ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ದಿನಾಚರಣೆ : ಅದಮ್ಯ ಚೇತನದಿಂದ ಹಸಿರು ಜಾಥಾ

|
Google Oneindia Kannada News

ಬೆಂಗಳೂರು, ಜೂನ್ 06 : ವಿಶ್ವ ಪರಿಸರ ದಿನದ ಅಂಗವಾಗಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ಭಾನುವಾರ 'ಹಸಿರು ಜಾಥಾ' ನಡೆಯಿತು. ಬೆಂಗಳೂರು ನಗರದಲ್ಲಿ ಗಿಡಗಳನ್ನು ಬೆಳೆಸಲು ಸಂಸ್ಥೆ ಪ್ರತಿ ಭಾನವಾರವನ್ನು 'ಹಸಿರು ಭಾನುವಾರವಾಗಿ' ಆಚರಣೆ ಮಾಡುವ ಸಂಕಲ್ಪ ಮಾಡಿತು.

ಲಾಲ್ ಬಾಗ್ ಬಳಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು 'ಹಸಿರು ಜಾಥಾ'ಕ್ಕೆ ಚಾಲನೆ ನೀಡಿದರು. ಕೆಜಿ ನಗರ, ವಿಜಯನಗರ, ಆರ್‌ಪಿಸಿ ಲೇಔಟ್, ಚಂದ್ರಾ ಲೇಔಟ್, ಗಿರಿನಗರ, ವೀರಭದ್ರನಗರ, ಅರಕೆರೆ, ಹುಳಿಮಾವು, ಬೆಂಗಳೂರು ಡೈರಿ ಮತ್ತು ಬಸವನಗುಡಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜಾಥಾ ಸಂಚಾರ ನಡೆಸಿತು. [ಸಾವಯವ ಕೃಷಿಯಿಂದ ಮಾತ್ರ ಆರೋಗ್ಯ ಭಾಗ್ಯ: ಡಾ. ಅಶ್ವಥ್]

adamya chetana

ನೂರಾರು ಜನರು, ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಎಲೆಕ್ಟ್ರಿಕ್ ಕಾರು, ಬೈಕ್‌ಗಳಿಗೆ ಜಾಥಾದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲಾಗಿತ್ತು. [ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ]

ಸುಮಾರು 20 ಸಾವಿರ ಗಿಡಗಳನ್ನು ವಿವಿಧ ಬಡಾವಣೆಗಳಲ್ಲಿ ಹಂಚಿಕೆ ಮಾಡಲಾಯಿತು. ಈ ಗಿಡಗಳನ್ನು ಬೆಳೆಸಿ, ಪೋಷಿಸಿ ಹಸಿರು ಬೆಂಗಳೂರು ಅಭಿಯಾನವನ್ನು ಯಶಸ್ವಿಗೊಳಿಸುವ ಶಪಥವನ್ನು ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಕೈಗೊಂಡರು.

ಅರಕೆರೆಯಲ್ಲಿರುವ ಎಸ್‌ಓಎಸ್ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಅನಂತ್ ಕುಮಾರ್ ಅವರು ಮಕ್ಕಳೊಂದಿಗೆ ಮರಗಿಡಗಳನ್ನು ಉಳಿಸಿ, ಬೆಳೆಸುವ ಕುರಿತು ಸಂವಾದ ನಡೆಸಿದರು. ಕಳೆದ ವರ್ಷ ಚಾಲನೆ ನೀಡಿದ 'ಹಸಿರು ಬೆಂಗಳೂರು' ಅಭಿಯಾನದ ಬಗ್ಗೆ ಅನಂತ್ ಕುಮಾರ್ ಮಾತನಾಡಿದರು. [ಸಾಲುಮರದ ತಿಮ್ಮಕ್ಕರೊಂದಿಗೆ ಪರಿಸರ ದಿನಾಚರಣೆ]

ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಬೆಂಗಳೂರು ಅಭಿಯಾನ ಕೈಗೊಳ್ಳಲು ತಮಗೆ ಸ್ಫೂರ್ತಿ ಎಂದು ಹೇಳಿದರು.

ಹಸಿರು ಭಾನುವಾರ : ಹಸಿರು ಬೆಂಗಳೂರು ಅಭಿಯಾನವನ್ನು ಯಶಸ್ವಿಗೊಳಿಸಲು ಅದಮ್ಯ ಚೇತನ 2016ರ ಪ್ರತಿ ಭಾನುವಾರವನ್ನು ಹಸಿರು ಭಾನುವಾರವಾಗಿ ಆಚರಣೆ ಮಾಡುವ ಸಂಕಲ್ಪ ಮಾಡಿತು. ಬೆಂಗಳೂರಿನ ಪ್ರತಿಯೊಬ್ಬರು ಈ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅನಂತ್ ಕುಮಾರ್ ಮನವಿ ಮಾಡಿದರು.

English summary
A Green Rally was organized by Adamya Chetana on World Environment day June 5, 2016. Rally was lead by the Chief patron of Adamya Chetana and union minister Ananth kumar. The rally was flagged-off from Lalbagh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X