ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಗ್ರಾಫೈಟ್ ಇಂಡಿಯಾ ಲಿ. ಕಾರ್ಖಾನೆ ಮುಚ್ಚಲು ಆದೇಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 04 : ಬೆಂಗಳೂರು ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯನ್ನು ಮುಚ್ಚುವಂತೆ ಕೆಎಸ್‌ಪಿಸಿಬಿ ಆದೇಶ ನೀಡಿದೆ. ಸ್ಥಳೀಯರು ಕಾರ್ಖಾನೆ ಮುಚ್ಚುವಂತೆ ಹೋರಾಟವನ್ನು ನಡೆಸಿದ್ದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗ್ರಾಫೈಟ್ ಇಂಡಿಯಾ ಲಿಮಿಟೆಡ್ (ಜಿಐಎಲ್) ಕಾರ್ಖನೆಯನ್ನು ಮುಚ್ಚುವಂತೆ ಆದೇಶ ನೀಡಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಅತಿ ಹೆಚ್ಚು ಕಾರು ಹೊಂದಿರುವ ನಗರ ಮುಂಬೈ, ಬೆಂಗಳೂರಿಗೆ ಯಾವ ಸ್ಥಾನಅತಿ ಹೆಚ್ಚು ಕಾರು ಹೊಂದಿರುವ ನಗರ ಮುಂಬೈ, ಬೆಂಗಳೂರಿಗೆ ಯಾವ ಸ್ಥಾನ

ಎರಡು ದಶಕಗಳಿಂದ ಕಾರ್ಖಾನೆಯ ಮಾಲಿನ್ಯದ ವಿರುದ್ಧ ಹೋರಾಟ ನಡೆಸಿದ್ದ ಸ್ಥಳೀಯರು ಈ ಕ್ರಮದಿಂದ ಗೆಲವು ಸಾಧಿಸಿದಂತಾಗಿದೆ. ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆ ಮತ್ತು ಸ್ಥಳೀಯರು ಕಾರ್ಖಾನೆ ವಿರುದ್ಧ ನಿರಂತರ ಹೋರಾಟ ಮಾಡಿದ್ದರು.

ಅತಿ ಹೆಚ್ಚು ಮಾಲಿನ್ಯ: 102 ನಗರಗಳಲ್ಲಿ ಬೆಂಗಳೂರು ಕೂಡ ಇದೆಅತಿ ಹೆಚ್ಚು ಮಾಲಿನ್ಯ: 102 ನಗರಗಳಲ್ಲಿ ಬೆಂಗಳೂರು ಕೂಡ ಇದೆ

Graphite India Ltd in Bengaluru to shut down

ಮಾಲಿನ್ಯ ನಿಯಂತ್ರಣ ಮಂಡಳಿ 1981ರ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 31 ಹಾಗೂ 1983ರ ಕರ್ನಾಟಕ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ನಿಯಮಗಳು 20 (ಎ) ಅಡಿ ಕಾರ್ಖಾನೆಗೆ ನೋಟಿಸ್ ಜಾರಿ ಮಾಡಿತ್ತು.

ವಾಯು ಮಾಲಿನ್ಯ: 2017ರಲ್ಲಿ ದೇಶದಲ್ಲಿ 12 ಲಕ್ಷ ಮಂದಿ ಬಲಿವಾಯು ಮಾಲಿನ್ಯ: 2017ರಲ್ಲಿ ದೇಶದಲ್ಲಿ 12 ಲಕ್ಷ ಮಂದಿ ಬಲಿ

2020ರ ಜೂನ್ 30ರ ತನಕ ಕೈಗಾರಿಕೆಯನ್ನು ಮುಂದುವರೆಸಲು ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರದ್ದು ಮಾಡಿತ್ತು. ಜಲ ಮತ್ತು ವಾಯು ಮಾಲಿನ್ಯಕ್ಕೆ ಆಸ್ಪದ ಕಲ್ಪಿಸುವ ಯಾವುದೇ ಕೈಗಾರಿಕಾ ಕಾರ್ಯಾಚರಣೆಗೆ ಅವಕಾಶವಿಲ್ಲ ಎಂದು ಹೇಳಿತ್ತು.

2012-13ರಲ್ಲಿ ಕಾರ್ಖನೆ ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಎತ್ತಿ ಹಿಡಿದಿತ್ತು. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಬೇಕಾಗಿದೆ.

English summary
The Karnataka State Pollution Control Board ordered to shut down Graphite India Ltd in Bengaluru. NGT recently withdraw the license of Graphite India Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X