ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಗಣೇಶ ಮೂರ್ತಿಗಳ ಸೊಬಗು ಸೌಂದರ್ಯ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 14 : ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಪ್ರಾರಂಭವಾಗುವ ಗೌರಿ ಗಣೇಶ ಚತುರ್ಥಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಗೌರಿ ಗಣೇಶ ಮೂರ್ತಿಗಳು ರಸ್ತೆ ರಸ್ತೆಗಳಲ್ಲಿಯೂ ಮಾರಾಟಗಾರರ ಶೆಡ್ ಗಳಲ್ಲಿ ಸ್ಥಾನ ಪಡೆದಿದೆ. ಇನ್ನೇನು ಎರಡು ದಿನದಲ್ಲಿ ಗೌರಿ ಗಣೇಶ ತಮ್ಮ ಭಕ್ತರ ಮನೆಗಳಿಗೆ ಪ್ರವೇಶ ಪಡೆದು ಪೂಜಿತಗೊಳ್ಳುವವರಿದ್ದಾರೆ.

ಗೌರಿ ಗಣಪತಿಗಳು ನಾನಾ ಬಣ್ಣ, ನಾನಾ ರೂಪ ಪಡೆದು ಕಂಗೊಳಿಸುತ್ತಿದ್ದು, ಇವುಗಳ ತಯಾರಿಕೆಯು ಆರು ತಿಂಗಳಿನಿಂದ ನಾಡಿನಾದ್ಯಂತ ನಡೆಯುತ್ತಿದೆ. ಎರಡು ತಿಂಗಳಿನಿಂದ ವೈವಿಧ್ಯಮಯ ಬಣ್ಣ ಪಡೆದು ದೈವಿ ಕಳೆ ಪಡೆದುಕೊಂಡು ಭಕ್ತರ ಮನೆ ಸೇರಲು ಗಣಪತಿ ಗೌರಿ ಬಹಳ ಉತ್ಸುಕರಾಗಿದ್ದಾರೆ.[ಟ್ವಿಟ್ಟರ್ ನಲ್ಲಿ ಪಾರ್ಲೆ ಜಿ ಬಿಸ್ಕತ್ತು ಗಣೇಶ ಟ್ರೆಂಡಿಂಗ್]

ಸುಮಾರು 150 ರೂಗಳಿಂದ ಪ್ರಾರಂಭವಾಗಿ ಗಣಪತಿ ಗೌರಿ ಮಣ್ಣಿನ ವಿಗ್ರಹಗಳ ಬೆಲೆ ಆಕಾರ, ಎತ್ತರಕ್ಕೆ ತಕ್ಕಂತೆ ಏರಿಕೆಯಾಗುತ್ತಿದೆ. ಜೊತೆಗೆ ಬಣ್ಣದ ಗೌರಿಗಣೇಶ ಒಂದೆಡೆ ಇದ್ದರೆ, ಪರಿಸರ ಸ್ನೇಹಿ ಗೌರಿ ವಿನಾಯಕಗಳು ತಲೆ ಎತ್ತಿವೆ.[ನಮ್ಮ ಸನಾತನ ಸಂಸ್ಕೃತಿ ಹಾಳು ಮಾಡುತ್ತಿರುವವರು ಯಾರು?]

ಬನ್ನಿ ನಮ್ಮ ಗೌರಿ ಗಣಪನ ಪ್ರತಿರೂಪಗಳು ಎಲ್ಲಿವೆ ಹೇಗಿವೆ ಎಂದು ನೋಡಿಕೊಂಡು ಬರೋಣ, ಇಷ್ಟವಾದರೆ ಕೊಂಡು ತರೋಣ, ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಇಲ್ಲಿರುವ ಗಣಪ ಮತ್ತು ಗೌರಿ ಮೂರ್ತಿಗಳು ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಮಾರಾಟಗಾರರ ಶೆಡ್ ನಲ್ಲಿ ಕಂಡದ್ದು ಹೀಗೆ..

ಗೌರಿ ಗಣೇಶ ಮಾರಾಟದ ಸ್ಥಳ

ಗೌರಿ ಗಣೇಶ ಮಾರಾಟದ ಸ್ಥಳ

ಜಯನಗರದ 4ನೇ ಬ್ಲಾಕ್ ನಲ್ಲಿ ಅಂದದ ಚಂದದ ಗೌರಿ ಗಣೇಶ ವಿಗ್ರಹಗಳು ನಿಮಗಾಗಿ

ಗೌರಿ ಅಂದಾವ ನೋಡಿರಿ

ಗೌರಿ ಅಂದಾವ ನೋಡಿರಿ

ಸೆಪ್ಟೆಂಬರ್ 16 ಬುಧವಾರದಂದು ಗೌರಿ ತನ್ನ ಮನೆಗೆ ಹೋಗಲು ಒಡವೆ ವೈಡೂರ್ಯ ಧರಿಸಿ ಹೊರಡಲು ತಯಾರಾಗಿದ್ದಾಳೆ.

ನೂರಾರು ಗಣಪನ ಸೌಂದರ್ಯ

ನೂರಾರು ಗಣಪನ ಸೌಂದರ್ಯ

ಗಣಪ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇದು ಪಿಕ್ಚರ್ ಎಫೆಕ್ಟ್ ಅಲ್ಲ. ಶೆಡ್ ನಲ್ಲಿ ಜೋಡಿಸಿಟ್ಟ ಗಣಪ ಕ್ಯಾಮಾರದ ಕಣ್ಣಿಗೆ ಕಂಡಿದ್ದು ಹೀಗೆ.

ಗೌರಿ ಗಣೇಶನ ವಿಹಂಗಮ ನೋಟ

ಗೌರಿ ಗಣೇಶನ ವಿಹಂಗಮ ನೋಟ

ಗೌರಿ ಗಣೇಶ ಮಾರಾಟ ಮಾಡುವ ವ್ಯಾಪಾರಿಯ ಚೀಲದ ಚಪ್ಪರದ ನಡುವೆ ಸಿಂಗರಾದಿಂದ ಗೌರಿ ವಿನಾಯಕನ ವಿಹಂಗಮ ನೋಟವಿದು

English summary
Gowri and Ganesh festival celebration on September 16th and 17th. This photos tell about just for festival preperation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X