ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನಗಳ ಮೇಲೆ ಜಿಪಿಎಸ್ ಕಣ್ಗಾವಲು

|
Google Oneindia Kannada News

ಬೆಂಗಳೂರು, ಡಿಸೆಂಬರ್, 20 : ಕಸ ಸಮಸ್ಯೆ ನಿವಾರಣೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿರುವ ಬಿಬಿಎಂಪಿ ತ್ಯಾಜ್ಯವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಮುಂದಾಗಿದೆ.

ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್ ಗಳು ಇನ್ನು ಮುಂದೆ ಅಧಿಕಾರಿಗಳ ಕಣ್ಗಾವಲಿನಲ್ಲಿ ಇರಲಿದೆ. ಎಲ್ಲಿ ಕಸ ಸಂಗ್ರಹಿಸಿವೆ. ಎಲ್ಲಿ ವಿಲೇವಾರಿ ಮಾಡುತ್ತಿವೆ ಎಂಬುದು ಕ್ಷಣಾರ್ಧದಲ್ಲಿ ತಿಳಿಯಲಿದೆ.

ದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆ

ಅದಕ್ಕಾಗಿಯೇ ಗುತ್ತಿಗೆ ಆಧಾರದಲ್ಲಿ ಪಡೆಯುವ ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್ ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ರತಿಯಲ್ಲಿ 4 ಸಾವಿರ ಟನ್ ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲಾಗುತ್ತಿದೆ. ಅದಕ್ಕಾಗಿ 800ರೂ. ಖರ್ಚು ಮಾಡಲಾಗುತ್ತಿದೆ. ಆ ಹಣದಲ್ಲಿ ಕಾಂಪ್ಯಾಕ್ಟರ್ ಮತ್ತು ಆಟೋ ಟಿಪ್ಪರ್ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಹಣ ನೀಡಲಾಗುತ್ತದೆ.

ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ

ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ

ಹೊಸ ನಿಯಮದಂತೆ 750 ಮನೆಗಳಿಗೆ ಒಂದರಂತೆ ಆಟೋ ಟಿಪ್ಪರ್ ನಿಯೋಜನೆ ಮಾಡಲಾಗುತ್ತಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್ ಗಳಲ್ಲಿ ಕಸ ಅಂಗ್ರಹಿಸಲು ಅಂದಾಜು ೫ ಸಾವಿರ ಆಟೋ ಟಿಪ್ಪರ್ ಗಳು ಬೇಕಾಗಿವೆ. ಅಲ್ಲದೆ, ಆ ಆಟೋ ಟಿಪ್ಪರ್ ಗಳಿಂದ ಕಸ ಪಡೆದು ಕಸ ಸಂಗ್ರಹಣಾ ಘಟಕಗಳಿಗೆ ಸರಬರಾಜು ಮಾಡಲು ೫೦೦ ಕಾಂಪ್ಯಾಕ್ಟರ್ ಗಳ ಅವಶ್ಯಕತೆ ಇದೆ. ಇಷ್ಟು ಪ್ರಮಾಣದ ವಾಹನಗಳಿಗಾಗಿ ಶೀಘ್ರದಲ್ಲಿ ಟೆಂಡರ್ ಆಹ್ವಾನಿಸಲಾಗುತ್ತಿದೆ.

