ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಮುಷ್ಕರ ವಾಪಸ್: ಕೆಎಸ್ಸಾರ್ಟಿಸಿ ಸಂಚಾರ ಆರಂಭ

|
Google Oneindia Kannada News

ಬೆಂಗಳೂರು, ಡಿ. 13: ಧರಣಿ ನಿರತ ಸಾರಿಗೆ ನೌಕರರ ಜೊತೆ ಸರ್ಕಾರದ ಸಚಿವರ ಸಮೂಹ ನಡೆಸಿದ ಸಭೆ ಸಫಲವಾಗಿದೆ. ಭಾನುವಾರ ರಾತ್ರಿಯಿಂದಲೇ ಮುಷ್ಕರ ಹಿಂಪಡೆಯಲು ಯೂನಿಯನ್ ಮುಖಂಡರಿಂದ ನಿರ್ಧಾರ ಮಾಡಿದ್ದಾರೆ.

ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಸಫಲವಾಗಿದೆ. ಕಳೆದ ಮೂರು ದಿನಗಳಿಂದ ನಡೆದಿದ್ದ ಮುಷ್ಕರ ಅಂತ್ಯ ಕಂಡಿದೆ. ಭಾನುವಾರ ರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ಸಂಚಾರ ಆರಂಭವಾಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಹೇಳಿದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಷ್ಕರ ನಿರತ ಸಾರಿಗೆ ನೌಕರರ ಯೂನಿಯನ್ ಜೊತೆ ಮಾತುಕತೆ ನಡೆಸಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

Govt pacifies Union, KSRTC, BMTC Bus Strike called off

ಸಂಬಳ ಏರಿಕೆ, ಓಟಿ, ವರ್ಗಾವಣೆ, ಕಿರುಕುಳ ನಿವಾರಣೆ, ತರಬೇತಿ ಅವಧಿ ಏರಿಕೆ ಮುಂತಾದ ಭರವಸೆಯನ್ನು ಈಡೇರಿಸುವ ಭರವಸೆಯನ್ನು ನೀಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿಸಲು ಸಾಧ್ಯವಿಲ್ಲಎಂದು ಸಚಿವ ಆರ್ ಅಶೋಕ ಸ್ಪಷ್ಟನೆ ನೀಡಿದ್ದಾರೆ.

Recommended Video

ಕರ್ನಾಟಕ: ಉಲ್ಟಾ ಹೊಡೆದ ಸಾರಿಗೆ ನೌಕರರ ಸಂಘದ ಮುಖಂಡರು, ಮತ್ತೆ ಮುಷ್ಕರ ಮುಂದುವರೆಸುವುದಾಗಿ ಘೋಷಣೆ | Oneindia Kannada

6ನೇ ವೇತನ ಆಯೋಗ ಆಧಾರದ ಮೇಲೆ ವೇತನ ಪರಿಷ್ಕರಣೆಗೆ ಸಮಿತಿ ರಚನೆ, ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುತ್ತದೆ. ಕೋವಿಡ್ 19 ನಿಂದ ಮೃತಪಟ್ಟ ನೌಕಕರ ಕುಟುಂಬಕ್ಕೆ 30 ಲಕ್ಷ ರು ಪರಿಹಾರ ಧನ ನೀಡಲಾಗುತ್ತದೆ ಎಂದರು.

English summary
Bus Strike called off, KSRTC bus starts running from Sunday evening as R Ashoka led ministers team had successful meeting with workers union.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X