ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ 133 ಕೋಟಿ ರೂ. ನೀಡಿದ ಸರ್ಕಾರ

|
Google Oneindia Kannada News

ಬೆಂಗಳೂರು,ಜನವರಿ 28: ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ 133 ಕೋಟಿ ರೂ, ನೀಡಿದೆ.

ಬಿಬಿಎಂಪಿ ಮೂಲಕ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಕೊರೊನಾ ಸೋಂಕಿತರಿಗಾಗಿ ಸರ್ಕಾರವು ಹಣ ನೀಡಿದೆ. 2020ರ ಜೂನ್ 23ರಿಂದ 2021ರ ಜನವರಿ 13ರವರೆಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಹಣ ನೀಡಿದೆ.

ಬೆಂಗಳೂರಿನಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರೆಯುತ್ತೆ: ಆಯುಕ್ತಬೆಂಗಳೂರಿನಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರೆಯುತ್ತೆ: ಆಯುಕ್ತ

ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಎಂಬುವವರು ಈ ಮಾಹಿತಿ ಕೇಳಿದ್ದರು. ಜನವರಿ 15ಕ್ಕೆ ಬಿಬಿಎಂಪಿಯು ಪ್ರತಿಕ್ರಿಯೆ ನೀಡಿತ್ತು. ಬಿಬಿಎಂಪಿಯು 43,863 ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿತ್ತು.

ovt Paid Rs 133 Crore To Private Hospitals In Bengaluru For Treating BBMP Reffered Covid19 Patients

ಖಾಸಗಿ ಆಸ್ಪತ್ರೆಯು 202.2 ಕೋಟಿ ರೂ ಬಿಲ್ ಮಾಡಿತ್ತು, 31624 ಮಂದಿ ರೋಗಿಗಳ 133.2 ಕೋಟಿ ರೂ ಮೊತ್ತದ ಬಿಲ್ ಕ್ಲಿಯರ್ ಆಗಿದೆ. ಇನ್ನೂ 70 ಕೋಟಿಯಷ್ಟು ಹಣ ನೀಡುವುದು ಬಾಕಿ ಇದೆ, ಸರ್ಕಾರವು 200 ಕೋಟಿ ವೆಚ್ಚದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಬಹುದಿತ್ತು ಎಂದು ಮೂರ್ತಿ ಹೇಳಿದ್ದಾರೆ.

ಜೂನ್ 23 ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡುವಂತೆ ತಿಳಿಸಿತ್ತು. ಕೊರೊನಾ ಸೋಂಕು ಕಡಿಮೆಯಾದ ಬಳಿಕ, ಒಂದೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಹಾಸಿಗೆಗಳಲ್ಲಿ ರೋಗಿಗಳಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು ಎಂದು ಸರ್ಕಾರ ನವೆಂಬರ್‌ನಲ್ಲಿ ತಿಳಿಸಿತ್ತು.

English summary
The State government spent Rs133.2 crore on the treatment of Covid19 patients reffered by BBMP to private hospitals between June 23,2020 to January 13,2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X