ವಾಹನಗಳಿಗೆ ಜಿಪಿಎಸ್ ಅಳವಡಿಸಲು ಬಿಬಿಎಂಪಿ ಟೆಂಡರ್ ಕರೆದಿದೆ

ವಾಹನಗಳಿಗೆ ಜಿಪಿಎಸ್ ಅಳವಡಿಸಲು ಬಿಬಿಎಂಪಿ ಟೆಂಡರ್ ಕರೆದಿದೆ

ಇದೀಗ ಕಸದ ಸಮಸ್ಯೆ ನಿವಾರಣೆಗೆ ತಂತ್ರಜ್ಞಾನದ ಟಚ್ ನೀಡಲಿದ್ದಾರೆ. ಅದರಂತೆ ಕಾಂಪ್ಯಾಕ್ಟರ್ ಮತ್ತು ಆಟೋ ಟಿಪ್ಪರ್ ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ಅವುಗಳ ಮೇಲ್ವಿಚಾರಣೆ ನೀಡಲಾಗುತ್ತಿದೆ. ಆ ಮೂಲಕ ಕಸ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಕ್ಕೆ ತಡೆ ಹಾಕಲು ನಿರ್ಧರಿಸಲಾಗಿದೆ. ಈ ಕುರಿತು ಶೀಘ್ರದಲ್ಲಿ ಕಾಂಪ್ಯಾಕ್ಟರ್ ಮತ್ತು ಆಟೋ ಟಿಪ್ಪರ್ ಗಳಿಗಾಗಿ ಟೆಂಡರ್ ಆಹ್ವಾನಿಸಲಾಗುತ್ತಿದ್ದು, ಆ ವಾಹನಗಳನ್ನು ಒದಗಿಸುವ ಗುತ್ತಿಗೆದಾರರು ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು ಎಂದು ಸೂಚಿಸಲಾಗುತ್ತಿದೆ.

ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದ

ಕಸ ವಿಲೇವಾರಿಯಲ್ಲಿನ ಅಕ್ರಮ ತಡೆಗೆ ಜಿಪಿಎಸ್

ಕಸ ವಿಲೇವಾರಿಯಲ್ಲಿನ ಅಕ್ರಮ ತಡೆಗೆ ಜಿಪಿಎಸ್

ಇನ್ನು, ಈ ಹಿಂದಿನ ಅಡಿಟ್ ವರದಿಯಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಕುರಿತಂತೆ, ಆಕ್ಷೇಪವಾಗಿತ್ತು. ಕಸ ಸಂಗ್ರಹಿಸಿ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಜತೆಗೆ, ಕೆಲವರು ಕಸ ಸಂಗ್ರಹಿಸುವುದು ಮತ್ತು ವಿಲೇವಾರಿ ಕಾರ್ಯಗಳನ್ನು ಮಾಡದೆಯೇ ಬಿಲ್ ಪಡೆದಿದ್ದಾರೆ ಎಂದೂ ಆಡಿಟ್ ವರದಿಯಲ್ಲಿ ತಿಳಿಸಲಾಗಿತ್ತು.

ಈ ಅಕ್ರಮಗಳನ್ನು ತಡೆಯಲು ಕಾಂಪ್ಯಾಕ್ಟರ್ ಮತ್ತು ಆಟೋ ಟಿಪ್ಪರ್ ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದ್ದು ಅದರಿಂದ ವಾಹನಗಳು ಎಷ್ಟು ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿವೆ. ಎಲ್ಲೆಲ್ಲಿ ಕಸ ಸಂಗ್ರಹಿವೆ ಮತ್ತು ಎಲ್ಲಿ ವಿಲೇವಾರಿ ಮಾಡಿವೆ ಎಂಬುದನ್ನುಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಜಿಪಿಎಸ್ ಅಳವಡಿಕೆಗೆ ಸಾಫ್ಟ್ ವೇರ್ ಸಿದ್ಧಗೊಂಡಿದೆ

ಜಿಪಿಎಸ್ ಅಳವಡಿಕೆಗೆ ಸಾಫ್ಟ್ ವೇರ್ ಸಿದ್ಧಗೊಂಡಿದೆ

ವಾಹನಗಳಲ್ಲಿನ ಜಿಪಿಎಸ್ ನ ಸಿಗ್ನಲ್ ಪಡೆಯುವುದು ಹಾಗೂ ಅದರ ಮೇಲೆ ನಿಗಾ ಇಡಲು ಹೊಸ ತಂತ್ರಾಂಶ ಸಿದ್ಧಪಡಿಸಲಾಗಿದೆ. ಅದರ ನಿಯಂತ್ರಣವನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅಲ್ಲದೆ, ಒಟ್ಟು ನಿಯಂತ್ರಣ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಿದ್ಧ ಪಡೆಇಸಲಾಗುತ್ತಿರುವ ಕಂಟ್ರೋಲ್ ರೂಂ ನಲ್ಲಿ ಮಾಡಲಾಗುತ್ತದೆ.

English summary
GPS tracking for BBMP garbage collecting vehicles: BBMP initiated GPS enable tracking system for garbage collecting vehicle like compacter and auto to control waste management and corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X