ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 1: ಸಾಕಷ್ಟು ಗೊಂದಲಗಳ ನಡುವೆ ಬಿಬಿಎಂಪಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಎಂ. ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.

ಚುನಾವಣೆ ಖಚಿತವಾದರೂ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮಾತ್ರ ಹಾಗೆಯೇ ಮುಂದುವರೆದಿದೆ. ಇದಕ್ಕೆ ಸಿಎಂ ಬಿಎಸ್​ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟವೇ ಕಾರಣವಾಗಿದೆ.

ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿ, ರವೀಂದ್ರ, ಗುರುಮೂರ್ತಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸಿಕೊಂಡು ಅಧಿಕಾರ ನಡೆಸುತ್ತಿವೆ. ಹೀಗಾಗಿ ಮೇಯರ್ ಉಪ ಮೇಯರ್ ಸ್ಥಾನ ಬಿಜೆಪಿಗೆ ಮರೀಚಿಕೆಯಾಗಿತ್ತು.

ಒಟ್ಟು 249 ಮತಗಳು,ಮ್ಯಾಜಿಕ್ ನಂಬರ್ 125, ಗೌತಮ್ ವಿರುದ್ಧ 110 ಮತಗಳು, ಸತ್ಯನಾರಾಯಣ ಪರ 112 ಮತಗಳು.

Gowtham Kumar Elected as a New Mayor Of BBMP

ಬಿಜೆಪಿ ಪಕ್ಷದ ಹಿರಿಯ ಕಾರ್ಪೋರೇಟರ್ ಆಗಿರುವ ಪದ್ಮನಾಭ ರೆಡ್ಡಿ ಕಳೆದ ನಾಲ್ಕು ವರ್ಷದಿಂದ ಬಿಬಿಎಂ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೇ ಇವರು ಆರಂಭದಿಂದಲೂ ಬಿಎಸ್​ವೈ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪಕ್ಷ ಈ ಬಾರಿ ಇವರನ್ನೇ ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು.

ಆದರೆ, ಕೊನೆಯ ವರ್ಷವಾದರೂ ಮೇಯರ್ ಸ್ಥಾನ ಪಡೆಯಲೇಬೇಕು ಎಂಬ ಹಠದಿಂದ ಬಿಜೆಪಿ ನಾಯಕರು ನಾನಾ ತಂತ್ರಗಳನ್ನು ಹೆಣೆದಿತ್ತು. ಇಬ್ಬರು ಜೆಡಿಎಸ್ ಶಾಸಕರು ಚುನಾವಣೆ ಬಹಿಷ್ಕರಿಸಿದ್ದರು.
ಸತ್ಯನಾರಾಯಣ ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿಯಾಗಿದ್ದರು. ಮೊದಲು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲಾಯಿತು. ಕೈ ಎತ್ತುವ ಮೂಲಕ ಮತ ಚಲಾಯಿಸಲಾಯಿತು.

English summary
Jogupalya, Shantinagar Constituency corporator Gowtam Kumar Elected As Bruhat Bengaluru Mahanagara Palike 53 Mayor. BBMP Mayor Election Held On October 1.2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X