ್ಮತಿ ಸೂಚಿಸಿದೆ.

1.25 ಲಕ್ಷ ಸುರಕ್ಷತಾ ಪ್ರಮಾಣ ಪತ್ರ ಖರೀದಿಸಲು ಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ನಗರದಲ್ಲಿ 25ಸಾವಿರಕ್ಕೂ ಹೆಚ್ಚು ಆಟೋಗಳು ನಕಲಿ ಪರವಾನಗಿ ಹೊಂದಿದ್ದನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು ಆಟೋಗಳಿಗೆ ಇ ಪರ್ಮಿಟ್ ನೀಡುವ ವ್ಯವಸ್ಥೆ ಕುರಿತು ಆಲೋಚಿಸಿದ್ದರು.

auto

ಇದನ್ನು ಜನವರಿ ಮೊದಲ ವಾರದಲ್ಲಿಯೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಆದರೆ ಇ ಪರ್ಮಿಟ್ ದೃಢಪಡಿಸುವ ಪ್ರಮಾಣಪತ್ರವನ್ನು ವಿತರಿಸುವ ಬಗ್ಗೆ ಗೊಂದಲವಿತ್ತು.

ಕಾಗದದಲ್ಲಿ ಪ್ರಮಾಣ ಪತ್ರ ನೀಡಲು ಯೋಚಿಸಿದ್ದ ಅಧಿಕಾರಿಗಳು, ಅದಕ್ಕಾಗಿ 76 ಲಕ್ಷ ಅಗತ್ಯವಿರುವುದಾಗಿ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.

ನಕಲು ಮಾಡಲಾಗದ, ಜೆರಾಕ್ಸ್ ಮಾಡಿದರೂ 'ಜೆರಾಕ್ಸ್ ಪ್ರತಿ' ಎಂಬ ಮುದ್ರಿತ ಅಕ್ಷರಗಳು ಬರುವಂತಹ ಗುಣಮಟ್ಟದ ಪ್ರಮಾಣಪತ್ರಗಳನ್ನು ಆಟೊ ಚಾಲಕರಿಗೆ ನೀಡಲು ಅಧಿಕಾರಿಗಳು ಆಲೋಚನೆ ಮಾಡಿದ್ದಾರೆ.

'ಕಾಗದ ಖರೀದಿ ಸಂಬಂಧ 'ಮೈಸೂರು ಪೇಪರ್ ಮಿಲ್' ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ. ಗುಣಮಟ್ಟದ ಕಾಗದ ನೀಡಲು ಒಪ್ಪಿಕೊಂಡಿದ್ದಾರೆ,.ಕಾಗದಗಳ ಖರೀದಿಗೆ ಕೆಲವೇ ದಿನಗಳಲ್ಲಿ ಕಾರ್ಯಾದೇಶ ನೀಡಲಿದ್ದೇವೆ. ಅದಾದ ವಾರದ ನಂತರವೇ ಪ್ರಮಾಣಪತ್ರ ವಿತರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Transport Deoartment given green signal for auto rickshaw driver's e permit. For this project department agreed to purchase 1.25 lakhs safety certificates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X